ಹಮ್ಮಿಗಿ ಬ್ಯಾರೇಜಿನ 5-6 ಗೇಟ್ ಗಳಿಗೂ ಆಗಬೇಕಿದೆ ದುರಸ್ತಿ

KannadaprabhaNewsNetwork |  
Published : Aug 14, 2024, 12:52 AM IST
ಕನ್ನಡಪ್ರಭ ವಾರ್ತೆ ಮುಂಡರಗಿ  ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಲಿಂಕ್ ತುಂಡಾಗಿರುವ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ಇರುವ ಸಿಂಗಟಾಲೂರ್ ಏತ ಗಳು ನೀರಾವರಿ ಯೋಜನೆಯ ಬ್ಯಾರೇಜನ 5 ರಿಂದ 6 ಗೇಟ್ ಗಳು ಕಳೆದ ಒಂದು ವರ್ಷದಿಂದ ದುರಸ್ತಿಗೆ ಬಂದಿದ್ದರೂ ಇದುವರೆಗೂ ದುರಸ್ತಿಯಾಗಿಲ್ಲ.  2012ರಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಹಮ್ಮಿಗಿ ಹತ್ತಿರದಲ್ಲಿ ಬ್ಯಾರೇಜ್ ನಿರ್ಮಿಸಲಾಗಿದ್ದು, ಈ ಬ್ಯಾರಿಜಿನಲ್ಲಿ ಒಟ್ಟು ಸುಮಾರು 26 ಗೇಟ್ ಗಳಿವೆ. ಆ 26 ಗೇಟ್ ಗಳ ಪೈಕಿ 13, 16, 17, 19, 25 ಮತ್ತು 26ನೇ ಗೇಟಿನ ರಬ್ಬರ್ ಸೀಲ್ ರೋಲರ್ ಹಾಳಾಗಿವೆ. ಇದರಿಂದಾಗಿ ಬ್ಯಾರೇಜಿನಲ್ಲಿ ನೀರು ಭರ್ತಿಯಾದ ಸಂದರ್ಭದಲ್ಲಿ ಪ್ರತಿದಿನ ಒಂದು ಸಾವಿರ ಕ್ಯುಸೆಕ್ ಗೂ ಅಧಿಕ ನೀರು ಹರಿದು ಹೋಗುವ ಮೂಲಕ ಪೋಲಾಗುತ್ತಿದೆ. ವರ್ಷದ ಹಿಂದೆಯೇ ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸಹ ದುರಸ್ತಿ ಕಾರ್ಯ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.   ಈ ಬ್ಯಾರೆಜಿನಲ್ಲಿ ಒಟ್ಟು 3.12 ಟಿಎಂಸಿ ನೀರು ನಿಲ್ಲಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ ಅಲ್ಲಿ 1.90 ಟಿಎಂ ಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಕಾರಣವೇನೆಂದರೆ ಬ್ಯಾರಿಜಿನ ಹಿನ್ನೀರಿನಿಂದ ಮುಳಗಡೆಯಾಗಲಿರುವ ಬಿದರಹಳ್ಳಿ, ಗುಮ್ಮಗೋಳ ಹಾಗೂ ವಿಠಲಾಪೂರ ಗ್ರಾಮಗಳು‌ ಸ್ಥಳಾಂತರವಾಗದ ಹಿನ್ನೆಲೆಯಲ್ಲಿ ಪೂರ್ಣ‌ ಪ್ರಮಾಣದಲ್ಲಿ ನೀರು ನಿಲುಗಡೆಯಾಗುತ್ತಿಲ್ಲ.    ಈ ಬ್ಯಾರೇಜ್ ನಿಂದ ಗದಗ ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಜನತೆಗೆ ಇಲ್ಲಿನ ನೀರು ಜೀವನಾಡಿಯಾಗಿದೆ. ಹೀಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿದು ಹೋಗದಂತೆ ಮುಂಜಾಗ್ರತಾ ಕ್ರಮವಹಿಸುವ ಮೂಲಕ ತಕ್ಷಣವೇ 6 ಗೇಟ್ ಗಳನ್ನು  ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಕೋಟ್...   ಗದಗ-ಬೆಟಗೇರಿ ಅವಳಿ ನಗರವೂ ಸೇರಿದಂತೆ ವಿವಿಧ ತಾಲೂಕಿನ ಜನತೆಗೆ ಈ ನೀರೆ ಆಸರೆಯಾಗಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ಇನ್ನಷ್ಟು ವಿಳಂಬ ನೀತಿ ಅನುಸರಿಸದೇ ತಕ್ಷಣವೇ ಬ್ಯಾರೇಜಿನಲ್ಲಿನ ನೀರು ಪೋಲಾಗಂತೆ ಕ್ರಮವಹಿಸುವ ಮೂಲಕ ಗೇಟ್ ಗಳನ್ನು ದುರಸ್ಥಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ವೀರನಗೌಡ ಪಾಟೀಲ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ.ಕೋಟ್...    ಬ್ಯಾರೇಜಿನಲ್ಲಿ ಸುಮಾರು 6 ಗೇಟ್ ಗಳ ರಬ್ಬರ್ ಸೀಲ್ ರೋಲರ್ ಸವಕಳಿ ಬಂದಿದ್ದು, ಅವುಗಳ ದುರಸ್ಥಿಗಾಗಿ ಈಗಾಗಲೇ 5 ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದ್ದು, ದುರಸ್ಥಿ ಕಾರ್ಯಕೈಗೊಳ್ಳಬೇಕೆನ್ನುವಷ್ಟರಲ್ಲಿ ನದಿಗೆ ನೀರು ಬಂದು ಬ್ಯಾರೇಜಿನಲ್ಲಿ ನೀರು ನಿಂತಿದ್ದರಿಂದಾಗಿ ದುರಸ್ಥಿಕಾರ್ಯ ಮಾಡುವಲ್ಲಿ ವಿಳಂಬವಾಗಿದ್ದು, ನೀರಿನ ಪ್ರಮಾಣ ಒಂದಿಷ್ಟು ಕಡಿಮೆಯಾದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.ಜಿ.ಆರ್.ಶಿವಮೂರ್ತಿ. ಕಾರ್ಯನಿರ್ವಾಹಕ ಎಂಜಿನೀಯರ್ ಹೂವಿನಹಡಗಲಿ.13ಎಂಡಿಜಿ3. ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ಇರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನ ಚಿತ್ರ.          | Kannada Prabha

ಸಾರಾಂಶ

ಬ್ಯಾರೇಜಿನ ಹಿನ್ನೀರಿನಿಂದ ಮುಳಗಡೆಯಾಗಲಿರುವ ಬಿದರಹಳ್ಳಿ, ಗುಮ್ಮಗೋಳ ಹಾಗೂ ವಿಠಲಾಪೂರ ಗ್ರಾಮಗಳು‌ ಸ್ಥಳಾಂತರವಾಗದ ಹಿನ್ನೆಲೆಯಲ್ಲಿ ಪೂರ್ಣ‌ ಪ್ರಮಾಣದಲ್ಲಿ ನೀರು ನಿಲುಗಡೆಯಾಗುತ್ತಿಲ್ಲ

ಮುಂಡರಗಿ: ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ ಗೇಟ್ ಲಿಂಕ್ ತುಂಡಾಗಿರುವ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಮುಂಡರಗಿ ತಾಲೂಕಿನ ಹಮ್ಮಿಗಿ ಬಳಿ ಇರುವ ಸಿಂಗಟಾಲೂರ ಏತನೀರಾವರಿ ಯೋಜನೆಯ ಬ್ಯಾರೇಜ್‌ನ 5 ರಿಂದ 6 ಗೇಟ್ ಕಳೆದ ವರ್ಷದಿಂದ ದುರಸ್ತಿಗೆ ಬಂದಿದ್ದರೂ ಇದುವರೆಗೂ ದುರಸ್ತಿಯಾಗಿಲ್ಲ.

2012 ರಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆ ಹಮ್ಮಿಗಿ ಹತ್ತಿರದಲ್ಲಿ ಬ್ಯಾರೇಜ್ ನಿರ್ಮಿಸಲಾಗಿದ್ದು, ಈ ಬ್ಯಾರೇಜ್‌ನಲ್ಲಿ ಒಟ್ಟು 26 ಗೇಟ್ ಗಳಿವೆ. ಆ 26 ಗೇಟ್ ಗಳ ಪೈಕಿ 13,16,17,19, 25 ಮತ್ತು 26ನೇ ಗೇಟಿನ ರಬ್ಬರ್ ಸೀಲ್ ರೋಲರ್ ಹಾಳಾಗಿವೆ. ಇದರಿಂದ ಬ್ಯಾರೇಜಿನಲ್ಲಿ ನೀರು ಭರ್ತಿಯಾದ ಸಂದರ್ಭದಲ್ಲಿ ಪ್ರತಿ ದಿನ ಸಾವಿರ ಕ್ಯುಸೆಕ್ ಗೂ ಅಧಿಕ ನೀರು ಹರಿದು ಹೋಗುವ ಮೂಲಕ ಪೋಲಾಗುತ್ತಿದೆ. ವರ್ಷದ ಹಿಂದೆಯೇ ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಸಹ ದುರಸ್ತಿ ಕಾರ್ಯ ಮಾಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎನ್ನಲಾಗಿದೆ.

ಈ ಬ್ಯಾರೇಜ್‌ 3.12 ಟಿಎಂಸಿ ನೀರು ನಿಲ್ಲಿಸುವ ಸಾಮರ್ಥ್ಯ ಹೊಂದಿದ್ದು, ಸದ್ಯ 1.90 ಟಿಎಂಸಿ ನೀರು ಮಾತ್ರ ಸಂಗ್ರಹಿಸಲಾಗುತ್ತಿದೆ. ಇದಕ್ಕೆ ಕಾರಣ ಬ್ಯಾರೇಜಿನ ಹಿನ್ನೀರಿನಿಂದ ಮುಳಗಡೆಯಾಗಲಿರುವ ಬಿದರಹಳ್ಳಿ, ಗುಮ್ಮಗೋಳ ಹಾಗೂ ವಿಠಲಾಪೂರ ಗ್ರಾಮಗಳು‌ ಸ್ಥಳಾಂತರವಾಗದ ಹಿನ್ನೆಲೆಯಲ್ಲಿ ಪೂರ್ಣ‌ ಪ್ರಮಾಣದಲ್ಲಿ ನೀರು ನಿಲುಗಡೆಯಾಗುತ್ತಿಲ್ಲ.

ಈ ಬ್ಯಾರೇಜ್ ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಜನತೆಯ ಜೀವನಾಡಿಯಾಗಿದೆ. ಹೀಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿದು ಹೋಗದಂತೆ ಮುಂಜಾಗ್ರತಾ ಕ್ರಮ ವಹಿಸುವ ಮೂಲಕ ತಕ್ಷಣವೇ 6 ಗೇಟ್ ಗಳನ್ನು ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗದಗ-ಬೆಟಗೇರಿ ಅವಳಿ ನಗರವೂ ಸೇರಿದಂತೆ ವಿವಿಧ ತಾಲೂಕಿನ ಜನತೆಗೆ ಈ ನೀರೆ ಆಸರೆಯಾಗಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸದೇ ತಕ್ಷಣವೇ ಬ್ಯಾರೇಜ್‌ನಲ್ಲಿನ ನೀರು ಪೋಲಾಗಂತೆ ಗೇಟ್ ದುರಸ್ತಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ತಿಳಿಸಿದ್ದಾರೆ.

ಬ್ಯಾರೇಜ್‌ನಲ್ಲಿ ಸುಮಾರು 6 ಗೇಟ್ ಗಳ ರಬ್ಬರ್ ಸೀಲ್ ರೋಲರ್ ಸವಕಳಿ ಬಂದಿದ್ದು, ಅವುಗಳ ದುರಸ್ತಿಗೆ ಈಗಾಗಲೇ ₹ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ದುರಸ್ತಿ ಕಾರ್ಯ ಕೈಗೊಳ್ಳಬೇಕೆನ್ನುವಷ್ಟರಲ್ಲಿ ನದಿಗೆ ನೀರು ಬಂದು ಬ್ಯಾರೇಜ್‌ನಲ್ಲಿ ನೀರು ನಿಂತಿದ್ದರಿಂದ ದುರಸ್ತಿ ಕಾರ್ಯ ಮಾಡುವಲ್ಲಿ ವಿಳಂಬವಾಗಿದ್ದು, ನೀರಿನ ಪ್ರಮಾಣ ಕಡಿಮೆಯಾದ ತಕ್ಷಣವೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಕಾರ್ಯನಿರ್ವಾಹಕ ಎಂಜಿನೀಯರ್ ಜಿ.ಆರ್. ಶಿವಮೂರ್ತಿ ಹೇಳಿದ್ದಾರೆ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ