೨ಎ ಮೀಸಲಾತಿ ಸಿಗುವವರೆಗೂ ಹೋರಾಟ

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಸಿಗಲಿ ಎಂಬ ಸದುದ್ದೇಶದಿಂದ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಸಿಗುವ ವರೆಗೂ ಹೋರಾಟ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.ಲಿಂಗಾಯತ ಪಂಚಮಸಾಲಿ ಸಮಾಜವನ್ನು ೨ಎ ಮೀಸಲಾತಿ ಅನುಷ್ಠಾನಕ್ಕೆ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಿ ಶಿಫಾರಸು ಮಾಡುವಂತೆ ಹಕ್ಕೊತ್ತಾಯಿಸಿ ರಾಜ್ಯಾದಂತ ಆರಂಭವಾಗಿರುವ ೬ನೇ ಹಂತದ ಚಳವಳಿಗೆ ತಾಲೂಕಿನ ಅಬಲೂರು ಗ್ರಾಮದಲ್ಲಿನ ಸರ್ವಜ್ಞನ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಹಾವೇರಿ ಜಿಲ್ಲೆಯಾದ್ಯಂತ ಕೈಗೊಳ್ಳುವ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ನಮ್ಮ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಸಿಗಲಿ ಎಂಬ ಸದುದ್ದೇಶದಿಂದ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಸಿಗುವ ವರೆಗೂ ಹೋರಾಟ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಲಿಂಗಾಯತ ಪಂಚಮಸಾಲಿ ಸಮಾಜವನ್ನು ೨ಎ ಮೀಸಲಾತಿ ಅನುಷ್ಠಾನಕ್ಕೆ ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಿ ಶಿಫಾರಸು ಮಾಡುವಂತೆ ಹಕ್ಕೊತ್ತಾಯಿಸಿ ರಾಜ್ಯಾದಂತ ಆರಂಭವಾಗಿರುವ ೬ನೇ ಹಂತದ ಚಳವಳಿಗೆ ತಾಲೂಕಿನ ಅಬಲೂರು ಗ್ರಾಮದಲ್ಲಿನ ಸರ್ವಜ್ಞನ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಹಾವೇರಿ ಜಿಲ್ಲೆಯಾದ್ಯಂತ ಕೈಗೊಳ್ಳುವ ಪ್ರವಾಸಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವುದು ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸಿ ಶಿಫಾರಸು ಮಾಡುವಂತೆ ಹೋರಾಟ ಆರಂಭಿಸಿದ್ದೇವೆ. ಮೀಸಲಾತಿ ವಿಷಯದಲ್ಲಿ ನಾವೆಲ್ಲ ಅಗ್ನಿಪರೀಕ್ಷೆ ಎದುರಿಸಿದ್ದೇವೆ. ಆದರೂ ಧೃತಿಗೆಡದೇ ನಮ್ಮ ಮಕ್ಕಳ ಉದ್ಧಾರಕ್ಕೆ ಮೀಸಲಾತಿ ಪಡೆಯಲೇಬೇಕು ಎಂಬ ಸಂಕಲ್ಪ ಮಾಡಿದ್ದೇವೆ. ನಾವು ಮೀಸಲಾತಿ ಪಡೆದುಕೊಳ್ಳವವರೆಗೆ ವಿರಮಿಸುವುದು ಬೇಡ ಸರ್ಕಾರಕ್ಕೆ ಆಗ್ರಹಿಸೋಣ. ಯಾವುದೇ ಸರ್ಕಾರ ಬರಲಿ, ಹೋರಾಟ ಮಾಡಿ ಪಡೆದುಕೊಳ್ಳೋಣ ಎಂದರು.

ಮೀಸಲಾತಿ ಆದೇಶ ಪತ್ರ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ, ಮಕ್ಕಳ ವಿದ್ಯಾಭ್ಯಾಸ, ನೌಕರಿ ಸಿಗುವವರೆಗೂ ನಾ ವಿರಮಿಸುವುದಿಲ್ಲ, ನನಗೆ ಯಾವುದೇ ಸ್ವಾರ್ಥ ಇಲ್ಲ, ನನಗೆ ಸಮಾಜದ ಮಕ್ಕಳ ಭವಿಷ್ಯ ಮುಖ್ಯವಾಗಿದೆ. ಲಿಂಗಪೂಜೆಯೊಂದಿಗೆ ಹೋರಾಟ ಆರಂಭಿಸಲಾಗಿದೆ. ಈಗಾಗಲೇ ಆಶ್ವಾಸನೆ ನೀಡುತ್ತಿದ್ದಾರೆ. ಆದರೆ ಆದೇಶ ಪಡೆದುಕೊಳ್ಳವುದು ನಮ್ಮ ಗುರಿಯಾಗಿದೆ. ಜಿಲ್ಲೆಯ ಚಳಗೇರಿ ಗ್ರಾಮದಲ್ಲಿನ ರಾಷ್ಟ್ರೀಯ ಹೆದ್ದಾರಿ ತಡೆದು ಲಿಂಗಪೂಜೆ ಮಾಡುವ ಮೂಲಕ ನಮ್ಮ ಹೋರಾಟ ಮಾಡಲಾಗುವುದು ಎಂದರು.

ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ನಿಂಗಪ್ಪ ಚಳಗೇರಿ, ಪಂಚಮಸಾಲಿ ೨ಎ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಿ.ಆರ್. ಬಳ್ಳಾರಿ ಮಾತನಾಡಿದರು.

ಪರಮೇಶಪ್ಪ ಹಲಗೇರಿ, ನೀಲಮ್ಮ ಹೊಸಮನಿ, ಎಂ.ಜಿ. ಈಸರಗೌಡ, ಹೊಳಬಸಪ್ಪ ರಾಮಗಿರಿ, ಸಿದ್ದಪ್ಪ ಚಿಕ್ಕಬಿದರಿ, ಈರಪ್ಪ ಕಣವೇರ, ಗದಿಗೆಪ್ಪ ಹೊರಕೇರಿ, ಬಸಮ್ಮ ಅಬಲೂರು, ಬಸವರಾಜ ಪೂಜಾರ, ಎಂ.ಡಿ. ಸೀಮಿಕೇರಿ, ಕುಮಾರ ಜಗಳೂರು, ವಿನಯ ದಳವಾಯಿ, ಶಶಿಕಲಾ ಕಣವೇರ, ಗೀತಾ ಪಾಟೀಲ, ಕೊಟ್ರೇಶ ಅಂಗಡಿ, ಶಿವಾನಂದ ಪೂಜಾರ, ಕಲ್ಲೇಶ ಪೂಜಾರ, ರುದ್ರೇಶ ಹೊರಕೇರಿ, ಗಣೇಶ ತಾವರಗಿ, ಭರತ ಕಣವೇರ, ಮಂಜುನಾಥ ಕಣವೇರ, ಏಕೇಶಪ್ಪ ಅಡಗಂಟಿ, ಬಸವರಾಜ ಹಾವೇರಿ, ವಿಜಯ ದಾನಮ್ಮನವರ, ಪ್ರವೀಣ್ ಅಬಲೂರು, ಹಾಲೇಶ ಬೇವಿನಹಳ್ಳಿ, ಬಸವಣ್ಣೆಪ್ಪ ಬೇವಿನಹಳ್ಳಿ, ಪ್ರಕಾಶ ಅಂಗಡಿ, ಅಶೋಕ ಪಾಟೀಲ, ವೀರಭದ್ರಪ್ಪ ಮುದ್ದೇಪ್ಪಗೌಡ್ರ, ಮಲ್ಲಿಕಾರ್ಜುನ ಬಣಕಾರ ಇತರರಿದ್ದರು.

Share this article