ಜೆಇಇ ಅಡ್ವಾನ್ಸ್ಡ್‌: ಅರ್ಹತೆ ಪಡೆದ ಗುರುಕುಲದ 200 ವಿದ್ಯಾರ್ಥಿಗಳು

KannadaprabhaNewsNetwork | Published : Feb 14, 2024 2:23 AM

ಸಾರಾಂಶ

ಜೆಇಇ ಮೇನ್ಸ್‌ ಪರೀಕ್ಷೆ: ಅಖಿಲೇಶಗೆ 99.63, ಪ್ರಜ್ವಲ್‌ಗೆ 99.51 ಪರ್ಸೆಂಟೈಲ್‌. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ನಾಡೋಜ ಪುರಸ್ಕೃತ ಡಾ. ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಇತರರು ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಭಾಲ್ಕಿ

ತಾಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಅಖಿಲೇಶ ರಮೇಶ, ಪ್ರಜ್ವಲ್‌ ವಿಜಯಕುಮಾರ ಜೆಇಇ ಮೇನ್ಸ್‌ ಪರೀಕ್ಷೆಯಲ್ಲಿ ಕ್ರಮವಾಗಿ 99.63 ಹಾಗೂ 99.51 ಪರ್ಸೆಂಟೈಲ್‌ ಅಂಕ ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಸಾಧಕ ವಿದ್ಯಾರ್ಥಿಗಳ ವಿವರ:

ಸಂತೋಷಿ ಮಲ್ಲಿಕಾರ್ಜುನ 98.71, ಆಕಾಶ ಸಿದ್ದಪ್ಪ 98.69, ಮಹೇಂದ್ರ ನಾಗೇಶ 98.43, ಮಲ್ಲಿಕಾರ್ಜುನ ಬಸಪ್ಪ 98.34, ಸಂದೇಶರೆಡ್ಡಿ ನಾಗರೆಡ್ಡಿ 97.87, ಸಾಯಿಕುಮಾರ ರಾಜಕುಮಾರ 97.81, ಸಂತೋಷಿ ಸಂಜೀವಕುಮಾರ 97.80, ಸನತ್‌ ಶರಣಪ್ಪ 97.80, ರೋಹಿತ ದಿನೇಶ 97.72, ವಿವೇಕ ತ್ರಿಂಬಕ 97.69, ವರುಣ ಯರಗೇರೆ 97.20, ಆರ್ಯನ್‌ ಅಷ್ಟಕಲಾ 97.13, ಗುರುಬಸವ ಬಸಪ್ಪಾ 97, ಸ್ವರಾಜ್‌ ರಾಜಶೇಖರ 97, ಅಭಿಷೇಕ ಬಸವರಾಜ 97, ಕುಸುಮಾಂಜಲಿ ಸುರೇಶಬಾಬು 96.95, ಬಸವಪ್ರಸಾದ ಮೋಹನರೆಡ್ಡಿ 96.84, ಆದಿತ್ಯ ಸುನೀಲಕುಮಾರ 96.83, ಸುಮಿತ ಗುಣವಂತ 96.75, ಕಿರಣಕುಮಾರ ರಾಜೇಂದ್ರ 96.71, ವರ್ಧನ ವೆಂಕಟೇಶ 96.46, ವಿರೇಂದ್ರ ಬಸವರಾಜ 96.12, ಸುಮಿತ ರಾಜಕುಮಾರ 96.03. ಮೋಹಿತ್‌ ಮನೋಹರ 96, ಅವಿನಾಶ ನಾಗಪ್ಪಾ 96, ಸಾಕ್ಷಿ ದಿನಕರ 96, ಶರಣಬಸವ ಶೇಶಪ್ಪಾ 95.89, ಅಲ್ತಾಫ್‌ ಖಲೀಲ್‌ 95.85, ಅವಿನಾಶ ವಿಶ್ವನಾಥ 95.76, ಅಮರನಾಥ ರಾಜಕುಮಾರ 95.72, ಅಲೋಕ ಕಿಶೋರ 95.60, ಅಕ್ಷತಾ ಶ್ರೀಶೈಲ್‌ 95.32, ರವಿಚಂದ್ರ ಶ್ರೀನಿವಾಸ 95.27, ಆದರ್ಶಕುಮಾರ ಶಿವಕುಮಾರ 95.12, ಆಕಾಶ ಅನಂತ 95 ಪರ್ಸೆಂಟೈಲ್‌ ಸೇರಿದಂತೆ ಸುಮಾರು 200 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್‌ಡ್‌ ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ, ನಾಡೋಜ ಪುರಸ್ಕೃತ ಡಾ. ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಸಂತಸ ವ್ಯಕ್ತಪಡಿಸಿದ್ದಾರೆ.

Share this article