ಕಣ್ಣಿಗೆ ಖಾರದಪುಡಿ ಎರಚಿ ₹5 ಲಕ್ಷ ದೋಚಿ ಪರಾರಿ

KannadaprabhaNewsNetwork |  
Published : Jul 04, 2024, 01:03 AM IST
3kst1: ಕುಷ್ಟಗಿ ತಾಲೂಕಿನ ತಾವರಗೇರಾ ಸಮೀಪ ಕಿಲ್ಲಾರಹಟ್ಟಿ ಗ್ರಾಮದ ಡಗ್ಗಿ ಹತ್ತಿರ ಕಳ್ಳತನ ನಡೆದ ಸ್ಥಳಕ್ಕೆ ಎಸ್ಪಿ ಯಶೋದಾ ವಂಟಿಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಇನ್ನೋವಾ ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಇನ್ನುಳಿದವರ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಅವರ ಬಳಿ ಇದ್ದ ಐದು ಲಕ್ಷ ರೂ.ನಗದು ದೋಚಿಕೊಂಡು ಪರಾರಿಯಾದ ಘಟನೆ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ತಾಲೂಕಿನ ತಾವರಗೇರಾ ಸಮೀಪದ ಕಿಲ್ಲಾರಹಟ್ಟಿ ಗ್ರಾಮದ ಡಗ್ಗಿ (ತಾವರಗೇರಾ - ಮುದಗಲ್ ರಸ್ತೆ) ಬಳಿ ಹೋಗುತ್ತಿದ್ದ ಇನ್ನೋವಾ ಕಾರನ್ನು ಅಡ್ಡಗಟ್ಟಿ ಚಾಲಕ ಹಾಗೂ ಇನ್ನುಳಿದವರ ಕಣ್ಣಿಗೆ ಖಾರದ ಪುಡಿ ಎರಚಿ, ಹಲ್ಲೆ ಮಾಡಿ ಅವರ ಬಳಿ ಇದ್ದ ₹ಐದು ಲಕ್ಷ ನಗದು ದೋಚಿಕೊಂಡು ಪರಾರಿಯಾದ ಘಟನೆ ಮಂಗಳವಾರ ನಡೆದಿದೆ.

ಲಿಂಗಸುಗೂರು ಮೂಲದ ರಿಯಲ್‌ ಎಸ್ಟೇಟ್‌ ಮಾಡುತ್ತಿದ್ದ ವಿಜಯ ಮಹಾಂತೇಶ ಹಾಗೂ ಖಾಲೀದ್ ಮತ್ತು ಶಿವಾನಂದ ಲಿಂಗಸೂರಿನಿಂದ ಕೊಪ್ಪಳದ ಕಡೆಗೆ ಹೋಗುವಾಗ ಕುಷ್ಟಗಿ ತಾಲೂಕಿನ ಕಿಲ್ಲಾರಹಟ್ಟಿ ಡಗ್ಗಿ ಹತ್ತಿರ ಅಪರಿಚಿತ ಐದು ಜನರು ನಂಬರ್ ಪ್ಲೇಟ್ ಇರಲಾರದ ಕಪ್ಪು ಬಣ್ಣದ ಎರಡು ಮೋಟರ್‌ ಸೈಕಲ್‌ನಲ್ಲಿ ಬಂದು ಚಾಲಕ ವಿಜಯ ಮಹಾಂತೇಶ ಹಾಗೂ ಇನ್ನಿಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ, ಕಾರು ಚಾಲಕ ಮಹಾಂತೇಶ ಅವರ ಬಳಿ ಚೀಲದಲ್ಲಿದ್ದ ₹5 ಲಕ್ಷ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಯಶೋದಾ ವಂಟಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಲಾ ದಾಖಲಾತಿ, ಹಾಜರಾತಿ ಆಂದೋಲನ:

ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ದಾಖಲಾತಿ ಮತ್ತು ಹಾಜರಾತಿ ಆಂದೋಲನ ಕಾರ್ಯಕ್ರಮ ನಡೆಯಿತು.

ಶಾಲಾ ಸುಧಾರಣ ಸಮಿತಿಯ ಅಧ್ಯಕ್ಷ ಚಂದಪ್ಪ ಹುನಗುಂದ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಸೋಮಲಿಂಗಪ್ಪ ಗುರಿಕಾರ 1ನೇ ತರಗತಿ ಮಕ್ಕಳಿಗೆ ಪೆನ್ನು ವಿತರಿಸಿ ಅಕ್ಷರ ಅಭ್ಯಾಸ ಮಾಡುವ ಮೂಲಕ ಜಾಗೃತಿಯ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಲಿಕೆ ಟಾಟಾ ಟ್ರಸ್ಟ್ ಸಂಯೋಜಕ ಆನಂದ ಮಾತನಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಪ್ರಭಾಕರ ವಿಜಾಪುರ, ಶಿಕ್ಷಕರಾದ ಸಿದ್ದಲಿಂಗೇಶ ಕಮತಗಿ, ಗಂಗಪ್ಪ ಕಂಬದ, ರೇವಣಸಿದ್ದಯ್ಯ ಹಿರೇಮಠ, ವಿಜಯಕುಮಾರ ಧುತ್ತರಗಿ, ಮಾನಮ್ಮ ಪತ್ತಾರ, ದೇವೇಂದ್ರಪ್ಪ, ಸೈರಾಬಾನು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ