ಶೃಂಗಾರಬಾಗಿನಲ್ಲಿ 56 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು

KannadaprabhaNewsNetwork | Published : Aug 24, 2024 1:26 AM

ಸಾರಾಂಶ

ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಹೋಬಳಿಯ ಶೃಂಗಾರಬಾಗು ತಾಂಡದ ಸರ್ವೆ ನಂಬರ್: 16ರಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿನ 56 ಎಕರೆ ಅರಣ್ಯ ಭೂಮಿಯನ್ನು ರೈತರು ಸಾಗುವಳಿ ಮಾಡಿದ್ದರು. ಈ ಭೂಮಿಯನ್ನು ಶುಕ್ರವಾರ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ ಎಂದು ಮಾವಿನಕಟ್ಟೆಯ ವಲಯ ಅರಣ್ಯಾಧಿಕಾರಿ ಜಗದೀಶ್ ಹೇಳಿದ್ದಾರೆ.

- ಎಸಿಎಫ್‌ ರತ್ನಪ್ರಭ ನೇತೃತ್ವದಲ್ಲಿ ಕಾರ್ಯಾಚರಣೆ: ಜಗದೀಶ

- ಹಲವು ಗ್ರಾಮಗಳಲ್ಲೂ ಒತ್ತುವರಿ ರೈತರಿಗೆ ನೋಟಿಸ್ ಜಾರಿ

- - - ಕನ್ನಡಪ್ರಭ ವಾರ್ತೆ, ಚನ್ನಗಿರಿ

ತಾಲೂಕಿನ ಬಸವಾಪಟ್ಟಣ ಹೋಬಳಿಯ ಶೃಂಗಾರಬಾಗು ತಾಂಡದ ಸರ್ವೆ ನಂಬರ್: 16ರಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿನ 56 ಎಕರೆ ಅರಣ್ಯ ಭೂಮಿಯನ್ನು ರೈತರು ಸಾಗುವಳಿ ಮಾಡಿದ್ದರು. ಈ ಭೂಮಿಯನ್ನು ಶುಕ್ರವಾರ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ ಎಂದು ಮಾವಿನಕಟ್ಟೆಯ ವಲಯ ಅರಣ್ಯಾಧಿಕಾರಿ ಜಗದೀಶ್ ಹೇಳಿದರು.

ಎ.ಸಿ.ಎಫ್. ರತ್ನಪ್ರಭ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ರೈತರಿಗೆ ಕಾನೂನು ಪ್ರಕಾರವಾಗಿಯೇ ಈ ಹಿಂದೆ ನೋಟಿಸ್ ನೀಡಲಾಗಿತ್ತು. ಆದರೂ ರೈತರು ಭೂಮಿ ತೆರವುಗೊಳಿಸಿರಲಿಲ್ಲ. ಈ ಕಾರಣದಿಂದಾಗಿ ಎ.ಸಿ.ಎಫ್. ನ್ಯಾಯಾಲಯದ ಅಂತಿಮ ಆದೇಶದಂತೆ ಅರಣ್ಯ ಭೂಮಿಯನ್ನು ಜೆ.ಸಿ.ಬಿ. ಯಂತ್ರದ ಮೂಲಕ ಜಾಗ ಗುರುತಿಸಿಕೊಳ್ಳುವ ಕಾಲುವೆಯನ್ನು ತೆಗೆದು ಇಲಾಖೆಯ ವಶಕ್ಕೆ ಪಡೆಯಲಾಗಿದೆ ಎಂದರು.

ತಾಲೂಕಿನ ಶಿವಗಂಗೆ ಹಾಳ್, ಮಾವಿನಕಟ್ಟೆ, ದಾಗಿನಕಟ್ಟೆ, ಎನ್.ಬಸವನಹಳ್ಳಿ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿಯೂ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈಗಾಗಲೇ ಆ ಭಾಗದ ಭೂಮಿಯನ್ನು ಒತ್ತುವರಿ ಮಾಡಿಕೊಂಡ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎ.ಸಿ.ಎಫ್. ನ್ಯಾಯಾಲಯದ ಅಂತಿಮ ಆದೇಶ ಬಂದ ನಂತರ ಆ ಭಾಗದಲ್ಲಿಯೂ ಅರಣ್ಯ ಭೂಮಿಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ, ಭೂಮಿ ಇಲಾಖೆ ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ಜಗದೀಶ್ ಸೇರಿದಂತೆ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

- - - -23ಕೆಸಿಎನ್‌ಜಿ2:

ಚನ್ನಗಿರಿ ತಾಲೂಕಿನ ಶೃಂಗಾರಬಾಗು ಸರ್ವೆ ನಂಬರ್: 16ರ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿದ್ದ ಜಮೀನನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದರು.

Share this article