ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶ್ರೀಶೈಲ ಪಾದಯಾತ್ರೆ ಕೈಗೊಂಡ ಸಕಲ ಭಕ್ತರಿಗಾಗಿ ಮಹಾಲಿಂಗಪುರದ ಭಕ್ತರಿಂದ 19ನೇ ವರ್ಷದ ಮಹಾದಾಸೋಹಕ್ಕಾಗಿ ಪಟ್ಟಣದ ದಾನಿಗಳು, ಭಕ್ತರು ನೀಡಿದ ಸಜ್ಜಕ ರವಾ, ಅಕ್ಕಿ, ಬೆಲ್ಲ, ಬೆಳೆಕಾಳುಗಳು, ಕಾರ, ತರಕಾರಿ ಸೇರಿದಂತೆ ದಾಸೋಹಕ್ಕೆ ಬೇಕಾದ ಸಕಲ ಸಾಮಗ್ರಿಗಳನ್ನು ದಾನರೂಪದಲ್ಲಿ ನೀಡಿದ್ದಾರೆ. ಅವಶ್ಯಕ ಸಾಮಗ್ರಿಗಳನ್ನು ಸೇವಾ ಸಮಿತಿಯಿಂದಲೂ ಖರೀದಿಸಲಾಗಿದೆ. ಶ್ರೀಶೈಲಂ ಮಹಾಕ್ಷೇತ್ರದ ಛತ್ರಪತಿ ಶಿವಾಜಿ ಭವನದ ಹತ್ತಿರ ಇದೇ ಏಪ್ರಿಲ್ 4ರಿಂದ ಯುಗಾದಿ ಪಾಡ್ಯೆಯ ಏ.9ರವರೆಗೆ 5 ದಿನಗಳ ಕಾಲ ನಿರಂತರ ಮಹಾಸೋಹ ಜರುಗಲಿದೆ. ಈ ಐದು ದಿನಗಳಲ್ಲಿ ಶ್ರೀಶೈಲ ಕ್ಷೇತ್ರಕ್ಕೆ ಬರುವ ಪಾದಯಾತ್ರಿಕರು, ಭಕ್ತರು ಪ್ರಸಾದ ಸ್ವೀಕರಿಸಬೇಕೆಂದು ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯ ಸೇವಾ ಸಮಿತಿ ಅಧ್ಯಕ್ಷ ವಿಜುಗೌಡ ಪಾಟೀಲ ತಿಳಿಸಿದರು.
ಮಹಾಲೀಂಗೇಶ್ವರ ದೇವಸ್ಥಾನದ ಈಶ್ವರ ಮಠಪತಿ, ಪುರಸಭೆ ಸದಸ್ಯರು, ಪುರದ ಹಿರಿಯರಾದ ಯಲ್ಲನಗೌಡ ಪಾಟೀಲ ಆಹಾರ ಸಾಮಗ್ರಿಯ ವಾಹನಕ್ಕೆ ಪೂಜೆ ಸಲ್ಲಿಸಿ ಅನ್ನದಾಸೋಹ ಸೇವಾ ಸಮಿತಿಯವರನ್ನು ಬೀಳ್ಕೊಟ್ಟರು.ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರೆಯ ಸೇವಾ ಸಮಿತಿ ಉಪಾಧ್ಯಕ್ಷ ವಿಷ್ಣುಗೌಡ ಪಾಟೀಲ, ಕಾರ್ಯದರ್ಶಿ ಶಂಕರ ಮುರಗೋಡ, ಖಜಾಂಚಿ ಸಿದ್ರಾಮ ದಲಾಲ, ಸದಸ್ಯರಾದ ವಿಜಯ ಕಂಬಾರ, ಶಿವಾನಂದ ಮಠಪತಿ, ಮಹಾಲಿಂಗ ಗುರವ, ವೀರಭದ್ರಯ್ಯ ಮಠಪತಿ, ಮಹಾಲಿಂಗಪ್ಪ ಪರೀಟ, ಯಲ್ಲಪ್ಪ ಹಟ್ಟಿ, ಶೇಖರ ವಗ್ಗರ, ಸದ್ಭಕ್ತರಾದ ಮಹಾಲಿಂಗ ಕೋಟಿ, ಗುರುಲಿಂಗಯ್ಯಾ ಮಠಪತಿ, ರವಿ ಮುಂಡಗನೂರ, ರಮೇಶ ಸಬಕಾಳೆ, ಶಿವುಗೌಡ ಪಾಟೀಲ, ಕೇದಾರಿ ಬಾಳಿಕಾಯಿ, ಆನಂದ ಕಾಗಿ ಸೇರಿದಂತೆ 25ಕ್ಕೂ ಅಧಿಕ ಸದ್ಭಕ್ತರು ಮಹಾದಾಸೋಹದಲ್ಲಿ ಸೇವೆ ಸಲ್ಲಿಸುವದಕ್ಕಾಗಿ ಶ್ರೀಶೈಲಕ್ಕೆ ತೆರಳಿದರು.
19ನೇ ವರ್ಷದ ದಾಸೋಹ