ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ೧೬.೨೨ ಲಕ್ಷ ಜನರು ಮತದಾರರ ಪಟ್ಟಿಯಲ್ಲಿದ್ದಾರೆ. ೧೬ ಜನರ ತೃತೀಯ ಲಿಂಗಿಗಳು ಇದ್ದಾರೆ.
ಉತ್ತರ ಕನ್ನಡದ ೬ ಹಾಗೂ ಬೆಳಗಾವಿ ಜಿಲ್ಲೆಯ ಕಿತ್ತೂರು, ಖಾನಾಪುರ ಒಳಗೊಂಡು ೮ ವಿಧಾನಸಭಾ ಕ್ಷೇತ್ರಗಳಿವೆ. ಉತ್ತರ ಕನ್ನಡದಲ್ಲಿ ೧೨,೧೨,೬೦೮, ಕಿತ್ತೂರು, ಖಾನಾಪುರದಲ್ಲಿ ೪,೧೦,೨೪೯ ಸೇರಿ ೧೬,೨೨,೮೫೭ ಮತದಾರರು ಇದ್ದಾರೆ. ಒಟ್ಟೂ ೧೯೭೭ ಮತಗಟ್ಟೆಗಳಿವೆ.ಖಾನಾಪುರ ವಿಧಾಸಭಾ ಕ್ಷೇತ್ರದಲ್ಲಿ ೧೧೧೪೨೪ ಪುರುಷ, ೧೦೫೬೭೪ ಮಹಿಳಾ, ೫ ಇತರೆ, ಕಿತ್ತೂರು ೯೯೭೦೯ ಪುರುಷ, ೯೮೬೦೭ ಮಹಿಳಾ, ೫ ಇತರೆ, ಹಳಿಯಾಳ ೯೧೮೬೯ ಪುರುಷ, ೯೧೧೬೬ ಮಹಿಳಾ, ೧ ಇತರೆ, ಕಾರವಾರ ೧೦೯೩೭೮ ಪುರುಷ, ೧೧೨೭೮೬ ಮಹಿಳಾ, ೧ ಇತರೆ, ಕುಮಟಾ ೯೪೬೨೪ ಪುರುಷ, ೯೫೨೨೯ ಮಹಿಳಾ, ೩ ಇತರೆ, ಭಟ್ಕಳ ೧೧೪೦೫೩ ಪುರುಷ, ೧೧೧೦೭೫ ಮಹಿಳಾ, ಶಿರಸಿ ೧೦೧೪೮೪ ಪುರುಷ, ೧೦೧೧೬೩ ಮಹಿಳಾ, ೧ ಇತರೆ, ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ೯೩೦೫೮ ಪುರುಷ, ೯೧೫೪೨ ಮಹಿಳಾ, ೮೧೫೫೯೯ ಪುರುಷ, ೮೦೭೨೪೨ ಮಹಿಳಾ, ೧೬ ಇತರೆ ಮತದಾರರಿದ್ದಾರೆ.
ಮತದಾನದ ಬಳಿಕ ಕಿತ್ತೂರು ಹಾಗೂ ಖಾನಾಪುರದ ಮತಗಟ್ಟೆಗಳಿಗೆ ಬೆಳಗಾವಿ ಜಿಲ್ಲಾಡಳಿತದಿಂದಲೇ ಮತಯಂತ್ರಗಳನ್ನು ನೀಡಲಾಗುತ್ತದೆ. ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ಹಾಗೂ ಮತದಾನದ ದಿನ ಆ ಜಿಲ್ಲೆಯ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಮತದಾನದ ಬಳಿಕ ಯಂತ್ರಗಳು ಕುಮಟಾದ ಡಾ. ಎ.ಬಿ. ಬಾಳಿಗಾ ಕಾಲೇಜಿನಲ್ಲಿ ತೆರೆಯಲಾಗುವ ಭದ್ರತಾ ಕೊಠಡಿ(ಸ್ಟ್ರಾಂಗ್ ರೂಮ್)ಗೆ ಬಿಗಿ ಭದ್ರತೆಯಲ್ಲಿ ತರಲಾಗುತ್ತದೆ. ಮತ ಎಣಿಕೆಯ ದಿನ ಬಾಳಿಕಾ ಕಾಲೇಜಿನಲ್ಲೇ ಮತ ಎಣಿಕೆ ಕಾರ್ಯ ನಡೆಯಲಿದೆ.ವರ್ನರೆಬಲ್ ಪಿಎಸ್:
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ದುರ್ಬಲ(ವರ್ನರೆಬಲ್) ಎಂದು ೩೯ ಮತಗಟ್ಟೆಯನ್ನು ಗುರುತು ಮಾಡಲಾಗಿದೆ. ಇದರಲ್ಲಿ ಖಾನಾಪುರದಲ್ಲಿ ೬, ಕಿತ್ತೂರು, ಹಳಿಯಾಳ ತಲಾ ೫, ಕಾರವಾರ ೨, ಕುಮಟಾ ೬, ಭಟ್ಕಳ ೯, ಶಿರಸಿ ೧, ಯಲ್ಲಾಪುರ ೫ ಮತಗಟ್ಟೆಯನ್ನು ಹೊಂದಿದೆ.