ಸ್ವಚ್ಛತೆ ಕಾಪಾಡುವುದು ಎಲ್ಲರ ಜವಾಬ್ದಾರಿ

KannadaprabhaNewsNetwork |  
Published : Sep 22, 2025, 01:00 AM IST
೨೧ಕೆಎಲ್‌ಆರ್-೨ಕೋಲಾರ ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಜೋಡಿ ಕೃಷ್ಣಾಪುರದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ ಮತ್ತು ಬೆಳ್ಳೂರು ಗ್ರಾಪಂ ಸ್ವಚ್ಛೋತ್ಸವ ಕಾರ್ಯಕ್ರಮಕ್ಕೆ ಬೆಳ್ಳೂರು ಗ್ರಾಪಂ ಪಿಡಿಒ ಸಂಪರಾಜ್ ಚಾಲನೆ ನೀಡಿದರು. | Kannada Prabha

ಸಾರಾಂಶ

ಕಾರ್ಮಿಕರು, ನಾಗರೀಕರು, ನಾವುಗಳೆಲ್ಲರು ಸೇರಿ ಸ್ವಚ್ಛತೆಯ ರೂವಾರಿಗಳಾಗಿ ತಮ್ಮ ಕುಟುಂಬ ಮತ್ತು ಸುತ್ತ ಮುತ್ತಲಿನ ಜನರಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಾವು ಬಳಸುವ ಪ್ಲಾಸ್ಟಿಕ್‌ನಿಂದ ಯಾವ ರೀತಿ ಹಾನಿಯಾಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಅರಿವು ಇಲ್ಲವಾಗಿದೆ.

ಕನ್ನಡಪ್ರಭ ವಾರ್ತೆ ಕೋಲಾರಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಹೊಣೆ ಹಾಗೂ ಜವಾಬ್ದಾರಿಯಾಗಬೇಕು ಎಂದು ಬೆಳ್ಳೂರು ಗ್ರಾಪಂ ಪಿಡಿಒ ಸಂಪರಾಜ್ ತಿಳಿಸಿದರು.ತಾಲೂಕಿನ ನರಸಾಪುರ ಹೋಬಳಿಯ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಜೋಡಿ ಕೃಷ್ಣಾಪುರದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿ ಮತ್ತು ಬೆಳ್ಳೂರು ಗ್ರಾಪಂ ಸ್ವಚ್ಛೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛತೆಯ ಅರಿವು ಮೂಡಿಸಿ

ಕಾರ್ಮಿಕರು, ನಾಗರೀಕರು, ನಾವುಗಳೆಲ್ಲರು ಸೇರಿ ಸ್ವಚ್ಛತೆಯ ರೂವಾರಿಗಳಾಗಿ ತಮ್ಮ ಕುಟುಂಬ ಮತ್ತು ಸುತ್ತ ಮುತ್ತಲಿನ ಜನರಲ್ಲಿ ಪರಿಸರ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಾವು ಬಳಸುವ ಪ್ಲಾಸ್ಟಿಕ್‌ನಿಂದ ಯಾವ ರೀತಿ ಹಾನಿಯಾಗುತ್ತಿದೆ ಎಂಬುದು ಜನಸಾಮಾನ್ಯರಿಗೆ ಅರಿವು ಇಲ್ಲವಾಗಿದೆ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು. ಬಯಲು ಬಹಿರ್ದೆಸೆಗೆ ಕಡಿವಾಣ ಹಾಕಬೇಕು ಎಂದರು.

ಘನ ತ್ಯಾಜ್ಯಗಳ ನಿರ್ವಹಣೆ, ಮರುಬಳಕೆ, ಮತ್ತು ಸಂಸ್ಕರಣೆಯನ್ನು ಮಾಡುವ ಕೆಲಸವನ್ನು ಮಾಡಿದ್ದೇವೆ. ಇಂದಿನ ಯುವ ಜನಾಂಗದವರು ಕ್ರಿಯಾತ್ಮಕ ಚಟುವಟಿಕೆಯಲ್ಲಿ ತೊಡಗಿಸಲು ರಾಷ್ಟ್ರೀಯ ಸೇವಾ ಯೋಜನಾ ಘಟಕ ಸಹಕಾರಿಯಾಗುತ್ತದೆ. ಇಂದು ದೇಶ ಎದುರಿಸುವ ದೊಡ್ಡ ಸಮಸ್ಯೆ ಘನತ್ಯಾಜ್ಯ ನಿರ್ವಹಣೆ. ಆದರಿಂದ ನಮ್ಮ ದೇಶವನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸ್ವಚ್ಛತೆಗೆ ಆದ್ಯತೆ ನೀಡಿ

ಗ್ರಾಪಂ ಅಧ್ಯಕ್ಷೆ ಮಮತಾ ಮಂಜುನಾಥ್ ಮಾತನಾಡಿ, ಒಬ್ಬ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಲು ಸ್ವಚ್ಛತೆ ಅತ್ಯಗತ್ಯ ಮೊದಲು ನಾವು, ನಂತರ ನಮ್ಮ ಕುಟುಂಬ ಸ್ವಚ್ಛವಾಗಿದ್ದರೆ ಇಡೀ ರಾಷ್ಟ್ರವನ್ನು ಸ್ವಚ್ಛವಾಗಿಡಬಹುದು. ಆ ಮೂಲಕ ನಮ್ಮ ಸರ್ಕಾರದ ಗುರಿ ಸ್ವಚ್ಛ ಭಾರತದ ಉದ್ದೇಶವನ್ನು ಸಾಧಿಸೋಣ ಎಂದು ತಿಳಿಸಿದರು. ಟಾಟಾ ಎಲೆಕ್ಟ್ರಾನ್ಸ್ ಕಂಪನಿಯ ಸಿಬ್ಬಂದಿಗಳಾದ ನಿಹಾರಿಕಾ, ದಿವಾಕರ್, ಪರೀಕ್ಷತ್, ಬೆಳ್ಳೂರು ಗ್ರಾಪಂ ಸದಸ್ಯ ಸರೋಜಮ್ಮ ಬೈರಪ್ಪ ಪಂಚಾಯಿತಿ ಕಾರ್ಯದರ್ಶಿ ಚಂದ್ರಮೋಹನ್, ಎಸ್.ಡಿ.ಎ ದೀಪಕ್ ಕುಮಾರ್, ಬಿಲ್ ಕಲೆಕ್ಟರ್ ಜ್ಯೋತಿ ಕುಮಾರ್ ಇದ್ದರು.

.

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ