2857ರಲ್ಲಿ 1475 ಪ್ರಕರಣಗಳು ರಾಜಿ ಸಂಧಾನ ಇತ್ಯರ್ಥ

KannadaprabhaNewsNetwork |  
Published : Jul 15, 2025, 01:45 AM IST
ಜಜಜಜಜಜ | Kannada Prabha

ಸಾರಾಂಶ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸವದತ್ತಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಹಯೋಗದೊಂದಿಗೆ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‍ ಅದಾಲತ್‍ ಹವ್ಮಿುಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸವದತ್ತಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಸಹಯೋಗದೊಂದಿಗೆ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್‍ ಅದಾಲತ್‍ ಹವ್ಮಿುಕೊಳ್ಳಲಾಗಿತ್ತು.

ರಾಷ್ಟ್ರೀಯ ಲೋಕ್‍ ಅದಾಲತ್‍ನಲ್ಲಿ ಸವದತ್ತಿಯ ಎಲ್ಲ ನ್ಯಾಯಾಲಯಗಳಲ್ಲಿನ 8678 ಬಾಕಿವಿರುವ ಪ್ರಕರಣಗಳ ಪೈಕಿ ಒಟ್ಟು 2857 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಅದರಲ್ಲಿ 1475 ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಅಲ್ಲದೇ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವುದರಿಂದ. ಪಕ್ಷಗಾರರ ನ್ಯಾಯಾಲಯದ ದೀರ್ಘಾವಧಿಯ ಪ್ರಕ್ರಿಯೆ ಮತ್ತು ವೆಚ್ಚವನ್ನು ತಪ್ಪಿಸಬಹುದು. ಇದು ನ್ಯಾಯಾಲಯದ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪಕ್ಷಗಾರರಿಗೆ ತ್ವರಿತ ಮತ್ತು ಸುಲಭವಾದ ಪರಿಹಾರವನ್ನು ಒದಗಿಸುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಸಿದ್ರಾಮ ರೆಡ್ಡಿ ತಿಳಿಸಿದರು.ಪತಿ-ಪತ್ನಿ ಮನಸ್ತಾಪದ ಪರಿಣಾಮ ದಾಂಪತ್ಯ ಜೀವನದಿಂದ ಸುಮಾರು ವರ್ಷಗಳಿಂದ ಬೇರೆ ಬೇರೆಯಾಗಿ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದ ಪತಿ-ಪತ್ನಿಯರನ್ನು ಮನಮೊಲಿಸಿ ಪುನಃ ಒಗ್ಗೂಡಿಲಾಯಿತು. ಅದರಿಂದ ಎರಡೂ ಕಡೆಯ ಪಕ್ಷಗಾರರು, ವಕೀಲರು ಹಾಗೂ ಊರಿನ ಹಿರಿಯರು ಸಂತಸ ವ್ಯಕ್ತಪಡಿಸಿದರು.ರಾಷ್ಟ್ರೀಯ ಲೋಕ್‍ ಅದಾಲತನಲ್ಲಿ ಹಿರಿಯ ಸಿವಿಲ್‍ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಸಿದ್ದರಾಮ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕೃಷ್ಣಪ್ಪ ಪಮ್ಮಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜೆ.ಬಿ,ಮುನವಳ್ಳಿ, ಕಾರ್ಯದರ್ಶಿಗಳಾದ ಎಸ್.ಎಸ್.ಕಾಳಪ್ಪನವರ, ಸಹಾಯಕ ಸರ್ಕಾರಿ ಅಭಿಯೋಜಕ ಎ.ಎ.ನೇಸರಿಕರ, ಎಸ್.ಎಸ್.ಅಂಗಡಿ, ವಕೀಲ ಸಂಧಾನಕಾರರಾದ ವಿ.ಎಂ.ಶಿಂತ್ರಿ, ಪಿ.ಎಸ್.ಹೂಲಿಕಟ್ಟಿ, ಇ.ಎಂ.ನಾಯ್ಕರ ಹಾಗೂ ನ್ಯಾಯವಾದಿಗಳಾದ ಬಿ.ಎಂ.ಯಲಿಗಾರ, ಬಿ.ವಿ.ಮಲಗೌಡರ, ಎಂ.ಬಿ.ದ್ಯಾಮನಗೌಡರ, ಎಂ.ಎನ್.ಮುತ್ತಿನ, ಎಂ.ಎಸ್.ಕುರಿ, ಎಂ.ಕೆ.ಹೊಸಮಠ, ಸಿ.ಎನ್.ಜೈನರ, ಸಿ.ಬಿ.ದುಂಡಿ, ಎ.ಎಂ.ಭಾಗೋಜಿಕೊಪ್ಫ, ಸಿ.ಎಸ್.ಮುತ್ತಗಿ, ಬಿ.ಕೆ.ಕಡಕೋಳ, ಎಂ.ಎಫ್.ಬಾಡಿಗೇರ, ಎನ್.ಎಸ್.ತುರಮರಿ, ವೈ.ಪಿ.ರಾಮಜಾರ, ಎಂ.ಎಫ್.ಶಾಬಾರ, ಎಫ್.ಎಂ.ಕಾಳೆ, ಜೆ.ಎಂ.ತಾಂಬೋಳಿ, ಎ.ಜೆ.ಜಂಗ್ಲಿಸಾಬನವರ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’