ಸದೃಢ ಸಮಾಜ ಕಟ್ಟುವುದು ನಮ್ಮೆಲ್ಲರ ಜವಾಬ್ದಾರಿ

KannadaprabhaNewsNetwork |  
Published : Feb 18, 2024, 01:30 AM IST
ಅಅಅಅ | Kannada Prabha

ಸಾರಾಂಶ

ಸಮಾಜದಿಂದ ಪಡೆದಿದ್ದನ್ನು ಪುನಃ ಸಮಾಜಕ್ಕೆ ಕೊಡಬೇಕು ಎನ್ನುವ ಸದುದ್ದೇಶದಿಂದ ಸಾಧಕರು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಸತ್ಕರಿಸುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮಹಾಮಾರಿ ಕೊರೋನಾದಿಂದಾಗಿ ಸಮಾಜದಲ್ಲಿನ ಅನೇಕರನ್ನು ಕಳೆದುಕೊಳ್ಳುವುದರ ಜತೆಗೆ ಹಲವರ ಸಂಪರ್ಕವೂ ಇಲ್ಲದಂತಾಗಿದೆ. ಕೊರೋನಾ ನಂತರದ ದಿನಗಳಲ್ಲಿ ಜನರು ಬದುಕು ದುಸ್ತರವಾಗಿದೆ. ಇಂತಹ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಸಮಾಜವನ್ನು ಮತ್ತೆ ಸದೃಢವಾಗಿ ಕಟ್ಟುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ತಿಳಿಸಿದರು.

ನಗರದ ಮಹಿಳಾ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವೇದಾಂತ ಫೌಂಡೇಶನ್ ವತಿಯಿಂದ ನೀಡಲಾಗುವ ವೇದಾಂತ ಎಕ್ಸಲೆನ್ಸ್ ಅವಾರ್ಡ್-2024 ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಿಂದ ಪಡೆದಿದ್ದನ್ನು ಪುನಃ ಸಮಾಜಕ್ಕೆ ಕೊಡಬೇಕು ಎನ್ನುವ ಸದುದ್ದೇಶದಿಂದ ಸಾಧಕರು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಸತ್ಕರಿಸುವುದು ಶ್ಲಾಘನೀಯ. ಕೃಷಿ, ಶಿಕ್ಷಣ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುತ್ತಿರುವುದು ಇತರರಿಗೆ ಮಾದರಿಯಾಗಿದೆ. ವಿವಿಧ ಸಾಧಕರನ್ನು ಗುರುತಿಸಿ ಒಂದೇ ವೇದಿಕೆಯಲ್ಲಿ ಸೇರಿಸುವುದು ಕಷ್ಟ ಸಾಧ್ಯ. ವೇದಾಂತ ಫೌಂಡೇಶನ್ ತಂಡ ಈ ಕಾರ್ಯ ಮಾಡುತ್ತಿರುವುದು ಶಾಘ್ಲನೀಯ ಎಂದರು.

ಮಾರ್ಕಂಡೇಯ ಸಕ್ಕರೆ ಕಾರ್ಖಾನೆಯ ಸಂಚಾಲಕ ಅವಿನಾಶ ಪೋತದಾರ ಮಾತನಾಡಿ, ಒಳ್ಳೆಯ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬೇಕು ಅಂದಾಗ ಮಾತ್ರ ನಮಗೆ ಉತ್ತಮ ಸಮಾಜದ ಕುರಿತು ಜಾಗೃತಿಯಾಗುತ್ತದೆ. ಸಮಾಜದಲ್ಲಿ ನಮ್ಮನ್ನು ನಾವು ಗುರಿತಿಸುಕೊಳ್ಳುವ ರೀತಿಯಲ್ಲಿ ಸಾಧನೆ ಮತ್ತು ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ಭಾರತ ಸೇವಾ ಸಮಿತಿ ಅಧ್ಯಕ್ಷ ವಿಜಯ ನಂದಿಹಳ್ಳಿ ಮಾರ್ಗದರ್ಶನ ಮಾಡಿದರು. ಸನ್ಮಾನ ಸ್ವೀಕರಿಸಿದ ಸನ್ಮಾನಿತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಟಿಳಕವಾಡಿ ಪ್ರೌಢಶಾಲೆಯ ಶಿಕ್ಷಕ ಎಸ್. ವೈ.ಪಾಟೀಲ, ಶಾಹೂನಗರದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಬೇಬಿ ಅಸ್ಮಾ ನಾಯಿಕ, ಬಸುರ್ತೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಅನುರಾಧ ತಾರೀಹಾಳಕರ, ಸರ್ಕಾರಿ ಪ್ರಾಥಮಿಕ ಶಾಲೆ ನಂ 24ರ ಶಿಕ್ಷಕಿ ಸುಜಾತಾ ಲೋಖಂಡೆ, ಪತ್ರಕರ್ತರಾದ ಇನ್ ನ್ಯೂಸ್ ವಾಹಿನಿಯ ಸಂಪಾದಕ ರಾಜಶೇಖರ ಪಾಟೀಲ, ಮರಾಠಿ ಪುಢಾರಿ ಪತ್ರಿಕೆಯ ವರದಿಗಾರ ಶಿವಾಜಿ ಶಿಂಧೆ ಹಾಗೂ ದಿ ನ್ಯೂ.ಇಂಡಿಯನ್ ಎಕ್ಸ್ ಪ್ರೆಸ್‌ನ ಹಿರಿಯ ವರದಿಗಾರ ಸುನೀಲ ಪಾಟೀಲ, ಎಪಿಎಂಸಿ ಪೊಲೀಸ್‌ ಠಾಣೆಯ ಪೇದೆ ಕೆಂಪಣ್ಣ ದೊಡಮನಿ, ಉತ್ತರ ಸಂಚಾರಿ ಪೊಲೀಸ್ ಠಾಣೆಯ ಪೇದೆ ಕಾಶಿನಾಥ್ ಇರಗಾರ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ವೇಳೆ ಸಮೃದ್ಧಿ ಸೇವಾ ಸಂಸ್ಥೆಯ ಕಾರ್ಯದರ್ಶಿ ವೀರೇಶ ಕಿವಡಸಣ್ಣವರ, ರಮೇಶ ಅನಂದಾಚೆ, ನಗರ ಶಿಕ್ಷಣ ಸಂಘಟನೆ ಅಧ್ಯಕ್ಷ ಬಾಬು ಸೊಗಲನ್ನವರ, ಐ.ಡಿ.ಹಿರೇಮಠ, ಪ್ರಾಂಶುಪಾಲ ಕವಿತಾ ಪರಮಾಣಿಕ, ಫೌಂಡೇಶನ್‌ನ ಅಧ್ಯಕ್ಷ ಸತೀಶ್ ಪಾಟೀಲ, ಉಪಾಧ್ಯಕ್ಷ ಎನ್. ಡಿ. ಮಾದರ ಹಾಗೂ ಈಶ್ವರ ಪಾಟೀಲ ಮೊದಲಾದವರು ಇದ್ದರು.

ಕೋಟ್...ಸಮಾಜದಿಂದ ಪಡೆದಿದ್ದನ್ನು ಪುನಃ ಸಮಾಜಕ್ಕೆ ಕೊಡಬೇಕು ಎನ್ನುವ ಸದುದ್ದೇಶದಿಂದ ಸಾಧಕರು ಹಾಗೂ ಪ್ರತಿಭಾವಂತರನ್ನು ಗುರುತಿಸಿ ಸತ್ಕರಿಸುವುದು ಶ್ಲಾಘನೀಯ. ಕೃಷಿ, ಶಿಕ್ಷಣ, ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚುತ್ತಿರುವುದು ಇತರರಿಗೆ ಮಾದರಿಯಾಗಿದೆ. ವಿವಿಧ ಸಾಧಕರನ್ನು ಗುರುತಿಸಿ ಒಂದೇ ವೇದಿಕೆಯಲ್ಲಿ ಸೇರಿಸುವುದು ಕಷ್ಟ ಸಾಧ್ಯ. ವೇದಾಂತ ಫೌಂಡೇಶನ್ ತಂಡ ಈ ಕಾರ್ಯ ಮಾಡುತ್ತಿರುವುದು ಶಾಘ್ಲನೀಯ.ಲೀಲಾವತಿ ಹಿರೇಮಠ. ಬೆಳಗಾವಿ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌