ಎರಡೇ ತಿಂಗಳಲ್ಲಿ 10 ಬಾಣಂತಿಯರ ಸಾವು!

KannadaprabhaNewsNetwork | Published : Dec 17, 2024 12:46 AM

ಸಾರಾಂಶ

ಕಳೆದ ಎರಡು ತಿಂಗಳಲ್ಲಿ 10 ಬಾಣಂತಿಯರು ಸಾವನಪ್ಪಿರುವ ಘಟನೆಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್‌)ಯ ಬೋಧಕ ಆಸ್ಪತ್ರೆ ಮತ್ತು ಸಮಾಜ ಕಲ್ಯಾಣ ಇಲಾಖೆಕೆಗಳನ್ನು ಫಜೀತಿಗೆ ಸಿಲುಕಿಸುವಂತೆ ಮಾಡಿದೆ.

ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳು ಘಟಿಸುತ್ತಿರುವ ಸಮಯದಲ್ಲಿಯೇ ಜಿಲ್ಲೆಯಲ್ಲಿ ಆತಂಕಕಾರಿ ಸಂಗತಿ ಹೊರಬಿದಿದ್ದು, ಕಳೆದ ಎರಡು ತಿಂಗಳಲ್ಲಿ 10 ಬಾಣಂತಿಯರು ಸಾವನಪ್ಪಿರುವ ಘಟನೆಗಳು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ರಿಮ್ಸ್‌)ಯ ಬೋಧಕ ಆಸ್ಪತ್ರೆ ಮತ್ತು ಸಮಾಜ ಕಲ್ಯಾಣ ಇಲಾಖೆಕೆಗಳನ್ನು ಫಜೀತಿಗೆ ಸಿಲುಕಿಸುವಂತೆ ಮಾಡಿದೆ.

ತೀವ್ರ ರಕ್ತಸ್ರಾವ, ಹೃದಯಾಘಾತ, ಜ್ವರ ಸೇರಿದಂತೆ ವಿವಿಧ ಕಾರಣಗಳಿಂದ ಬಾಣಂತಿಯರು ಸಾವನಪ್ಪಿರುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸುತ್ತಿದ್ದು, ಹೆಚ್ಚಿನ ತನಿಖೆ ನಡೆಸಿದ್ದಲ್ಲಿ ಸಾವುಗಳಿಗೆ ನಿಜವಾದ ಕಾರಣವುಗೊತ್ತಾಗಲಿದೆ.ಆತಂಕಕಾರಿ ಸಂಗತಿ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ಸಂಚಲನ ಮೂಡಿಸಿದ್ದು, ರಾಯಚೂರು ಜಿಲ್ಲೆಯಲ್ಲಿ ಕಳೆದ ಮುರು ವರ್ಷದಲ್ಲಿ 25 ಬಾಣಂತಿ ಯರು ಸಾವನಪ್ಪಿದ್ದರೆ, ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 16 ಸರ್ಕಾರಿ ಆಸ್ಪತ್ರೆ, ಮೂರು ಖಾಸಗಿ ಆಸ್ಪತ್ರೆ ಸೇರಿದಂತೆ ಒಟ್ಟಾರೆ ಏಳು ತಿಂಗಳಲ್ಲಿ 19 ಬಾಣಂತಿಯರು ಮೃತಪಟ್ಟಿದ್ದಾರೆ. ಇದರಲ್ಲಿ ಕಳೆದ ಮೂರು ತಿಂಗಳಲ್ಲಿಯೇ 10 ಜನರು ಸಾವನಪ್ಪಿರುವುದು ಆತಂಕಕಾರಿ ಸಂಗತಿಯಾಗಿದೆ.ಜಿಲ್ಲೆಯ ರಾಯಚೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೂರು ಜನ ಬಾಣಂತಿಯರು, ಸಿಂಧನೂರಿನಲ್ಲಿ ಇಬ್ಬರು, ದೇವದುರ್ಗ, ಲಿಂಗಸುಗೂರು, ಮಸ್ಕಿ, ಮಾನ್ವಿ ಮತ್ತು ಸಿರವಾರದಲ್ಲಿ ತಲಾ ಒಬ್ಬ ಬಾಣಂತಿಯರು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ. ಇವರಲ್ಲಿ ಸುಮಾರು ಎಂಟು ಜನ ರಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರೆ, ಸಿಂಧನೂರು ಮತ್ತು ದೇವದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ತಲಾ ಒಬ್ಬರು ಸಾವನಪ್ಪಿದ್ದಾರೆ.ಸಾವನಪ್ಪಿರುವ ಬಾಣಂತಿಯರಲ್ಲಿ ಬಹುತೇಕರು ಗ್ರಾಮೀಣ ಭಾಗದವರೇ ಆಗಿದ್ದು, ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ದೊರೆಯದಕ್ಕೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಹಾಗೂ ರಿಮ್ಸ್‌ ಬೋಧಕ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಹೆರಿಗೆ ಪ್ರಕರಣಗಳನ್ನು ಹಗುರವಾಗಿ ತೆಗೆದುಕೊಳ್ಳುತ್ತಿರುವುದು, ಔಷಧಿ, ಆ ಬಾಣಂತಿಯರಲ್ಲಿ ಕೆಲವರು ಅನ್ಯ ಕಾಯಿಲೆ ಪರಿಣಾಮದಿಂದಲೂ ಸಾವುಗಳು ಸಂಭವಿಸಿರಬಹುದು ಎನ್ನುವುದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನೀಡುತ್ತಿರುವ ಸಮಜಾಯಿಷಿ.ಕರೆ ಸ್ವೀಕರಿಸದ ರಿಮ್ಸ್‌ ಡೀನ್ಬಾಣಂತಿ ಸಾವಿನ ಪ್ರಕರಣಗಳು ಸೇರಿದಂತೆ ಹತ್ತಾರು ಸಮಸ್ಯೆಗಳಿದ್ದು ಅವುಗಳನ್ನು ಸ್ಪಂದಿಸುವಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ರಿಮ್ಸ್ ನಿರ್ದೇಶಕ ಡಾ.ರಮೇಶ.ಬಿ ಅವರು ಕರೆಗಳಿಗೆ ಸ್ಪಂದಿಸುತ್ತಿಲ್ಲ.ರಾಯಚೂರು ಡಿಎಚ್ಒ ಡಾ.ಸುರೇಂದ್ರ ಬಾಬು ಮಾತನಾಡಿ , ಜಿಲ್ಲೆಯಲ್ಲಿ ಮೂರು ತಿಂಗಳಲ್ಲಿ ಬಾಣಂತಿ ಸಾವಿನ ಸಂಖ್ಯೆ ಹೆಚ್ಚಾಗಿದ್ದು, ವಿವಿಧ ಕಾರಣಗಳಿಂದ ಘಟನೆಗಳು ಸಂಭವಿಸಿವೆ. ಈ ಕುರಿತು ಕಾಲ ಕಾಲಕ್ಕೆ ರಿಮ್ಸ್‌ ಹಾಗೂ ಆಯಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಿಂದ ವರದಿಯನ್ನು ಪಡೆದುಕೊಂಡು, ಸಭೆಗಳನ್ನು ನಡೆಸಿ ಅಗತ್ಯ ಸೂಚನೆಗಳನ್ನು ಸಹ ನೀಡಲಾಗಿದೆ ಎಂದರು.

Share this article