ಕಡೂರು-ಬೀರೂರು ಪಟ್ಟಣಗಳ ಯುಜಿಡಿ ಕಾಮಗಾರಿಗೆ 27 ಕೋಟಿ: ಆನಂದ್‌

KannadaprabhaNewsNetwork | Published : Mar 10, 2024 1:35 AM

ಸಾರಾಂಶ

ಕಡೂರು-ಬೀರೂರು ಪಟ್ಟಣಗಳ ಯುಜಿಡಿ ಕಾಮಗಾರಿಗೆ 27 ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

- ಪಟ್ಟಣದ ಕನಕವೃತ್ತದ ಮಸೀದಿ ಮುಂಭಾಗ, 14ನೇ ವಾರ್ಡಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಕನ್ನಡಪ್ರಭ ವಾರ್ತೆ, ಕಡೂರು

ಕಡೂರು-ಬೀರೂರು ಪಟ್ಟಣಗಳ ಯುಜಿಡಿ ಕಾಮಗಾರಿಗೆ 27 ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಕನಕವೃತ್ತದ ಮಸೀದಿ ಮುಂಭಾಗದ ಹಾಗೂ 14ನೇ ವಾರ್ಡಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2023-24 ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೂಲಭೂತ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಎಲ್ಲಾ ವರ್ಗಗಳ ಹಿತವನ್ನು ಕಾಪಾಡಲು ಆಯಾ ಇಲಾಖೆಗಳಿಂದ ಅನುದಾನ ತರಲಾಗುತ್ತಿದೆ. ಪೂರ್ಣ ಪ್ರಮಾಣದ ಬಜೆಟ್ ನಂತರ ಕ್ಷೇತ್ರಕ್ಕೆಹೆಚ್ಚಿನ ಅನುದಾನ ತರಲಾಗುವುದು, ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ 40 ಕೋಟಿ ಅನುದಾನ ಮಂಜೂರಾಗಿ ಈಗಾಗಲೇ ಆಡಳಿತಾತ್ಮಕ ಮಂಜೂರಾತಿ ದೊರಕಿದ್ದು ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.

ಈ ಎಲ್ಲ ಕಾಮಗಾರಿಗಳು ಶೀಘ್ರ ಮುಗಿಯಲಿದೆ. ಕಡೂರು, ಬೀರೂರು ಪುರಸಭೆ ಗಳಿಗೆ ತಲಾ 5 ಕೋಟಿ ವಿಶೇಷ ಅನುದಾನದ ಮೂಲಕ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡಲಾಗುವುದು ಎಂದರು.

ಕಡೂರು ಪುರಸಭೆಗೆ ಯುಜಿಡಿ ಕಾಮಗಾರಿಗೆ 27 ಕೋಟಿ ರು. ಅನುದಾನ ಬಂದಿದೆ. ನೂತನ ಬಸ್ ನಿಲ್ದಾಣದ ನಿರ್ಮಾಣದ ಕಾಮಗಾರಿ ಸದ್ಯದಲ್ಲಿಯೇ ಚಾಲನೆ ದೊರಕಲಿದೆ. ಪುರಸಭಾ ಸದಸ್ಯರ ಸಹಕಾರದಿಂದ ಪಟ್ಟಣದ ಅಭಿವೃದ್ದಿಗೊಳಿ ಸಲಾಗುವುದು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗೃತಾ ಕ್ರಮ ವಹಿಸ ಲಾಗುವುದು ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಕ್ಷೇತ್ರದ ಶಾಸಕರು ಎಲ್ಲ ವರ್ಗದವರ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುತ್ತಿದ್ದು, ಕಳೆದ ಬಾರಿ ನಗರೋತ್ಥಾನ ಯೋಜನೆಯಲ್ಲಿ ಕಡೂರು ಬೀರೂರು ಪಟ್ಟಣಗಳ ಅಬಿವೃದ್ದಿಗೆ10ಕೋಟಿ ತಂದಿದ್ದು, ನೂತನ ಶಾಸಕರು ಈ ಬಾರಿ ಈ ಎರಡೂ ಪಟ್ಟಣಗಳ ಅಭಿವೃದ್ಧಿಗೆ ವಿಶೇಷ ಅನುದಾನ ತರುವಂತೆ ಮನವಿ ಮಾಡಿದರು. ಬಿಸಿಎಂ ಇಲಾಖೆ ಅನುದಾನದಲ್ಲಿ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ವಾರ್ಡು ಗಳಲ್ಲಿ ರಸ್ತೆ ಚರಂಡಿ ಅಭಿವೃದ್ದಿ ಕಾರ್ಯ ನಡೆಯಲಿದೆ. ಪಟ್ಟಣದಲ್ಲಿ ಇದುವರೆಗೂ ಕುಡಿವ ನೀರಿನ ಅಭಾವ ತಲೆದೋರಿಲ್ಲ ಆದರೆ ಬರುವ ದಿನಗಳಲ್ಲಿ ನೀರಿನ ಅಭಾವ ಬಾರದಂತೆ ಮುಂಜಾಗ್ರತೆ ವಹಿಸಬೇಕಿದೆ ಎಂದು ಮನವಿ ಮಾಡಿದರು.

ಪುರಸಭಾ ಸದಸ್ಯ ತೋಟದಮನೆ ಮೋಹನ್, ಕ್ಷೇತ್ರದ ಎಲ್ಲ ವರ್ಗಗಳ ಅಭಿವೃದ್ದಿಗೆ ಆದ್ಯತೆ ನೀಡುತ್ತಿರುವ ಶಾಸಕ ಆನಂದ್ ರವರು ಜನರಿಗೆ ನೀಡಿದ ಭರವಸೆಯಂತೆ ಕೆಲಸ ಮಾಡುತ್ತಿದ್ದಾರೆ. ಅವರೊಂದಿಗೆ ಎಲ್ಲರೂ ಕೈಜೋಡಿಸೋಣ ಎಂದರು.

ಪುರಸಭೆ ಸದಸ್ಯರಾದ ಈರಳ್ಳಿ ರಮೇಶ್, ಸೈಯ್ಯದ್ ಯಾಸೀನ್, ಮಂಡಿ ಇಕ್ಬಾಲ್, ಮುಖಂಡರಾದ ಎನ್.ಬಷೀರ್ಸಾಬ್, ಅತಾವುಲ್ಲಾ, ಇಮ್ರಾನ್ ಖಾನ್, ಇಸ್ಮಾಯಿಲ್, ಅಬಿದ್ ಪಾಷಾ, ಎನ್.ಇಮಾಮ್, ಮಂಜುನಾಥ್, ಪಂಗ್ಲಿ ಮಂಜುನಾಥ್, ಖಾದರ್ ಮತ್ತಿತರರು ಇದ್ದರು.9ಕೆಕೆಡಿಯು1.

ಕಡೂರು ಪಟ್ಟಣದ ಕನಕವೃತ್ತದ ಬಳಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೂಲಭೂತ ಸೌಲಭ್ಯಗಳ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ಭೂಮಿಪೂಜೆ ನೆರವೇರಿಸಿದರು.

Share this article