‘ವಿಧವೆ’ಯರಿಗೆ ಅಕ್ಷರ ಕಲಿಸಿದ ‘ಅಕ್ಷರ ಅವ್ವ’ ಸಾವಿತ್ರಿಬಾಯಿ ಫುಲೆ: ಡಿ.ಕೆ.ಅಂಕಯ್ಯ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ಸಾವಿತ್ರಿಬಾಯಿ ಫುಲೆ ಭಾರತದ ಪ್ರಸಿದ್ಧ ಸಮಾಜ ಸುಧಾರಕ, ಶಿಕ್ಷಣತಜ್ಞ ಮತ್ತು ಕವಿ. ವಿಧವೆಯರಿಗೆ ಅಕ್ಷರ ಕಲಿಸುವ ಜ್ಞಾನಾರ್ಜನೆಗೆ ಮುಂದಾಗಿದ್ದರು. ವಿಧವೆಯರನ್ನು ಮದುವೆಯಾಗುವಂತೆ ಪ್ರಯತ್ನಿಸಿದ್ದರು. ಸಮಾಜವನ್ನು ಗಮನಾರ್ಹವಾಗಿ ಬದಲಾಯಿಸಲು ಶ್ರಮಿಸಿದವರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿಯಾಗಿ ವಿಧವೆಯರಿಗೆ ಅಕ್ಷರ ಕಲಿಸುವ ಜ್ಞಾನಾರ್ಜನೆಗೆ ಮುಂದಾಗಿದ್ದರು ಎಂದು ದಸಂಸ ಮೈಸೂರು ವಿಭಾಗೀಯ ಸಂಚಾಲಕ ಡಿ.ಕೆ.ಅಂಕಯ್ಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ 193ನೇ ಜನ್ಮದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಸಮಕಾಲೀನ ಭಾರತದಲ್ಲಿ ಪ್ರವರ್ತಕ ಮಹಿಳೆಯಾಗಿದ್ದರು. ವಿಧವೆಯರನ್ನು ಮದುವೆಯಾಗುವಂತೆ ಪ್ರಯತ್ನಿಸಿದ್ದರು. ಸಮಾಜವನ್ನು ಗಮನಾರ್ಹವಾಗಿ ಬದಲಾಯಿಸಲು ಶ್ರಮಿಸಿದವರು ಎಂದರು.

ವಿಧವೆಯರನ್ನು ಮರು ಮದುವೆ ಮಾಡುವ ಆಕೆಯ ನಿರ್ಧಾರವು ಅವರ ಬುದ್ಧಿವಂತ ಕ್ರಮಗಳಲ್ಲಿ ಒಂದಾಗಿದೆ. ಅವರು ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಮುಂದಾಗಿದ್ದರು. ಮಹಿಳಾ ಶಿಕ್ಷಕರ ದಿನವನ್ನು ಜನವರಿ 3 ರಂದು ರಾಷ್ಟ್ರವ್ಯಾಪಿ ಆಚರಿಸಲಾಗುತ್ತದೆ ಎಂದರು.

ಸಾವಿತ್ರಿಬಾಯಿ ಫುಲೆ ಭಾರತದ ಪ್ರಸಿದ್ಧ ಸಮಾಜ ಸುಧಾರಕ, ಶಿಕ್ಷಣತಜ್ಞ ಮತ್ತು ಕವಿ. ಅವರು 19ನೇ ಶತಮಾನದಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರಿದರು. ಅವರ ಕಾಲದ ಕೆಲವೇ ಅಕ್ಷರಸ್ಥ ಮಹಿಳೆಯರಲ್ಲಿ ಒಬ್ಬರಾದ ಸಾವಿತ್ರಿಬಾಯಿ ಅವರ ಪತಿ ಜ್ಯೋತಿರಾವ್ ಫುಲೆ ಅವರೊಂದಿಗೆ ಪುಣೆಯ ಭಿಡೆ ವಾಡಾದಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.

ಬಾಲ ವಿಧವೆಯರಿಗೆ ಶಿಕ್ಷಣ ನೀಡಲು ಮತ್ತು ವಿಮೋಚನೆಗೊಳಿಸಲು ಶ್ರಮಿಸಿದರು. ವಿಧವಾ ಪುನರ್ವಿವಾಹವನ್ನು ಬೆಂಬಲಿಸಿದರು. ಬಾಲ್ಯ ವಿವಾಹ, ಅಸ್ಪೃಶ್ಯತೆಯನ್ನು ಸಕ್ರಿಯವಾಗಿ ವಿರೋಧಿಸಿದರು. ಮತ್ತು ಜಾತಿ ಮತ್ತು ಲಿಂಗ ಆಧಾರಿತ ಪೂರ್ವಾಗ್ರಹವನ್ನು ತೊಡೆದು ಹಾಕಲು ಕೆಲಸ ಮಾಡಿದರು ಎಂದರು.

ಈ ವೇಳೆ ಸಮಿತಿ ತಾಲೂಕು ಸಂಚಾಲಕ ಬಳೇಅತ್ತಿಗುಪ್ಪೆ ಬಿ.ಕೆ.ರವಿ, ತಾಲೂಕು ಸಂಘಟನಾ ಸಂಚಾಲಕರಾದ ಬಸ್ತಿಹಳ್ಳಿ ಯೋಗೇಶ್, ಶಂಕನಹಳ್ಳಿ ವರದರಾಜು, ಡಾಮಡಹಳ್ಳಿ ಜಯರಾಂ, ಹೋಬಳಿ ಸಂಚಾಲಕರಾದ ಶಂಕನಹಳ್ಳಿ ಸತೀಶ್, ಹಿರೇಮರಳಿ ರಾಮಚಂದ್ರು, ಹೊಸಕನ್ನಂಬಾಡಿ ನಿಂಗಯ್ಯ, ಎಲೆಕೆರೆ ಮಹದೇವು, ತಾಲೂಕು ಸಂಚಾಲಕ ಪುಟ್ಟಸ್ವಾಮಿ ನಾಗಮಂಗಲ ಇತರರಿದ್ದರು.‘ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸಾವಿತ್ರಿಬಾಯಿ ಫುಲೆ ಒತ್ತು’

ಭಾರತೀನಗರ: ಸಾವಿತ್ರಿ ಬಾಯಿ ಫುಲೆ ಅವರು ಬಾಲ ವಿಧವೆಯರಿಗೆ ಶಿಕ್ಷಣ ನೀಡಲು ಮತ್ತು ವಿಮೋಚನೆಗೊಳಿಸಲು ಶ್ರಮಿಸಿದ್ದರು ಎಂದು ಮುಖ್ಯಶಿಕ್ಷಕಿ ಎಚ್.ಪಿ.ಪ್ರತಿಮಾ ತಿಳಿಸಿದರು.

ಭಾರತೀ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾರತದ ಮೊಟ್ಟಮೊದಲ ಶಿಕ್ಷಕಿ, ಅಕ್ಷರಮಾತೆ, ಸಾವಿತ್ರಿಬಾಯಿ ಫುಲೆ 193ನೇ ಜನ್ಮ ದಿನಾಚರಣೆಯಲ್ಲಿ ಭಾವಚಿತ್ರಕ್ಕೆ ಪೂಜೆಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ ಸಮಾಜ ಸುಧಾರಕಿ ಎಂದು ಬಣ್ಣಿಸಿದರು.ಸಾವಿತ್ರಿ ಬಾಯಿ ಫುಲೆ19 ನೇ ಶತಮಾನದಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣದ ಮೇಲೆ ಮಹತ್ತರ ಪ್ರಭಾವ ಬೀರಿದರು. ಪತಿ ಜ್ಯೋತಿರಾವ್‌ ಫುಲೆ ಅವರೊಂದಿಗೆ ಪುಣೆಯ ಬಿಡೆವಾಡದಲ್ಲಿ ಮೊದಲ ಬಾಲಕಿಯರ ಶಾಲೆ ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.ಸಮಕಾಲಿನ ಭಾರತದಲ್ಲಿ ಪ್ರವರ್ತಕ ಮಹಿಳೆಯಾಗಿದ್ದರು. ವಿಧವೆಯರನ್ನು ಮರು ಮದುವೆಯಾಗುವ ಪ್ರಯತ್ನ ಮಾಡಿದರು. ಅವರು ನಮ್ಮ ಸಮಾಜವನ್ನು ಗಮನಾರ್ಹವಾಗಿ ಬದಲಾಯಿಸಿದವರು. ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಕೆಲಸ ಮಾಡಿದರು ಎಂದರು.ಈ ವೇಳೆ ಶಿಕ್ಷಕರಾದ ಶೋಭಾ, ನಯನ, ರೇಖಾ, ಸುರಭಿ, ನಂದ, ಸಿಂಧೂ ಸೇರಿದಂತೆ ಹಲವರಿದ್ದರು.

Share this article