ಕನ್ನಡಪ್ರಭ ವಾರ್ತೆ ಕಾಗವಾಡ
ನೆರೆ, ಬರ, ಹವಾಮಾನ ವೈಪರಿತ್ಯದಿಂದಾಗಿ ಸರಿಯಾಗಿ ಬೆಳೆ ಕೈಗೂಡದೆ ಸಂಕಷ್ಟದಲ್ಲಿರುವ ಅನ್ನದಾತನಿಗೆ ನೀರು, ಪರಿಸರ ಸಂರಕ್ಷಣೆ, ಪ್ರತಿಕೂಲ ಪರಿಸ್ಥಿತಿಯಲ್ಲಿ ಬೆಳೆ ರಕ್ಷಣೆ ತಂತ್ರಗಾರಿಕೆ ಹೇಳಿಕೊಡಲು ಐನಾಪುರ ಪಟ್ಟಣದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆಯಲ್ಲಿ ಕೃಷಿ ಮೇಳ ಸಿದ್ದಗೊಳ್ಳುತ್ತಿದೆ ಎಂದು ಮೇಳದ ರೂವಾರಿ ಗುರುರಾಜ ಮಡಿವಾಳರ ತಿಳಿಸಿದರು.ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಜ.15 ರಿಂದ ರಿಂದ 19 ರವರೆಗೆ ನಡೆಯಲಿರುವ 53ನೇ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ 5 ದಿನಗಳ ಕಾಲ ಕೃಷಿ ಮೇಳ ಜರುಗಲಿದೆ. 20 ಎಕರೆ ಕ್ಷೇತ್ರ ಹೊಂದಿರುವ ಐನಾಪುರದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲಾ ಆವರಣದಲ್ಲಿ ಸ್ಟಾಲ್‌ಗಳನ್ನು ಹಾಕಲು ಭೂಮಿ ಪೂಜೆ ನೆರವೇರಿಸಿ ಸ್ಟಾಲ್‌ಗಳ ಕಾರ್ಯಗಳ ಪ್ರಾರಂಭಗೊಂಡಿದೆ. ಈಗಾಗಲೇ ವಿವಿಧ ಕಂಪನಿಗಳ 100ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಬುಕ್ ಮಾಡಿದ್ದಾರೆ.ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಗೋಕಾಕ, ಬಾಗಲಕೊಟ, ಮಹಾರಾಷ್ಟ್ರದ ಪುಣೆ, ಕೊಲ್ಹಾಪೂರ, ಸಾಂಗಲಿ, ಇಚಲಕರಂಜಿ ಸೇರಿ ವಿವಿಧ ಕಡೆಗಳಿಂದ ಹಲವಾರು ಕಂಪನಿಗಳ ಮಾಲೀಕರು ಸ್ಟಾಲ್‌ಗಳನ್ನು ಬುಕ್ ಮಾಡಿದ್ದಾರೆ. ಜ.13ಕ್ಕೆ ಸ್ಟಾಲ್‌ಗಳು ತಯಾರಾಗಲಿವೆ ಎಂದರು. ಕೃಷಿ ಮೇಳ ಯಶಸ್ವಿಗೆ ಮಲ್ಲಿಕಾರ್ಜುನ ಕೋಲಾರ, ಬಾಹುಬಲಿ ಕುಸನಾಳೆ, ಸಂಜಯ ಕುಸನಾಳೆ, ಅಣ್ಣಾಸಾಬ ಡೂಗನವರ, ಮಂಜುನಾಥ ಕುಚನೂರೆ, ವಿಶ್ವನಾಥ ನಾಮದಾರ, ಅನೀಲ ಸತ್ತಿ, ಚಿದಾನಂದ ಕೋರ್ಬು, ಗುರು ಕಾಲತಿಪ್ಪಿ, ಸಿದ್ದು ಅಡಿಸೇರಿ, ಪ್ರದೀಪ ಲಿಂಬಿಕಾಯಿ, ಅಮೀತ ಡೂಗನವರ, ವಿಕಾಸ ಜಾಧವ, ರಾಹುಲ ಬಣಜವಾಡ, ಶೀತಲ ಬಾಲೋಜಿ, ಪ್ರದೀಪ ಪಾಟೀಲ, ಅಶೋಕ ಭೋಸಗಿ, ಮಹೇಶ ತೆರದಾಳೆ, ಸಂಜಯ ಶಿರಹಟ್ಟಿ, ಸದಾಶಿವ ಕೆರಿಕಾಯಿ, ರಾಮು ಸವದತ್ತಿ, ಶಂಕರ ಕೋರ್ಬು, ಸಿದ್ದು ಅಡಿಸೇರಿ, ಸೇರಿದಂತೆ ಹಲವಾರು ಯುವಕರು ಟೊಂಕುಕಟ್ಟಿ ನಿಂತಿದ್ದಾರೆ ಎಂದು ತಿಳಿಸಿದರು .