ರೈತರ ಖಾತೆಗೆ ₹ 78.39 ಕೋಟಿ

KannadaprabhaNewsNetwork |  
Published : Nov 26, 2023, 01:15 AM IST
12 | Kannada Prabha

ಸಾರಾಂಶ

ಮಳೆ ಕೊರತೆಯಿಂದ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಜಮೆ ಆಗುತ್ತಿರುವುದು ವರದಾನವಾಗಿದೆ.

ಶಿರಸಿ:

ಸೆಪ್ಟೆಂಬರ್ ವೇಳೆಗೆ ರೈತರ ಖಾತೆಗೆ ಜಮಾ ಆಗಬೇಕಿದ್ದ ಬೆಳೆ ವಿಮೆ ಪರಿಹಾರ ಈಗ ಬಂದಿದೆ. ಒಟ್ಟು ₹ 78.39 ಕೋಟಿ ಜಿಲ್ಲೆಗೆ ಪರಿಹಾರ ಬಿಡುಗಡೆಯಾಗಿದ್ದು, ತಡವಾದರೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿರುವುದು ರೈತರಿಗೆ ಸಂತಸ ತಂದಿದೆ.

ಒಂದೆಡೆ ಬರಗಾಲ, ಮತ್ತೊಂದೆಡೆ ಅಡಕೆ ತೋಟಕ್ಕೆ ಬಂದ ಎಲೆಚುಕ್ಕೆ ರೋಗದಿಂದ ಈ ವರ್ಷ ರೈತರು ಕಂಗಾಲಾಗಿದ್ದರು. ಈ ಕುರಿತು ಶಿರಸಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ ಹೆಬ್ಬಾರ ಪತ್ರಿಕಾ ಪ್ರಕಟಣೆ ನೀಡಿ 2022-23ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯಡಿಯಲ್ಲಿ ಅಡಕೆ ಮತ್ತು ಕಾಳುಮೆಣಸು ಕ್ಷೇತ್ರಕ್ಕೆ ಸಂಬಂಧಿಸಿ ₹ 78.39 ಕೋಟಿ ವಿಮಾ ಪರಿಹಾರದ ರಖಂ ಆಧಾರ ಲಿಂಕ್ ಆದ ರೈತರ ಉಳಿತಾಯ ಖಾತೆಗೆ ನೇರವಾಗಿ ವಿಮಾ ಕಂಪನಿಯಿಂದ ಜಮಾ ಆಗುತ್ತಿದೆ ಎಂದಿದ್ದಾರೆ.2022-23ನೇ ಸಾಲಿನಲ್ಲಿ ಸರ್ಕಾರದ ಆದೇಶದಂತೆ ಮುಂಗಾರು ಅವಧಿಗೆ ಸಂಬಂಧಿಸಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಡಕೆ ಮತ್ತು ಕಾಳುಮೆಣಸು ಕ್ಷೇತ್ರಕ್ಕೆ ಕೆಡಿಸಿಸಿ ಬ್ಯಾಂಕ್ ಸಹಕಾರ ಸಂಘಗಳ ಮೂಲಕ ಒಟ್ಟು 79643 ಪ್ರಸ್ತಾವನೆಗಳನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಈ ಪೈಕಿ ರೈತರು ಹೊಂದಿರುವ 79,197 ಸರ್ವೇ ನಂಬರ್‌ಗಳಿಗೆ ಪರಿಹಾರ ಬಿಡುಗಡೆಯಾಗುತ್ತಿದೆ.ಶಿರಸಿ ತಾಲೂಕಿನ 33 ಪಂಚಾಯಿತಿ ವ್ಯಾಪ್ತಿಯ 28218 ಸರ್ವೇ ನಂಬರ್‌ಗಳಿಗೆ ಪ್ರತಿ ಗುಂಟೆಗೆ ₹ 414.66ನಂತೆ ಒಟ್ಟೂ ₹ 2957.62 ಲಕ್ಷ, ಸಿದ್ದಾಪುರ ತಾಲೂಕಿನ 24 ಪಂಚಾಯಿತಿ ವ್ಯಾಪ್ತಿಯ 25,860 ಸರ್ವೇ ನಂಬರ್ ಗಳಿಗೆ ಪ್ರತಿ ಗುಂಟೆಗೆ ₹ 428.60ರಂತೆ ₹ 1348.03 ಲಕ್ಷ, ಮುಂಡಗೋಡ ತಾಲೂಕಿನ 16 ಪಂಚಾಯಿತಿ ವ್ಯಾಪ್ತಿಯ 1963 ಸರ್ವೇ ನಂಬರ್‌ಗಳಿಗೆ ಪ್ರತಿ ಗುಂಟೆಗೆ ₹ 625.93ರಂತೆ ₹ 926.23 ಲಕ್ಷ, ಯಲ್ಲಾಪುರ ತಾಲೂಕಿನ 16 ಪಂಚಾಯಿತಿ ವ್ಯಾಪ್ತಿಯ 10608 ಸರ್ವೇ ನಂಬರ್‌ಗಳಿಗೆ ಪ್ರತಿ ಗುಂಟೆಗೆ ₹ 458.88ರಂತೆ ₹ 1678.13 ಲಕ್ಷ, ಜೋಯಿಡಾ ತಾಲೂಕಿನ 14 ಪಂಚಾಯಿತಿ ವ್ಯಾಪ್ತಿಯ 1219 ಸರ್ವೇ ನಂಬರ್ ಗಳಿಗೆ ಪ್ರತಿ ಗುಂಟೆಗೆ ₹ 269.75ರಂತೆ ₹ 131 ಲಕ್ಷ, ಅಂಕೋಲಾ ತಾಲೂಕಿನ 7 ಪಂಚಾಯಿತಿ ವ್ಯಾಪ್ತಿಯ 2312 ಸರ್ವೇ ನಂಬರ್ ಗಳಿಗೆ ಪ್ರತಿ ಗುಂಟೆಗೆ ಸರಾಸರಿ ₹ 471.96ರಂತೆ 462.82 ಲಕ್ಷ, ಕುಮಟಾ ತಾಲೂಕಿನ 13 ಪಂಚಾಯಿತಿ ವ್ಯಾಪ್ತಿಯ 1192 ಸರ್ವೇ ನಂಬರ್‌ಗಳಿಗೆ ಸರಾಸರಿ ₹ 191.73ರಂತೆ ಒಟ್ಟೂ ₹ 52.82 ಲಕ್ಷ, ಹೊನ್ನಾವರ ತಾಲೂಕಿನ 25 ಪಂಚಾಯಿತಿ ವ್ಯಾಪ್ತಿಯ 6613 ಸರ್ವೇ ನಂಬರ್‌ಗಳಿಗೆ ಸರಾಸರಿ ₹ 190.17ರಂತೆ ₹ 176.00 ಲಕ್ಷ, ಭಟ್ಕಳ ತಾಲೂಕಿನ 18 ಪಂಚಾಯಿತಿ ವ್ಯಾಪ್ತಿಯ 1212 ಸರ್ವೇ ನಂಬರ್‌ಗಳಿಗೆ ಸರಾಸರಿ ₹ 335.56ರಂತೆ ₹ 106.68 ಲಕ್ಷ ಜಮೆ ಆಗಿದೆ.ಅಡಕೆ ಬೆಳೆಗೆ 75776 ಪ್ರಸ್ತಾವನೆಗಳಿಗೆ ₹ 7718.27 ಲಕ್ಷ ವಿಮಾ ಪರಿಹಾರ ದೊರಕಿದ್ದು ಕಾಳುಮೆಣಸಿಗೆ ಸಂಬಂಧಿಸಿ 3421 ಪ್ರಸ್ತಾವನೆಗಳಿಗೆ ₹ 121.06 ಲಕ್ಷ ಪರಿಹಾರ ದೊರಕಿದೆ.ಮಳೆ ಕೊರತೆಯಿಂದ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಜಮೆ ಆಗುತ್ತಿರುವುದು ವರದಾನವಾಗಿದೆ. ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು 2022-23ನೇ ಸಾಲಿನ ಹಂಗಾಮಿಗೆ ಸಂಬಂಧಿಸಿ ಬೆಳೆ ವಿಮೆ ರಖಂ ರೈತರಿಗೆ ಸಕಾಲದಲ್ಲಿ ದೊರೆತಿರುವುದು ನಮ್ಮ ಕೆಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಗಲಿರುಳು ಶ್ರಮಿಸಿರುವುದರ ಫಲಶ್ರುತಿಯಾಗಿದೆ ಎಂದು ಶಿವರಾಮ ಹೆಬ್ಬಾರ ಹೇಳಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ