ಆಲಮೇಲಗೆ ₹ 145 ಕೋಟಿಯ ತೋಟಗಾರಿಕೆ ಕಾಲೇಜು

KannadaprabhaNewsNetwork |  
Published : Oct 05, 2024, 01:39 AM IST
ಮನಗೂಳಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ ಆಲಮೇಲ ಪಟ್ಟಣಕ್ಕೆ ಮಂಜೂರಾಗಿರುವ ತೋಟಗಾರಿಕೆ ಕಾಲೇಜು ಆರಂಭಕ್ಕೆ ₹ 145 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಹಂತದಲ್ಲಿ ₹ 40 ಕೋಟಿ ಮಂಜೂರಾಗಿ ₹ 10 ಕೋಟಿ ಬಿಡುಗಡೆ ಆಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಉಪ ಕುಲಪತಿ ವಿಷ್ಣುವರ್ಧನ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮೇಲ

ಆಲಮೇಲ ಪಟ್ಟಣಕ್ಕೆ ಮಂಜೂರಾಗಿರುವ ತೋಟಗಾರಿಕೆ ಕಾಲೇಜು ಆರಂಭಕ್ಕೆ ₹ 145 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಹಂತದಲ್ಲಿ ₹ 40 ಕೋಟಿ ಮಂಜೂರಾಗಿ ₹ 10 ಕೋಟಿ ಬಿಡುಗಡೆ ಆಗಿದೆ. ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಉಪ ಕುಲಪತಿ ವಿಷ್ಣುವರ್ಧನ ಹೇಳಿದರು.ತೋಟಗಾರಿಕೆ ವಿಶ್ವ ವಿದ್ಯಾಲಯದ ಉಪ ಕುಲಪತಿ ಹಾಗೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ನೀಡಿದರು. ಕಾಲೇಜು ಆರಂಭಿಸಲು ಸರ್ಕಾರ ಅವಕಾಶ ನೀಡಿದ್ದರಿಂದ ತಾತ್ಕಾಲಿಕವಾಗಿ ಆಲಮೇಲ ತೋಟಗಾರಿಕೆ ಕಾಲೇಜಿನ ಹೆಸರಿನಲ್ಲಿ ಇದೆ ಅ.21 ರಂದು ಬಾಗಲಕೋಟ ತೋಟಗಾರಿಕೆ ಕಾಲೇಜಿನಲ್ಲಿ ತರಗತಿ ಆರಂಭವಾಗಲಿವೆ. ಅದಕ್ಕೆ ಮೊದಲ ವರ್ಷದಲ್ಲಿ 25 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ನೀಡಿದ್ದು, ವಿದ್ಯಾರ್ಥಿಗಳನ್ನು ಮೆರಿಟ್‌ ಆಧಾರದ ಮೇಲೆ ಪ್ರವೇಶ ಪಡೆದುಕೊಳ್ಳಲಿದ್ದಾರೆ ಎಂದರು.ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು ನಿರ್ಮಾಣಕ್ಕೆ ಸ್ಥಳೀಯ ಕೃಷಿ ಇಲಾಖೆಯ 77.33 ಎಕರೆ ಜಮೀನು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಿದ್ದು, ಆದಷ್ಟು ಬೇಗ ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯದ ಕೆಲಸ ಆರಂಭಿಸಲಾಗುವುದು. ಸರ್ಕಾರ ಸಮಯಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಮಾಡಿದರೆ 2 ವರ್ಷದಲ್ಲಿ ಆಲಮೇಲದಲ್ಲಿಯೇ ಕಾಲೇಜು ಆರಂಭವಾಗಲಿದೆ ಎಂದು ತಿಳಿಸಿದರು.ಬಳಿಕ, ಶಾಸಕ ಅಶೋಕ ಮನಗೂಳಿ ಮಾತನಾಡಿ, ಆಲಮೇಲ ಪಟ್ಟಣದಲ್ಲಿ ಹಿಂದೆ ತಂದೆ ದಿ.ಎಂ.ಸಿ ಮನಗೂಳಿ ತೋಟಗಾರಿಕೆ ಸಚಿವರಾಗಿದ್ದಾಗ ತೋಟಗಾರಿಕೆ ಕಾಲೇಜು ಮಂಜೂರು ಮಾಡಿಸಿದ್ದರು. ಅವರ ನಿಧನದಿಂದ ಮತ್ತು ಸರ್ಕಾರ ಬದಲಾಗಿದ್ದರಿಂದ ಕಾಲೇಜು ಸ್ಥಗಿತಗೊಂಡಿತ್ತು. ಈ ಬಾಗದ ಜನತೆಯ ಒತ್ತಾಯದ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಂತಿಸಿದಾಗ ಅನುದಾನ ನೀಡಿದ್ದು, ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ತೋಟಗಾರಿಕೆ ವಿವಿ ಅಧಿಕಾರಿಗಳಾದ ಮಹಾದೇವ ಮುರಗಿ, ಎಲ್.ಡಿ.ಆರ್.ಶಾಂತಪ್ಪ ಅಗಸಬಾಳ, ಇಂಡಿ ಉಪ ವಿಭಾಗಾಧಿಕಾರಿ ಅಬೀದ್‌ ಗದ್ಯಾಳ, ತಾಲೂಕು ತೋಟಗಾರಿಕೆ ಅಧಿಕಾರಿ ಎಸ್.ಎಸ್.ಪಾಟೀಲ, ಶರಣಗೌಡ ಪಾಟೀಲ, ತಹಸೀಲ್ದಾರ್‌ ವಿಜಯಕುಮಾರ, ಕೃಷಿ ಅಧಿಕಾರಿ ಇಂಗಳೆ, ಪಪಂ ಅಧ್ಯಕ್ಷ ಸಾಧಿಕ ಸುಂಬಡ ಮುಂತಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ