ಕಾರ್ಕಹಳ್ಳಿ ಹೊರ ವಲಯದ ಜಮೀನಿನಲ್ಲಿ 2 ಕಾಡಾನೆಗಳು ಪ್ರತ್ಯಕ್ಷ..!

KannadaprabhaNewsNetwork | Published : Aug 4, 2024 1:17 AM

ಸಾರಾಂಶ

ಕಬ್ಬಿನ ಗದ್ದೆ ಮಧ್ಯಭಾಗದಲ್ಲಿ ಆನೆಗಳನ್ನು ಹೊರ ಬಾರದ ಕಾರಣ ಮದ್ದುಗಳನ್ನು ಸಿಡಿಸುವ ಮೂಲಕ ಆನೆಗಳನ್ನು ಓಡಿಸಲು ಮುಂದಾದರು. ರಾತ್ರಿ ವೇಳೆಗೆ ಕಾಡಾನೆಗಳನ್ನು ಕಾಡಿನತ್ತ ಓಡಿಸುವ ಪ್ರಯತ್ನ ನಡೆಯುತ್ತಾದರೂ ಕಾಡಾನೆಗಳು ಕಾಡಿನತ್ತ ತೆರಳದೆ ಮದ್ದೂರು ಮಳವಳ್ಳಿ ಮುಖ್ಯ ರಸ್ತೆಯ ಬಲಭಾಗದಲ್ಲಿರುವ ಬಿದರಹಳ್ಳಿ ಬಯಲು ಪ್ರದೇಶಕ್ಕೆ ನುಗ್ಗಿದವು.

ಕನ್ನಡಪ್ರಭ ವಾರ್ತೆ ಭಾರತೀನಗರ

ಕಾರ್ಕಹಳ್ಳಿ ಹೊರವಲಯದ ಜಮೀನುಗಳಲ್ಲಿ 2 ಕಾಡಾನೆಗಳು ಪ್ರತ್ಯಕ್ಷಗೊಂಡು ರೈತರ ಜಮೀನಿನಲ್ಲಿ ಕಬ್ಬಿನ ಫಸಲನ್ನು ನಾಶಪಡಿಸಿವೆ.

ಗ್ರಾಮದ ನಾಗರಾಜು ಬಿನ್ ಸಿದ್ದೇಗೌಡ ಉ.ಸಣ್ಣೇಗೌಡರ ಕಬ್ಬಿನ ಗದ್ದೆಯಲ್ಲಿ ಕಳೆದ ಗುರುವಾರ ಸಂಜೆ ಕಾಡಾನೆಗಳು ಕಬ್ಬಿನ ಫಸಲನ್ನು ನಾಶ ಪಡಿಸುತ್ತಿರುವುದನ್ನು ರೈತರು ಗಮನಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಆನೆಗಳನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದು ಜಮೀನುಗಳಲ್ಲಿ ಕಬ್ಬನ್ನು ಕಾಡಾನೆಗಳು ನಾಶ ಪಡಿಸುತ್ತಿದೆ. ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ ಮೇರೆಗೆ ತಕ್ಷಣವೇ ಕಾರ್ಯ ಪ್ರವೃತ್ತರಾದ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ರವಿ ಅವರ ನೇತೃತ್ವದ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.

ನಂತರ ಅರಣ್ಯ ಇಲಾಖೆ ಅಧಿಕಾರಿ ಗವಿಯಪ್ಪ, ಡಿಆರ್‌ಎಫ್ ಮುರುಳಿ, ಕಾಂತರಾಜು, ಅರಣ್ಯ ರಕ್ಷಕರಾದ ಸುದರ್ಶನ್, ಚಿನ್ನಪ್ಪ, ಹುಣಸೂರು ಆನೆ ಕಾರ್ಯಪಡೆ ಸಿಬ್ಬಂದಿ, ಮಂಡ್ಯ ವಲಯದ ಸಿಬ್ಬಂದಿ, ಕೆ.ಎಂ.ದೊಡ್ಡಿ ಪೊಲೀಸರು ಆನೆಗಳನ್ನು ಓಡಿಸಲು ಕಾರ್ಯ ಪ್ರವೃತ್ತರಾಗಿದ್ದಾರೆ.

ಕಬ್ಬಿನ ಗದ್ದೆ ಮಧ್ಯಭಾಗದಲ್ಲಿ ಆನೆಗಳನ್ನು ಹೊರ ಬಾರದ ಕಾರಣ ಮದ್ದುಗಳನ್ನು ಸಿಡಿಸುವ ಮೂಲಕ ಆನೆಗಳನ್ನು ಓಡಿಸಲು ಮುಂದಾದರು. ರಾತ್ರಿ ವೇಳೆಗೆ ಕಾಡಾನೆಗಳನ್ನು ಕಾಡಿನತ್ತ ಓಡಿಸುವ ಪ್ರಯತ್ನ ನಡೆಯುತ್ತಾದರೂ ಕಾಡಾನೆಗಳು ಕಾಡಿನತ್ತ ತೆರಳದೆ ಮದ್ದೂರು ಮಳವಳ್ಳಿ ಮುಖ್ಯ ರಸ್ತೆಯ ಬಲಭಾಗದಲ್ಲಿರುವ ಬಿದರಹಳ್ಳಿ ಬಯಲು ಪ್ರದೇಶಕ್ಕೆ ನುಗ್ಗಿದವು.

ಹಗಲು ವೇಳೆಯಲ್ಲಿ ಆನೆಗಳನ್ನು ಕಾಡಿಗೆ ಓಡಿಸಲು ಯಾವುದೇ ಪ್ರಯತ್ನ ಮಾಡದೇ ಸಂಜೆ ವೇಳೆಗೆ ಕಾರ್ಯಾಚರಣೆ ನಡೆಸಲು ತೀರ್ಮಾನ ಕೈಗೊಂಡು ರಾತ್ರಿ ಕಾಡಾನೆಗಳನ್ನು ಕಾಡಿನತ್ತ ಓಡಿಸುವ ಕಾರ್ಯಾಚರಣೆ ನಡೆಸಿದರು.1.5 ಲಕ್ಷ. ರು. ಮೌಲ್ಯದ ಏಳು ಕುರಿಗಳ ಕಳ್ಳತನ

ಕನ್ನಡಪ್ರಭ ವಾರ್ತೆ ಮಂಡ್ಯಕೆ.ಆರ್.ಪೇಟೆ ತಾಲೂಕಿನ ಹಳೆ ಮಾವಿನಕೆರೆ ಗ್ರಾಮದ ರೈತ ಚಂದ್ರೇಗೌಡ ಅವರಿಗೆ ಸೇರಿದ 1.5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಏಳು ಕುರಿಗಳನ್ನು ತಡರಾತ್ರಿ ಕಳ್ಳತನ ಮಾಡಿರುವ ಘಟನೆ ಜರುಗಿದೆ. ರೈತ ಚಂದ್ರೇಗೌಡ ಮಾತನಾಡಿ, ಹಲವು ವರ್ಷಗಳಿಂದ ಸಾಲ ಮಾಡಿ ಕುರಿ ಸಾಕಾಣಿಕೆಯಲ್ಲೆ ಜೀವನ ಸಾಗಿಸುತ್ತಿದ್ದೆವು. ಆದರೆ, ಗುರುವಾರ ತಡರಾತ್ರಿ ಕೊಟ್ಟಿಗೆಯಲ್ಲಿದ್ದ 47 ಕುರಿಗಳಲ್ಲಿ 1.5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಏಳು ಕುರಿಗಳನ್ನುಯಾರೋ ಕಳ್ಳರು ಕಳ್ಳತನ ಮಾಡಿದ್ದಾರೆ. ಈ ಕಾಯಕವನ್ನೇ ಅವಲಂಬಿಸಿ ಜೀವನ ಸಾಗಿಸುತ್ತಿದ್ದ ನಮ್ಮ ಕುಟುಂಬ ಘಟನೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದರು. ಗ್ರಾಪಂ ಮಾಜಿ ಸದಸ್ಯ ಗಂಗಾಧರ್, ಯುವ ಮುಖಂಡ ಚೇತನ, ಬಾಲರಾಜ್, ಧರ್ಮರಾಜ್, ನಂದೀಶ್, ಶಾಂತ ಎಂ.ಎಚ್, ಪಂಕಜ ಇದ್ದರು.

Share this article