ಸಂವಿಧಾನಕ್ಕೆ ಬದಲಾಯಿಸುವುದು ಕೇವಲ ಭ್ರಮೆ

KannadaprabhaNewsNetwork | Published : Jan 30, 2024 2:01 AM

ಸಾರಾಂಶ

ಅಂಬೇಡ್ಕರ್‌ ಹೇಳುವಂತೆ ಶಿಕ್ಷಣ, ಸಂಘಟನೆ, ಹೋರಾಟ ಮೂರು ಅಂಶಗಳನ್ನು ಸಂಘಟನೆ ಪದಾಧಿಕಾರಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಅಥಣಿಸಂವಿಧಾನಕ್ಕೆ ತಿದ್ದುಪಡಿ ಮಾಡುತ್ತೇವೆ ಎನ್ನುವವರು ಭ್ರಮೆಯಲ್ಲಿದ್ದಾರೆ. ಬಾಯಿ ಚಪಲಿಗೆ ಕೆಲವರು ಸಂವಿಧಾನಕ್ಕೆ ತಿದ್ದುಪಡಿ ತರುತ್ತೇವೆ ಎಂದು ಹೇಳುತ್ತಾರೆ. ಅದು ಅಸಾಧ್ಯದ ಕೆಲಸ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಆದರ್ಶ ನಗರದ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಈಚೆಗೆ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಭಾರತೀಯ ಸಂವಿಧಾನದ ಕುರಿತ ಲಿಖಿತ ರಸಪ್ರಶ್ನೆ ಪ್ರಬಂಧ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್‌ ಹೇಳುವಂತೆ ಶಿಕ್ಷಣ, ಸಂಘಟನೆ, ಹೋರಾಟ ಮೂರು ಅಂಶಗಳನ್ನು ಸಂಘಟನೆ ಪದಾಧಿಕಾರಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಬೀದರ ಜಿಲ್ಲೆಯ ಹಾಲಹಳ್ಳಿ ಬುದ್ದ ವಿಹಾರದ ಭಂತೇಜಿ ಧಮ್ಮದೀಪ ಸ್ವಾಮೀಜಿ, ಪುರಸಭೆ ಸದಸ್ಯ ರಾವಸಾಬ ಐಹೊಳೆ, ಮಾಜಿ ಜಿ.ಪಂ.ಸದಸ್ಯ ವಿನಾಯಕ ಬಾಗಡಿ, ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ ತಳವಾರ, ಎಂ.ಎಂ. ಖಾಂಡೆಕರ, ನ್ಯಾಯವಾದಿ ಮಿತೇಶ ಪಟ್ಟಣ, ಎ.ಎಂ. ಖೊಬ್ರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಯಾದವಾಡ, ಸಂಜಯ ತಳವಳಕರ, ರವಿ ಕಾಂಬಳೆ, ಶ್ರೀಕಾಂತ ಅಲಗೂರ, ಡಿಎಸ್‌ಎಸ್ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಇದ್ದರು. ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಕಾಲೇಜು ವಿಭಾಗದಲ್ಲಿ ಪ್ರಥಮ ದ್ವಿತೀಯ, ತೃತಿಯ ಸ್ಥಾನಗಳಿಗೆ ತಲಾ ₹25 ಸಾವಿರ, ₹15 ಸಾವಿರ, ₹12 ಸಾವಿರ ₹5 ನೂರು ರೂ.ದಂತೆ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು.

Share this article