‘ಜಿಲ್ಲಾ ಮಟ್ಟದ ಉದ್ಯೋಗ ಮೇಳ’

KannadaprabhaNewsNetwork |  
Published : Aug 24, 2024, 01:25 AM IST
೨೨ಕೆಎಲ್‌ಆರ್-೪ಕೋಲಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆಯನ್ನು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರೂ ಆದ ಅಕ್ರಂ ಪಾಷಾ ವಹಿಸಿದ್ದರು. | Kannada Prabha

ಸಾರಾಂಶ

ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು. ಕೌಶಲ್ಯ ಅಭಿವೃದ್ದಿ ಯೋಜನೆಗಳ ಯಶಸ್ವಿ ಅನುಷ್ಥಾನಕ್ಕೆ ಅಂತರ್ ಇಲಾಖೆಗಳ ನಡುವೆ ಸಮನ್ವಯ ಅಗತ್ಯ. ಜಿಲ್ಲೆಯ ಕೈಗಾರಿಕೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲದ ಸರ್ವೇಕ್ಷಣೆ ಮಾಡುವ ಅಗತ್ಯವಿದೆ

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲು ಪೂರ್ವಭಾವಿ ತಯಾರಿ ನಡೆಸಲು ಕಾರ್ಯಕ್ರಮ ಕೈಗೊಳ್ಳುವಂತೆ ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆ ಜಾರಿ ಸಂಬಂಧ ಜಾರಿಗೊಳಿಸಲಾದ ಎಲ್ಲ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಪ್ರಗತಿಯನ್ನು ರಾಜ್ಯದ ಪ್ರಗತಿಯೊಂದಿಗೆ ಹೋಲಿಸಿ ತುಲಾನಾತ್ಮಕ ವರದಿಯನ್ನು ಜಿಲ್ಲಾ ಕೌಶಲ ಮಿಷನ್ ಸಭೆಯಲ್ಲಿ ಮಂಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕೌಶಲ ಮಿಷನ್ ಅಧ್ಯಕ್ಷ ಅಕ್ರಂ ಪಾಷ ಸೂಚಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲಾ ಕೌಶಲ್ಯ ಸಮಿತಿ ಸದಸ್ಯರೊಂದಿಗೆ ಇಲಾಖೆಯ ಯೋಜನಾ ನಿರೂಪಣೆ, ಉಸ್ತುವಾರಿ ಹಾಗೂ ಅನುಷ್ಥಾನ ಕಾರ್ಯಗಳನ್ನು ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.ಇಲಾಖಾ ಸಮನ್ವಯ ಅಗತ್ಯಇಲಾಖೆಗಳಲ್ಲಿ ಸಮನ್ವಯ ಅಗತ್ಯ

ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಚುರುಕುಗೊಳಿಸಲು ಹಲವು ಸಲಹೆ ಸೂಚನೆ ನೀಡಿದ ಅವರು, ಕೌಶಲ್ಯ ಅಭಿವೃದ್ದಿ ಯೋಜನೆಗಳ ಯಶಸ್ವಿ ಅನುಷ್ಥಾನಕ್ಕೆ ಅಂತರ್ ಇಲಾಖೆಗಳ ನಡುವೆ ಸಮನ್ವಯ ಅಗತ್ಯ. ಕೈಗಾರಿಕಾ ಉಪ ಸಮಿತಿ ಅಧ್ಯಕ್ಷರಾದ ಜಂಟಿ ನಿರ್ದೇಶಕರಿಗೆ ಜಿಲ್ಲೆಯ ಕೈಗಾರಿಕೆಗಳಿಗೆ ಅಗತ್ಯವಾದ ಮಾನವ ಸಂಪನ್ಮೂಲದ ಸರ್ವೇಕ್ಷಣೆ ಮಾಡುವಂತೆ ಹಾಗೂ ಜಿ.ಪಿ.ಡಿ.ಪಿ ಯೋಜನೆ ತಯಾರಿಸುವಾಗ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಸೇರ್ಪಡೆಗೊಳಿಸುವಂತೆ ಸೂಚಿಸಿದರು.

ಕೌಶಲ ತರಬೇತಿ ಪಟ್ಟಿ ಮಾಡಿ

ಕೃಷಿ ಸಂಬಂಧಿತ ವಿವಿಧ ಕೌಶಲ ತರಬೇತಿಗಳನ್ನು ಪಟ್ಟಿ ಮಾಡಿ ಅನುಷ್ಥಾನ ಮಾಡುವಂತೆ ಕೃಷಿ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸಮಾಜ ಕಲ್ಯಾಣ, ಹಿದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಇಲಾಖಾ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೌಶಲ ಹಾಗೂ ಸ್ಪೋಕನ್ ಇಂಗ್ಲಿಷ್ ತರಬೇತಿ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿದರು. ಸಭೆಯಲ್ಲಿ ಸಂಬಂಧಿಸಿದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿ.ಎಂ.ಕೆ.ಕೆ.ವೈ ಹಾಗೂ ಪಿ.ಎಂ.ಕೆ.ವಿ.ವೈ ಕೇಂದ್ರಗಳ ಮುಖ್ಯಸ್ಧರು ಉಪಸ್ಧಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ