ನೀರಿಗಾಗಿ ರೈತರು ದಂಗೆ ಏಳಲಿದ್ದಾರೆ

KannadaprabhaNewsNetwork |  
Published : Sep 17, 2025, 01:05 AM IST
 ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಕೆಲಸ ಮಾಡಲು ಬಿಡುವುದಿಲ್ಲ ಎಂದು ರೈತರನ್ನು ಹಾಗೂ ಸಾರ್ವಜನಿಕರ  ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಎಸ್ .ಡಿ. ದಿಲೀಪ್ ಕುಮಾರ್ | Kannada Prabha

ಸಾರಾಂಶ

ನೀರಿಗಾಗಿ ರಾಜಕಾರಣ ಮಾಡದೆ ರೈತರು ಒಗ್ಗೂಡಿ ಬರಲಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ದಂಗೆ ಏಳುತ್ತಾರೆ. ಕಾಮಗಾರಿ ಮಾಡಲು ಬಿಡುವುದಿಲ್ಲ. ಡಿಕೆಶಿ ಅವರ ಗೂಂಡಾ ವರ್ತನೆಗೆ ಯಾರು ಜಗ್ಗಲ್ಲ ಎಂದು ಬಿಜೆಪಿ ಮುಖಂಡ ಎಸ್. ಡಿ.ದಿಲೀಪ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ನೀರಿಗಾಗಿ ರಾಜಕಾರಣ ಮಾಡದೆ ರೈತರು ಒಗ್ಗೂಡಿ ಬರಲಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ದಂಗೆ ಏಳುತ್ತಾರೆ. ಕಾಮಗಾರಿ ಮಾಡಲು ಬಿಡುವುದಿಲ್ಲ. ಡಿಕೆಶಿ ಅವರ ಗೂಂಡಾ ವರ್ತನೆಗೆ ಯಾರು ಜಗ್ಗಲ್ಲ ಎಂದು ಬಿಜೆಪಿ ಮುಖಂಡ ಎಸ್. ಡಿ.ದಿಲೀಪ್ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಕೆಲಸ ಮಾಡಲು ಬಿಡುವುದಿಲ್ಲ ಯಾವ ರಾಜಕೀಯ ಪಕ್ಷದವರು ಬರಲಿ ಬಿಡಲಿ ನಮ್ಮ ಮೇಲೆ ನೂರು ಕೇಸ್ ಹಾಕಿದರೂ ಹೆದರುವುದಿಲ್ಲ ಎಂದು ಕುಮಾರ್ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಗೆ ಎಚ್ಚರಿಕೆ ನೀಡಿದರು. ಕಾನೂನಾತ್ಮಕ ಹಾಗೂ ರೈತರ ದಂಗೆ ಎರಡೂ ಹೋರಾಟ ನಡೆಸಲಿದ್ದೇವೆ. ಜನರ ದಂಗೆ ಎದ್ದರೆ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಶಾಸಕರು ತಾಲೂಕಿನ ರೈತರನ್ನು ಅಡವಿಟ್ಟು ಬಾಯಿಗೆ ಬೆಲ್ಲ ಹಾಕಿಕೊಂಡು ತೆಪ್ಪಗೆ ಕುಳಿತಿದ್ದಾರೆ ಎಂದು ವ್ಯಂಗ್ಯ ಮಾಡಿದರು. ಸಭೆಯ ಆರಂಭದಲ್ಲೇ ಸಂಸದರು ಕೇಂದ್ರ ಸಚಿವ ಸೋಮಣ್ಣ ಅವರ ಮೌನ ಬಗ್ಗೆ ತೀವ್ರ ಆಕ್ಷೇಪ ಸಭೆಯಲ್ಲಿ ಕಂಡು ಬಂತು. ಅತಿ ಹೆಚ್ಚು ಮತ ನೀಡಿದ ಜಿಲ್ಲೆಯ ಜನತೆ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ಕೆನಾಲ್ ಕಾಮಗಾರಿ ಮುಂದುವರೆಸಲು ತೆರೆಮರೆಯ ಒಪ್ಪಿಗೆ ನೀಡಿದ್ದಾರೆ ಎಂದು ಕೆಲ ಹೋರಾಟಗಾರರು ನೇರ ಆರೋಪ ಮಾಡಿದರು. ಶಿವಕುಮಾರ್ ಹೇಳಿಕೆಗೆ ಮೊದಲು ಸೋಮಣ್ಣ ಅವರು ಹಾಗೂ ಬಿಜೆಪಿ ಜೆಡಿಎಸ್ ಶಾಸಕರು ಪ್ರತ್ಯುತ್ತರ ನೀಡಬೇಕಿತ್ತು ಎಂದು ಕಿಡಿಕಾರಿದರು.ನಂತರ ಸಭೆಯನ್ನುದ್ದೇಶಿಸಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕೇಂದ್ರ ಸಚಿವರಿಗೆ ಲೋಕಸಭಾ ಸದಸ್ಯರಾಗಿ ಹೋರಾಟಕ್ಕೆ ಬರಲು ಆಹ್ವಾನ ನೀಡೋಣ. ಯಾರು ಬರಲಿ ಬಿಡಲಿ ನಾನಂತೂ ದಿಟ್ಟ ಹೋರಾಟಕ್ಕೆ ರೈತರ ಜೊತೆ ಇರ್ತೇನೆ. ಶಿವಕುಮಾರ್ ಏನೂ ಮಾಡಲು ಸಾಧ್ಯವಿಲ್ಲ. ಕೆನಾಲ್ ಕಾಮಗಾರಿ ಮಾಡಲು ಎಂದಿಗೂ ಬಿಡಲ್ಲ. ಅಬ್ಬಬ್ಬಾ ಅಂದರೆ ಲಾಠಿಚಾರ್ಜ್ ಮಾಡಬಹುದು ಅಷ್ಟೇ. ಇದಕ್ಕೆ ಜಿಲ್ಲೆಯ ರೈತರು ಜಗ್ಗುವುದಿಲ್ಲ ಎಂದ ಅವರು ಜಿಲ್ಲೆಯ ಕಾಂಗ್ರೆಸ್ ಶಾಸಕರು ನರಸತ್ತ ಶಾಸಕರಾಗಿದ್ದಾರೆ. ಹಿರಿಯ ಜಯಚಂದ್ರ ಅವರು ಮಾತನಾಡಿಲ್ಲ. ಜೊತೆಗಿದ್ದ ಶಾಸಕರು ಕಾಂಗ್ರೆಸ್ ಟಿಕೆಟ್ ಸಿಗಲ್ಲ ಎಂತ ಭಯ ಇದ್ರೆ ನಮ್ಮ ಪಕ್ಷಕ್ಕೆ ಬನ್ನಿ ಟಿಕೆಟ್ ಕೊಡಿಸ್ತೀನಿ. ನಮ್ಮ ಎನ್ ಡಿಎ ಸರ್ಕಾರ ರಾಜ್ಯದಲ್ಲಿ ಬರುತ್ತದೆ. ಈ ನಡುವೆ ಕುಣಿಗಲ್ ತಾಲೂಕಿಗೆ ನಿಗದಿಗಿಂತ ಹೆಚ್ಚು ನೀರು ಹರಿದಿದೆ. ಒಟ್ಟು 6.50 ಟಿಎಂಸಿ ನೀರು ಅಲ್ಲಿಗೆ ಹೋಗುತ್ತಿದೆ. ಮೂರು ಭಾಗದಲ್ಲಿ ಹರಿಯುವ ನೀರು ಲೆಕ್ಕ ಕೊಡದ ಎಂಜಿನಿಯರ್ ಜಯಪ್ರಕಾಶ್ ಉಪ ಮುಖ್ಯಮಂತ್ರಿಗಳಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಗುಡುಗಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಐಐಟಿ ಮೂಲಕ ಈ ಯೋಜನೆ ಬಗ್ಗೆ ಪರಿಶೀಲಿಸಲು ಶಾಸಕರ ಸಭೆಯಲ್ಲಿ ತಿಳಿಸಿದ ಉಪ ಮುಖ್ಯಮಂತ್ರಿಗಳು ಸ್ಥಳಕ್ಕೆ ಬಂದು ಕೆಲಸ ಈಗಾಗಲೇ 400 ಕೋಟಿ ಬಿಡುಗಡೆಯಾಗಿದೆ. ಕೆಲಸ ಮಾಡುತ್ತೇವೆ ಎಂದು ಉದ್ಧಟತನ ಮಾತುಗಳಾಡಿರುವುದು ಸರಿಯಲ್ಲ. ಜೊತೆಯಲ್ಲಿ ಬಂದು ಮೌನ ಸಮ್ಮತಿ ನೀಡಿದ ಶಾಸಕರಿಬ್ಬರ ನಡೆಗೆ ರೈತರಲ್ಲಿ ಆಕ್ರೋಶ ಮೂಡಿದೆ. ಮತ್ತೊಮ್ಮೆ ದೊಡ್ಡ ಹೋರಾಟಕ್ಕೆ ಸಜ್ಜಾಗಿದ್ದಾರೆ ಎಂದರು.

ಸಭೆಯಲ್ಲಿ ರೈತ ಸಂಘದ ತಾಲೂ ಕು ಅಧ್ಯಕ್ಷ ವೆಂಕಟೇಗೌಡ, ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಲೋಕೇಶ್, ಹೊನ್ನಗಿರಿ ಗೌಡ, ಎಚ್.ಟಿ.ಭೈರಪ್ಪ, ಬ್ಯಾಟರಂಗೇಗೌಡ, ಬಲರಾಮಯ್ಯ, ಶಂಕರ್ ಕುಮಾರ್, ನಂಜೇಗೌಡ ,ಪಪಂ ಸದಸ್ಯರಾದ ಜಿ.ಎನ್.ಅಣ್ಣಪ್ಪಸ್ವಾಮಿ, ಜಿ.ಸಿ.ಕೃಷ್ಣಮೂರ್ತಿ, ಎಸ್.ನಂಜೇಗೌಡ, ಬೀರಮಾರನಹಳ್ಳಿ ನರಸೇಗೌಡ, ಜಗದೀಶ್, ತಿರುಮಲೇಶ್ ಸೇರಿದಂತೆ ರೈತಸಂಘ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹೋರಾಟಗಾರರು ಭಾಗವಹಿಸಿದ್ದರು.

ಸಮುದ್ರಕ್ಕೆ ಹೋಗುವ ನೀರು ಬಳಸಿಕೊಳ್ಳೋಣ

ಶಿರಾದ ದೊಡ್ಡ ಕೆರೆಗೆ ಬಾಗಿನ ಅರ್ಪಣೆ ವೇಳೆ ಮಾತನಾಡಿರುವ ಶಾಸಕ ಟಿ.ಬಿ.ಜಯಚಂದ್ರ, ಇತ್ತೀಚೆಗೆ ನಾನು ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಕುಣಿಗಲ್ ಬಳಿಯ ಲಿಂಕ್ ಕೆನಾಲ್ ಕಾಮಗಾರಿ ಸ್ಥಳಕ್ಕೆ ಹೋಗಿದ್ದೆ. ಇದರ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಹೇಮಾವತಿ ಜಲಾಶಯದ ಸಾಮರ್ಥ್ಯ ೩೭ ಟಿಎಂಸಿ, ನಾವು ತಮಿಳು ನಾಡಿಗೆ ನೀರು ಬಿಡಬೇಕಿರುವುದು ೧೩೭ ಟಿಎಂಸಿ, ಇದುವೆರೆಗೂ ಸುಮಾರು ೨೨೩ ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ಅಲ್ಲಿಯೂ ಜಲಾಶಯಗಳು ತುಂಬಿ ಉಳಿದ ನೀರು ಸಮುದ್ರಕ್ಕೆ ಹೋಗಿದೆ. ಆದ್ದರಿಂದ ನಾವು ನೀರಿನ ವಿಚಾರದಲ್ಲಿ ಮೂರ್ಖರಾಗುವುದು ಬೇಡ. ಸಮುದ್ರಕ್ಕೆ ವ್ಯರ್ಥವಾಗಿ ಹೋಗುವ ನೀರನ್ನು ನಮ್ಮ ತಾಲೂಕು ಜಿಲ್ಲೆಗಳಿಗೆ ಹರಿಸಿಕೊಳ್ಳಲು ನೀರಾವರಿ ಯೋಜನೆಗಳು ಅವಶ್ಯಕ ಎಂದಿದ್ದಾರೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ