ಪ್ರಭುದೇವ ಕ್ರೆಡಿಟ್ ಸಂಸ್ಥೆಗೆ 21 ಲಕ್ಷ ಲಾಭ

KannadaprabhaNewsNetwork |  
Published : Aug 30, 2025, 01:02 AM IST
ಚಿಕ್ಕೋಡಿ ಪ್ರಭುದೇವ ಸೌಹಾರ್ದ ಸಹಕಾರಿಯ 7ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಉತ್ತಮ ಗ್ರಾಹಕರನ್ನು ಸಂಪಾದನಾ ಸ್ವಾಮೀಜಿ, ಸಂಸ್ಥಾಪಕ ಸುಭಾಷ ಕವಲಾಪೂರೆ ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಪ್ರಭುದೇವರ ಹೆಸರಿನಲ್ಲಿ ಸ್ಥಾಪನೆಯಾದ ಸಹಕಾರಿ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಇಂದು ಹೆಮ್ಮರವಾಗಿ ಬೆಳೆದು 21 ಲಕ್ಷ ಲಾಭಗಳಿಸಿರುವುದು ಶ್ಲಾಘನೀಯ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರೈತರ ಜೀವನಾಡಿಯಾಗಿರುವ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಪ್ರಾಮಾಣಿಕ ಸೇವೆ ಹಾಗೂ ಗ್ರಾಹಕರು ಸರಿಯಾದ ರೀತಿಯಲ್ಲಿ ಸಾಲ ಮರುಪಾವತಿ ಮಾಡಿದಾಗ ಮಾತೃ ಸಂಸ್ಥೆಗಳು ಬೆಳೆಯಲು ಸಾಧ್ಯ ಎಂದು ಶ್ರೀ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮೀಜಿ ಹೇಳೀದರು.

ಇಲ್ಲಿನ ಶ್ರೀ ಪ್ರಭುದೇವ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಸಭಾಗೃಹದಲ್ಲಿ ಸಹಕಾರಿಯ 7ನೇ ವಾರ್ಷಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರಭುದೇವರ ಹೆಸರಿನಲ್ಲಿ ಸ್ಥಾಪನೆಯಾದ ಸಹಕಾರಿ ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಇಂದು ಹೆಮ್ಮರವಾಗಿ ಬೆಳೆದು ₹21 ಲಕ್ಷ ಲಾಭಗಳಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಶ್ರೀ ಪ್ರಭುದೇವ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುಭಾಷ ಕವಲಾಪೂರೆ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಸಹಕಾರಿಯು 21 ಲಕ್ಷ 50 ಸಾವಿರ ರು. ನಿವ್ವಳ ಲಾಭಗಳಸಿದೆ ಎಂದು ಹೇಳಿದರು,

ಸಹಕಾರಿಯ ಬೆಳವಣಿಗೆ ದೃಷ್ಠಿಯಿಂದ ಸದಸ್ಯರಿಗೆ ಶೇ.10 ರಷ್ಟು ಲಾಭಾಂಶ ವಿತರಿಸಲಾಗುತ್ತಿದೆ. ಅ ವರ್ಗದಲ್ಲಿ ಸಂಸ್ಥೆ ಬೆಳೆದಿದೆ. 858 ಸದಸ್ಯರನ್ನು ಹೊಂದಿದ್ದು 29 ಲಕ್ಷ 31 ಸಾವಿರ ರು. ಶೇರು ಬಂಡವಾಳ, 18 ಕೋಟಿ 21 ಲಕ್ಷ ರು. ಠೇವು, 19 ಕೋಟಿ 30 ರು. ಲಕ್ಷ ದುಡಿಯುವ ಬಂಡವಾಳ, 77 ಕೋಟಿ 13 ಲಕ್ಷ ರು. ವಾರ್ಷಿಕ ವಹಿವಾಟು ಹೊಂದಿ 21 ಲಕ್ಷ 50 ಸಾವಿರ ರು. ನಿವ್ವಳ ಲಾಭ ಗಳಿಸಿದೆ ಎಂದರು. ಇದೇ ವೇಳೆ ಉತ್ತಮ ಗ್ರಾಹಕರನ್ನು ಸಂಪಾದನಾ ಸ್ವಾಮೀಜಿ, ಸಂಸ್ಥಾಪಕ ಸುಭಾಷ ಕವಲಾಪೂರೆ ಅವರು ಸನ್ಮಾನಿಸಿ ಗೌರವಿಸಿದರು.

ನಿರ್ದೇಶಕರಾದ ಮಹೇಶ ಭಾತೆ, ಸದಾಶಿವ ಮಾಳಿ, ಇರಶಾದ ಇಪ್ಪೆರಿ, ಕುಮಾರ್ ಮದನ್ನವರ, ಸತೀಶ ನೂಲಿ, ಕಾಂಚನ ದೊಡ್ಡಮನಿ, ಶೋಭಾ ಹಾಗರಗಿ, ಸಂಜು ಹಿರೇಮಠ, ಶಂಕರ ಮೇದಾರ, ನೀಲಕಂಠ ವಂಟಮುತ್ತೆ, ಸಂಗಪ್ಪ ಹಂಪಣ್ಣವರ ಉಪಸ್ಥಿತರಿದ್ದರು. ನಿರ್ದೇಶಕ ನೀಲಕಂಠ ವಂಟಮುತ್ತೆ ವಂದಿಸಿದರು. ಸಹಕಾರಿಯ ಉಪಾಧ್ಯಕ್ಷ ಪ್ರಭು ಬೆಲ್ಲದ ಸ್ವಾಗತಿಸಿದರು.ಆರ್.ಎಂ.ಬುನವಾಳೆ ನಿರೂಪಿಸಿದರು. ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ ಮುಗುದುಮ್ಮ ಆರ್ಥಿಕ ವರ್ಷದ ವರದಿ ಮಂಡಿಸಿದರು. ಎನ್.ಎಸ್.ವಂಟಮುತ್ತೆ ವಂದಿಸಿದರು.

PREV

Recommended Stories

ಜಿಎಸ್ಟಿ ಸ್ಲ್ಯಾಬ್‌ ಕಡಿತದಿಂದ 2.5 ಲಕ್ಷ ಕೋಟಿ ರು. ನಷ್ಟ
ಯುದ್ಧಪೀಡಿತ ಉಕ್ರೇನಿಯರಿಗೆ ಆರ್ಟ್ ಆಫ್ ಲಿವಿಂಗ್ ಆಸರೆ