ಕನ್ನಡಪ್ರಭ ವಾರ್ತೆ ಚಿಕ್ಕೋಡಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೆಎಲ್ಇ ಸಂಸ್ಥೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬುದೇ ಮುಖ್ಯ ಧ್ಯೇಯವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಬಸವರಾಜ ಪಾಟೀಲ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಸಮಿತಿಯ ಸದಸ್ಯ ಮಹೇಶ ಭಾತೆ ಮಾತನಾಡಿ, ಪಾಲಕರು ತಮ್ಮ ಮಕ್ಕಳಿಗೆ ಮಾದರಿಯಾಗಿರಬೇಕು. ನನ್ನ ಮಕ್ಕಳು ಅವರಂತೆ ಆಗಲಿ, ಇವರಂತೆ ಆಗಲಿ ಅನ್ನೋದಕ್ಕಿಂತ ತನ್ನ ಮಗು ತನ್ನಂತೆ ಆಗಲಿ ಎಂಬಂತಹ ಗುಣವನ್ನು ವಿದ್ಯಾರ್ಥಿಗಳ ತಂದೆ ತಾಯಿ ಬೆಳೆಸಿಕೊಳ್ಳಬೇಕೆಂದರು.
ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಸಮಿತಿ ಸದಸ್ಯ ಎನ್ ಎಸ್ ವಂಟಮುತ್ತೆ ಮಾತನಾಡಿ, ಆಹಾರ ಮೇಳ, ವಿಜ್ಞಾನ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಕ್ರೀಯಾಶೀಲತೆ ಹೆಚ್ಚುತ್ತದೆ ಎಂದು ಹೇಳಿದರು.ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಪ್ರಕಾಶ ಕೋಳಿ ವಹಿಸಿದ್ದರು. ಸ್ಥಾನಿಕ ಸಮಿತಿ ಸದಸ್ಯ ಎಸ್ ಎಸ್ ಕವಲಾಪುರೆ, ಬಸವಪ್ರಭು ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಜಿ ಕುಲಕರ್ಣಿ ಇದ್ದರು. ತಿಪ್ಪಣ್ಣ ಖೋತ ಸ್ವಾಗತಿಸಿದರು. ಪಿ.ಜೆ ಕೊಂಬಾರೆ, ವಿ.ಬಿ ಉಗ್ರಾಣಿ ನಿರೂಪಿಸಿದರು. ಎಸ್. ಜಿ ಅವರಾದೆ ವಂದಿಸಿದರು.