ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಎಂಜಿನಿಯರಿಂಗ್ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲಿ ಎಂಜಿನಿಯರಿಂಗ್ ಕ್ಷೇತ್ರಕ್ಕೆ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ, ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕು ಎಂದು ಇಆರ್ ಎನ್ಇಟಿ ರೀಜನಲ್ ಸೆಂಟರ್ ಹಾಗೂ ಐಐಟಿ ಮದರಾಸ್ ರೀಸರ್ಚ್ ಪಾರ್ಕ್ ನ ವಿಜ್ಞಾನಿ ಡಾ. ಎ ಪಾವೆಂಥನ್ ತಿಳಿಸಿದರು.ನಗರ ಹೊರವಲಯದ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ತಂತ್ರಜ್ಞಾನದಲ್ಲಿ ಪ್ರಗತಿಗಾಗಿ ಮೂರುದಿನಗಳ ಐಇಇಇ 5ನೇ ಜಾಗತಿಕ ಸಮ್ಮೇಳನ 5ಜಿ ಕ್ಯಾಟ್-2024 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ತಂತ್ರಜ್ಞಾನದಲ್ಲಿ ಪ್ರಗತಿ5ಜಿ ಕ್ಯಾಟ್-2024 ರ ವಿಷಯವು ತಂತ್ರಜ್ಞಾನದಲ್ಲಿ ಪ್ರಗತಿಯಾಗಿದೆ. ಸಂಶೋಧಕರು ಮತ್ತು ಎಂಜಿನಿಯರ್‌ಗಳನ್ನು ಅಕಾಡೆಮಿ ಮತ್ತು ಉದ್ಯಮದಿಂದ ಒಟ್ಟುಗೂಡಿಸಲಾಗುತ್ತದೆ. ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉದಯೋನ್ಮುಖ ಸಮಸ್ಯೆಗಳ ಕುರಿತು ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ಮುಕ್ತವಾಗಿ ಬಹಿರಂಗಪಡಿಸುತ್ತಾರೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಪುಣೆಯ ಟಿಪಿಸಿ ಅಧ್ಯಕ್ಷ ಹಾಗೂ ಎಸ್ ಜಿಐ ಯೋಜನಾ ನಿರ್ದೇಶಕ ಚಾಣಕ್ಯ ಕುಮಾರ್ ಝಾ ಮಾತನಾಡಿ, 5ಜಿ ಕ್ಯಾಟ್-2024 ರ ಜಾಗತಿಕ ಸಮ್ಮೇಳನಕ್ಕೆ ಭಾರತದ 152 ಯೂನಿರ್ವಸಿಟಿಗಳಿಂದ ಮತ್ತ ವಿಶ್ವದ 22 ದೇಶಗಳಿಂದ 2180 ಪ್ರಬಂಧಗಳು ಬಂದಿದ್ದು, ಅವುಗಳಲ್ಲಿ 250 ಮಾತ್ರ ಈ ಸಮ್ಮೇಳನದಲ್ಲಿ ಮಂಡಿಸುತ್ತಿದ್ದೇವೆ. ಈ ಸಮ್ಮೇಳನ ಜಾಗತಿಕವಾಗಿ ಹೆಚ್ಚು ವಿಶ್ವಸಾರ್ಹತೆ ಹೊಂದಿದೆ ಎಂದು ಸಂತಸ ವ್ಯೆಕ್ತಪಡಿಸಿದರು.ಜೀವನ ಸುಧಾರಣೆಗೆ ತಂತ್ರಜ್ಞಾನ
ನಾಗಾರ್ಜುನ ಕಾಲೇಜಿನ ನಿರ್ದೇಶಕ ಡಾ. ಎಸ್ ಜಿ ಗೋಪಾಲಕೃಷ್ಣ ಮಾತನಾಡಿ, "ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಿ, ಸಾಮಾನ್ಯ ಜನರ ಜೀವನವನ್ನು ಸುಧಾರಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವ ನಮ್ಮ ಸಾಮೂಹಿಕ ಸಾಮರ್ಥ್ಯದಲ್ಲಿ ಮಾನವೀಯತೆಯ ಭವಿಷ್ಯವಿದೆ ಎಂದು ತಿಳಿಸಿದರು.ಕಾಲೇಜಿ ಪ್ರಾಂಶುಪಾಲ ಡಾ. ಬಿ.ವಿ.ರವಿಶಂಕರ್ ಮಾತನಾಡಿ, ಆಧುನಿಕ ತಂತ್ರಜ್ಞಾನದಲ್ಲಿ ಭಾರತದ ಸಾಮರ್ಥ್ಯ ಮತ್ತು ಹಿಡಿತವನ್ನು ಇಡೀ ಜಗತ್ತು ಗುರುತಿಸಲು ಪ್ರಾರಂಭಿಸಿದೆ. ಇಂದು, ವಿಜ್ಞಾನ ಮತ್ತು ತಂತ್ರಜ್ಞಾನವು ದೂರಸಂಪರ್ಕ, ಕೃಷಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮತ್ತಿತರ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ ಎಂದರು.ಕಾರ್ಯಕ್ರಮದಲ್ಲಿ ಎನ್‌ಸಿಇಟಿ ಪ್ರಾಂಶುಪಾಲ ಡಾ.ಅಜಯ್ ಕುಮಾರ್ ದ್ವಿವೇದಿ, ಉಪ ಪಾಂಶುಪಾಲ ಹಾಗೂ ಇಸಿಇ ವಿಭಾಗದ ಮುಖ್ಯಸ್ಥ ಡಾ.ಕೆ.ಎನ್.ನಾಗೇಶ್, ಪ್ರಾದ್ಯಾಪಕರಾದ ಡಾ.ಸಿ.ವಿ.ನಂದಕಿಶೋರ್, ಡಾ. ಸಂಜೀವ್ ಕುಮಾರ್.ಎಂ. ಹತ್ತೂರೆ,ಡಾ.ಕೆ.ಪಂಕಜಾ.ಕೆ.ವಿ.ಭಾರ್ಗವಿ, ವಿದ್ಯಾರ್ಥಿಗಳು ಮತ್ತಿತರರು ಇದ್ದರು.