32 ಜೀವಂತ ನಾಡಬಾಂಬ್‌ ವಶ: ನಾಲ್ವರು ಪರಾರಿ

KannadaprabhaNewsNetwork |  
Published : Dec 27, 2024, 12:45 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲೆಂದು ತಂದಿಟ್ಟಿದ್ದ 32 ಜೀವಂತ ನಾಡಬಾಂಬ್‌ (ಮದ್ದುಗುಂಡು)ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು- ಸಿಬ್ಬಂದಿ ತಂಡ ಪತ್ತೆಹಚ್ಚಿದೆ.

- ಇಬ್ಬರ ಗುರುತು ಪತ್ತೆ, ಇನ್ನಿಬ್ಬರ ಬಲೆಗೆ ಕೆಡವಲು ಅರಣ್ಯ ಇಲಾಖೆ ಚುರುಕು - - - ಕನ್ನಡಪ್ರಭ ವಾರ್ತೆ ನ್ಯಾಮತಿ/ದಾವಣಗೆರೆ ನ್ಯಾಮತಿ ತಾಲೂಕಿನ ಫಲವನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲೆಂದು ತಂದಿಟ್ಟಿದ್ದ 32 ಜೀವಂತ ನಾಡಬಾಂಬ್‌ (ಮದ್ದುಗುಂಡು)ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು- ಸಿಬ್ಬಂದಿ ತಂಡ ಪತ್ತೆಹಚ್ಚಿದೆ.

ಘಟನೆಯಲ್ಲಿ ನಾಲ್ವರು ಭಾಗಿಯಾಗಿದ್ದು, ನ್ಯಾಮತಿ ತಾಲೂಕಿನ ಮಾದಾಪುರ ಗ್ರಾಮದ ತಿಮ್ಮಪ್ಪ, ಗುಡ್ಡಪ್ಪ ಎಂಬವರ ಗುರುತು ಪತ್ತೆಹಚ್ಚಲಾಗಿದೆ. ಪರಾರಿಯಾದ ಇನ್ನಿಬ್ಬರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಸರ್ವೆ ನಂ.61ರ ಹರಮಘಟ್ಟ ರಾಜ್ಯ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಾಡಬಾಂಬ್‌ಗಳು ಪತ್ತೆಯಾಗಿವೆ. ಅರಣ್ಯ ಅಧಿಕಾರಿಗಳಾದ ಬರ್ಕತ್‌ ಆಲಿ, ಗಸ್ತು ಅರಣ್ಯ ಪಾಲಕ ಎಚ್‌.ಬಿ.ಅಂಜಲಿ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಅರಣ್ಯ ಇಲಾಖೆಯವರು ಕಿಡಿಗೇಡಿಗಳನ್ನು ಬೆನ್ನಟ್ಟಿದ್ದಾರೆ. ಈ ವೇಳೆ ಅಕ್ರಮವಾಗಿ ಅರಣ್ಯ ಪ್ರವೇಶಿಸಿದ್ದವರು ಬೈಕ್‌ಗಳನ್ನು ಅಲ್ಲೇ ಬಿಟ್ಟು, ಕೈಯಲ್ಲಿದ್ದ ಕೆಂಪು ಮತ್ತು ಹಳದಿ ಮಿಶ್ರಿತ ಕವರ್‌ಗಳೊಂದಿಗೆ ಕಾಡಿನಲ್ಲಿ ಪರಾರಿಯಾಗಿದ್ದಾರೆ.

ಈ ಹಿಂದೆಯೂ ಇದೇ ಸರ್ವೆ ನಂ. 61ರಲ್ಲಿ ನಾಡಬಾಂಬ್‌ ಇಟ್ಟಿರುವುದು ಬೆಳಕಿಗೆ ಬಂದಿತ್ತು. ಅರಣ್ಯ ಇಲಾಖೆಯವರು ವಶಕ್ಕೆ ಪಡೆದ ಬೈಕ್‌ಗಳನ್ನು ನ್ಯಾಮತಿ ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಗಳ ವಿರುದ್ಧ ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಉಪವಲಯ ಅರಣ್ಯಾಧಿಕಾರಿ ಬರ್ಕತ್‌ ಆಲಿ ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಾಚಾರಣೆಯಲ್ಲಿ ಅರಣ್ಯಾಧಿಕಾರಿ ಬರ್ಕತ್‌ ಆಲಿ, ಗಸ್ತು ಅರಣ್ಯ ಪಾಲಕ ಎಚ್‌.ಬಿ.ಅಂಜಲಿ, ಕ್ಷೇಮಾಭಿವೃದ್ಧಿ ಅರಣ್ಯ ವೀಕ್ಷಕ ಎಂ.ಪಿ.ಬಸವರಾಜಪ್ಪ, ನೆಡುತೋಪು ಕಾವಲುಗಾರ ಸುನೀಲ, ಪ್ರವೀಣ ಪಾಲ್ಗೊಂಡಿದ್ದರು.

- - -

-26ಕೆಡಿವಿಜಿ1, 2: ನ್ಯಾಮತಿ ತಾಲೂಕಿನ ಹರಮಘಟ್ಟ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗಾರರು ಬಿಟ್ಟುಹೋದ ಬೈಕ್‌ಗಳು, 32 ಜೀವಂತ ನಾಡಬಾಂಬ್‌ಗಳನ್ನು ಅರಣ್ಯ ಅಧಿಕಾರಿಗಳು, ಸಿಬ್ಬಂದಿ ವಶಕ್ಕೆ ಪಡೆದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ