ಈಗಾಗಲೇ ಅಜ್ಜಂಪುರದಲ್ಲಿ 1030 , ತರೀಕೆರೆಯಲ್ಲಿ 750 ಹೆಕ್ಟೇರ್ ಬಿತ್ತನೆ ಪೂರ್ಣ। ಮುಂದಿನ ದಿನಗಳಲ್ಲಿ 19345 ಹೆಕ್ಟೇರ್ ನಲ್ಲಿ ಬಿತ್ತನೆ
ಕನ್ನಡಪ್ರಭ ವಾರ್ತೆ, ತರೀಕೆರೆಅಜ್ಜಂಪುರ ತಾಲೂಕಿನಲ್ಲಿ 1030 ಮತ್ತು ತರೀಕೆರೆ ತಾಲೂಕಲ್ಲಿ 750 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬಿತ್ತನೆ ಕಾರ್ಯಮಾಡಿದ್ದಾರೆ ಎಂದು ತರೀಕೆರೆ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಲೋಕೇಶಪ್ಪ ಮಾಹಿತಿ ನೀಡಿದ್ದಾರೆ.
2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಜೂನ್-13 ರವರೆಗೆ ತರೀಕೆರೆ ತಾಲೂಕಿಗೆ ಸಂಬಂಧಿಸಿದಂತೆ 116 ಮಿ.ಮೀ ವಾಡಿಕೆ ಮಳೆಗೆ 202 ಮಿ.ಮೀ ನಷ್ಟು ಅಂದರೆ ಶೇ. 74 ರಷ್ಟು ವಾಡಿಕೆಗಿಂತ ಹೆಚ್ಚಾಗಿ ನಾಲ್ಕು ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಮಳೆಯಾಗಿದೆ ಎಂದು ತಿಳಿಸಿದ್ದಾರೆ.ಅಜ್ಜಂಪುರ ತಾಲೂಕಿಗೆ ಸಂಬಂಧಿಸಿದಂತೆ ವಾಡಿಕೆ ಮಳೆ 111 ಮಿ.ಮೀ ಗೆ 237 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ 115 ರಷ್ಟು ಹೆಚ್ಚಾಗಿ ಮಳೆಯಾಗಿದೆ. ಉತ್ತಮ ಮಳೆ ಆಗಿರುವುದರಿಂದ 2 ತಾಲೂಕು ಗಳ 6 ಹೋಬಳಿಯ ಎಲ್ಲಾ ಗ್ರಾಮದ ರೈತರು ಭೂಮಿಯನ್ನು ಉಳಿಮೆ ಮಾಡಿ ಬಿತ್ತನೆ ಕಾರ್ಯ ನಡೆಯುತ್ತಿದ್ದಾರೆ. ಈಗಾಗಲೇ ಅಜ್ಜಂಪುರ ತಾಲೂಕಲ್ಲಿ 1030 ಹೆಕ್ಟೇರ್ ಹಾಗೂ ತರೀಕೆರೆ ತಾಲೂಕಲ್ಲಿ 750 ಹೆಕ್ಟೇರ್ ಬಿತ್ತನೆಯಾಗಿದ್ದು ಎರಡು ತಾಲೂಕಿನಿಂದ ಈಗಾಗಲೇ 1780 ಹೆಕ್ಟೇರ್ ಬಿತ್ತನೆ ಯಾಗಿದೆ. ಉಳಿದಂತೆ 19345 ಹೆಕ್ಟೇರ್ ನಲ್ಲಿ ಮುಂದಿನ ದಿನಗಳಲ್ಲಿ ಬಿತ್ತನೆಯಾಗಲಿದ್ದು ಶೇ. 100 ರಷ್ಟು ಬಿತ್ತನೆ ಆಗುವ ನಿರೀಕ್ಷೆಯಿದೆ ಎಂದು ವಿವರಿಸಿದ್ದಾರೆ.2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ಫಸಲ್ ಸುರಕ್ಷ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ರೈತರು ಗ್ರಾಮ ಪಂಚಾಯಿತಿ & ಹೋಬಳಿಮಟ್ಟದ ಅನುಸೂಚಿತ ಬೆಳೆಗಳಿಗೆ ಹತ್ತಿರದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಬೆಳೆ ವಿಮೆ ಪಾವತಿ ಮಾಡಿ ನೋಂದಣಿಗೆ ಮನವಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಓರಿಯಂಟಲ್ ಇನ್ಸುರೆನ್ಸ್ ಕಂಪನಿಯನ್ನು ಆಯ್ಕೆ ಮಾಡಲಾಗಿದ್ದು, ನೆಲಗಡಲೆಗೆ ನೋಂದಣಿ ಮಾಡಲು ದಿ. ಜುಲೈ 31, 2024 ಅಂತಿಮ ದಿನಾಂಕವಾಗಿದೆ. ವಿಮಾ ಕಂತು ಎಕರೆಗೆ ₹ 436 ಆಗಿದ್ದು, ರಾಗಿ ಮತ್ತು ಮುಸುಕಿನ ಜೋಳಕ್ಕೆ ನೋಂದಣಿಗೆ ಆಗಸ್ಟ್ 16, 2024 ರಂದು ಅಂತಿಮ ದಿನಾಂಕವಾಗಿದೆ. ರಾಗಿಗೆ ಎಕರೆಗೆ ₹ 340 ವಿಮಾ ಕಂತು, ಮುಸುಕಿನ ಜೋಳಕ್ಕೆ ಎಕರೆಗೆ ₹ 452 ವಿಮಾ ಕಂತು ಪಾವತಿಸಬೇಕಾಗಿರುತ್ತದೆ ಎಂದು ತರೀಕೆರೆ ಮತ್ತು ಅಜ್ಜಂಪುರ ತಾಲೂಕಿನ ರೈತರಿಗೆ ಮಾಹಿತಿ ನೀಡಿದ್ದಾರೆ. ಸಹಾಯಕ ಕೃಷಿ ನಿರ್ದೇಶಕ ಬಿ.ಎಲ್.ಲೋಕೇಶಪ್ಪ ಅಜ್ಜಂಪುರ ತಾಲೂಕಿನ ಅಣ್ಣಾಪುರ ಗ್ರಾಮದಲ್ಲಿ ರೈತರು ಬಿತ್ತನೆ ಮಾಡಿರುವ ಶೇಂಗಾ ತಾಕಿನ ಬೆಳೆ ಪರಿಶೀಲಿಸಿದರು. ಮುಸುಕಿನ ಜೋಳ ಮತ್ತು ರಾಗಿಯಲ್ಲಿ ಅಂತರ ಬೆಳೆಯಾಗಿ ದ್ವಿದಳ ದಾನ್ಯಗಳು ಅದರಲ್ಲಿ ತೊಗರಿಯನ್ನು 8:1 ನಾಟಿಯಲ್ಲಿ ಅಂತರ ಬೆಳೆಯಾಗಿ ಬೆಳೆಯಲು ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ.14ಕೆಟಿಆರ್.ಕೆ.2ಃತಾಲೂಕು ಸಹಾಯಕ ಕೃಷಿ ನಿರ್ದೇಶಕ ಬಿ.ಎಲ್.ಲೋಕೇಶಪ್ಪ ಅವರು ಅಜ್ಜಂಪುರ ತಾಲೂಕಿನ ಅಣ್ಣಾಪುರ ಗ್ರಾಮದಲ್ಲಿ ರೈತರು ಬಿತ್ತನೆ ಮಾಡಿರುವ ಶೇಂಗಾ ತಾಲೂಕಿನ
ಬೆಳೆ ಪರಿಶೀಲಿಸಿದರು.