ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಹಿಂದೂ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Dec 05, 2024, 12:35 AM ISTUpdated : Dec 05, 2024, 07:44 AM IST
4ಎಚ್ಎಸ್ಎನ್21 :  | Kannada Prabha

ಸಾರಾಂಶ

ಬಾಂಗ್ಲಾ  ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಹಿಂದೂ ವಿರೋಧಿ ನೀತಿ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆ ಹಾಗೂ ಬಿಜೆಪಿಯಿಂದ ಬುಧವಾರ ನಗರದಲ್ಲಿ ಬೃಹತ್ ಜನಾಂದೋಲನ ಜಾಥಾ ನಡೆಸಿದಲ್ಲದೇ ನಗರದ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಬಾಂಗ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

  ಹಾಸನ : ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಹಿಂದೂ ವಿರೋಧಿ ನೀತಿ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆ ಹಾಗೂ ಬಿಜೆಪಿಯಿಂದ ಬುಧವಾರ ನಗರದಲ್ಲಿ ಬೃಹತ್ ಜನಾಂದೋಲನ ಜಾಥಾ ನಡೆಸಿದಲ್ಲದೇ ನಗರದ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಬಾಂಗ್ಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಇದೇ ವೇಳೆ ಬಜರಂಗದಳದ ಪ್ರಾಂತ ಸಹ ಸಂಚಾಲಕ ಗೋವರ್ಧನ್ ಉದ್ದೇಶಿಸಿ ಮಾತನಾಡಿ, ಇಡೀ ದೇಶಾದ್ಯಂತ ಬಾಂಗ್ಲಾದಲ್ಲಿರುವ ಹಿಂದೂಗಳ ಪರವಾಗಿ ಪ್ರತಿಭಟನೆ ಮಾಡಲಾಗುತ್ತಿದೆ. ಬಾಂಗ್ಲಾದಲ್ಲಿರುವ ಹಿಂದೂಗಳ ಸಮಸ್ಯೆಗಳ ತಿಳಿಯಬೇಕು. 

ಒಬ್ಬ ಹಿಂದೂ ಮತಾಂತರ ಆದರೇ ಹಿಂದೂ ಧರ್ಮದಿಂದ ಒಬ್ಬ ವ್ಯಕ್ತಿಯನ್ನು ಕರೆದಂತೆ ಮಾತ್ರವಲ್ಲ, ನಮ್ಮ ಶತ್ರು ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯನ್ನು ಸೇರಿಸಿದಂತೆ. ಭಾರತದ ಹಿಂದೂವನ್ನು ಹೆಚ್ಚು ದ್ವೇಷ ಮಾಡುತ್ತಿರುವ ಬಗ್ಗೆ ಅವಲೋಕನ ಮಾಡಿದರೇ ಯಾರು ಹಿಂದೂ ಧರ್ಮದಲಿದ್ದರೂ, ಮುಸ್ಲಿಂ ದಾಳಿಕೋರರ ತಲವಾರುಗಳಿಗೆ ಭಯಭೀತರಾಗಿ ಮುಸಲ್ಮಾನರಾಗಿ ಬಾಂಗ್ಲ ದೇಶದವರು ಪರಿವರ್ತನೆಯಾದರೂ ಅವರು ಇಂದು ಅತ್ಯಂತ ಕ್ರೂರವಾಗಿ ಹಿಂದೂ ಸಮಾಜ ಮತ್ತು ಭಾರತವನ್ನು ದ್ವೇಷ ಮಾಡುತ್ತಿದ್ದಾರೆ ಎಂದರು. 

ಕಳೆದ ಆರು ತಿಂಗಳಲ್ಲಿ ಹಿಂದೂಗಳ ಮೇಲೆ ಹೆಚ್ಚು ದಾಳಿ ಮಾಡಿದ್ದಾರೆ. ಬಾಂಗ್ಲಾದಲ್ಲಿರುವ ಹಿಂದೂಗಳ ಮೇಲೆ ದಾಳಿ ಮಾಡಿ, ಆಸ್ತಿ ಕಬಳಿಸಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ದೇಶ ಬಿಟ್ಟು ಹೋಗಬೇಕೆಂದು ನಮ್ಮ ಹಿಂದೂಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ದೂರಿದರು. ಪ್ರತಿಭಟನೆ ಹಾಗೂ ಬಹಿರಂಗ ಸಭೆಯಲ್ಲಿ ಚನ್ನರಾಯಪಟ್ಟಣದ ಶ್ರಿ ಬಸವೇಶ್ವರ ಚೈತನ್ಯ ಸ್ವಾಮೀಜಿ, ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ವೇಣುಗೋಪಾಲ್, ಸುಶೀಲ ಅಣ್ಣಪ್ಪ, ವಿಜಯಕುಮಾರ್‌ ನಾರ್ವೆ, ಹಿಂದೂ ಹಿತರಕ್ಷಣಾ ಸಮಿತಿಯ ಜಿಲ್ಲಾ ಸಂಯೋಜಕ ಲೋಕೇಶ್, ಮಹಿಪಾಲ್, ಶೋಭನ್ ಬಾಬು, ಜೀವನ್, ವೇದಾವತಿ, ಚನ್ನಕೇಶವ, ಸೂರ್ಯನಾರಾಯಣ್, ಹೇಮಂತ್, ರಘು ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ