ಕನ್ನಡಪ್ರಭ ವಾರ್ತೆ ಮೈಸೂರುಆಧುನಿಕ ಗಿರಣಿಗಳ ನಿರ್ವಹಣೆ ಮತ್ತು ಸಂಬಂಧಿಸಿದ ತರಬೇತಿಯನ್ನು ಸಿಎಫ್.ಟಿ.ಆರ್.ಐ ಅತ್ಯುತ್ತಮವಾಗಿ ನೀಡುತ್ತಿದೆ ಎಂದು ಸಂಸ್ಥೆ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣಸಿಂಗ್ ಹೇಳಿದರು.ನಗರದ ಕೇಂದ್ರ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶುಕ್ರವಾರ ನಡೆದ 43ನೇ ಐಎಸ್ಎಂಟಿ ಕೋರ್ಸ್ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಇಂಟರ್ ನ್ಯಾಷನಲ್ಸ್ಕೂಲ್ಆಫ್ಮಿಲ್ಲಿಂಗ್ ಟೆಕ್ನಾಲಜಿಯು ಭಾರತ ಮತ್ತು ಸ್ವಿಸ್ ಸಹಯೋಗದಲ್ಲಿ 1981ರಲ್ಲಿ ಕೈಗೊಂಡ ಯೋಜನೆಯಾಗಿದ್ದು, ಸಂಸ್ಥೆಯ ಅಂದಿನ ನಿರ್ದೇಶಕರಾಗಿದ್ದ ಡಾ.ಬಿ.ಎಲ್. ಆಮ್ಲಾ ಅವರ ನೇತೃತ್ವದಲ್ಲಿ ಆರಂಭಗೊಂಡು ಹಂತ ಹಂತವಾಗಿ ಬೆಳವಣಿಗೆ ಹೊಂದುತ್ತಿದೆ. ಕಾಲ ಕಾಲಕ್ಕೆ ತಕ್ಕಂತೆ ಕೌಶಲ್ಯ ಮತ್ತು ತರಬೇತಿ ನೀಡಲಾಗುತ್ತಿದೆ. ಭಾರತ ಮತ್ತು ಸ್ವಿಡ್ಜರಲ್ಯಾಂಡ್ ಸರ್ಕಾರದ ನೇತೃತ್ವದಲ್ಲಿ ಇದು ನಡೆಯುತ್ತಿದೆ. ದೇಶದ ಉಷ್ಣ ವಲಯದಲ್ಲಿ ಮಿಲ್ಲಿಂಗ್ ತಂತ್ರಜ್ಞಾನಕ್ಕೆ ಹೆಚ್ಚಿನ ಬೇಡಿಕೆ ಇದೆ. ಈ ಕೋರ್ಸ್ ಮಳಿಗೆ, ತರಬೇತಿ, ಅತ್ಯಾಧುನಿಕ ತಂತ್ರಜ್ಞಾನದ ಮಿಲ್ ನಿರ್ವಹಣೆ, ಸ್ವಚ್ಛತೆ, ಮಿಲ್ಲಿಂಗ್, ಫೋರ್ಫರ್ಟಿಫಿಕೇಷನ್, ಆಟೋಮ್ಯಾಟಿಕ್ ಫ್ಲೋರ್ಹ್ಯಾಂಡ್ಲಿಂಗ್ ಮತ್ತು ಪ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ ಎಂದರು.ಈವರೆಗೆ ಸುಮಾರು 900ಕ್ಕೂ ಹೆಚ್ಚು ಮಂದಿ ಈ ತರಬೇತಿ ಪಡೆದಿದ್ದಾರೆ. ಬಾಂಗ್ಲಾದೇಶ, ಕೊಲಂಬಿಯಾ, ಎಥಿಯೋಪಿಯಾ, ಘಾನ, ಗುಯಾನ, ಜೋರ್ಡಾನ್, ಖಜಕಿಸ್ತಾನ್, ಕೀನ್ಯಾ ಲಿಬೇರಿಯಾ, ಮಂಗೋಲಿಯಾ, ನೇಪಾಳ, ನೈಜಿರೀಯಾ, ಒಮಾನ್, ಪಾಕಿಸ್ತಾನ, ಫಿಲಿಫೈನ್ಸ್, ಶ್ರೀಲಂಕಾ, ಸೈರಿಯಾ, ಸುರಿನೇಮ್, ಉಗಾಂಡ, ಅರಬ್, ವಿಯೆಟ್ನಾಂ, ವೆಸ್ಟ್ಇಂಡೀಸ್, ಯಮೆನ್, ಜಂಬಿಯಾ ಮುಂತಾದ ದೇಶಗಳಿಂದಲೂ ಪ್ರತಿನಿಧಿಗಳು ತರಬೇತಿ ಪಡೆದಿದ್ದಾರೆ ಎಂದರು.ಇಲ್ಲಿ ತರಬೇತಿ ಪಡೆದ ಅನೇಕಾರು ವಿದ್ಯಾರ್ಥಿಗಳು ಭಾರತ ಮಾತ್ರವಲ್ಲದೆ, ಇತರೆ ದೇಶಗಳಲ್ಲಿಯೂ ಉದ್ಯಮ ನಡೆಸುತ್ತಿದ್ದಾರೆ ಎಂದರು.ನೈಜಿರಿಯಾದ ಚಿನೆದು ಚುಕ್ವೌಲುಕಾ ಇಪುಚಿ ಅವರಿಗೆ ಜಿ.ಕೆ. ಜಲನ್ಚಿನ್ನದ ಪದಕ, ದೆಹಲಿ ಫ್ಲೋರ್ ಮಿಲ್ಚಿನ್ನದ ಪದಕವನ್ನು ಎಸ್.ಆರ್. ವರ್ಷಿತಾ, ಶಿವಾಜಿ ರೋಲರ್ಮಿಲ್ಸ್ ಕಂಚಿನ ಪದಕವನ್ನು ಹೈದರಾಬಾದ್ ನ ನಂದಯಲ ಸೂರ್ಯತೇಜಾ, ಡಾ.ಎಸ್.ಆರ್. ಶುರ್ಪಲೇಕರ್ ಚಿನ್ನದ ಪದಕವನ್ನು ಎಸ್.ಆರ್. ವರ್ಷಿತಾ, ಡಾ. ಇಂದ್ರಾಣಿ ದಾಸಪ್ಪ ಚಿನ್ನದ ಪದಕವನ್ನು ಉತ್ತರಪ್ರದೇಶದ ಅವನೀಶ್ ಕುಮಾರ್ ಸಿಂಗ್ಅವರು ಪಡೆದುಕೊಂಡರು. ಮಾಣಿಕಚಂದ್ ಗ್ರೂಪ್ಸ್ ನ ನಿರ್ವಹಕ ವ್ಯವಸ್ಥಾಪಕ ಕೆ. ಫಣೀಂದ್ರ ಅತಿಥಿಯಾಗಿ ಪಾಲ್ಗೊಂಡು ಸಮಾರೋಪ ಭಾಷಣ ಮಾಡಿದರು. ಡಾ. ಅಸಿಂತೋಷ್ಎ. ಇನಾಮ್ದಾರ್, ಡಾ. ರೇವತಿ ಭಾಸ್ಕರ್ ಇದ್ದರು.