9 ರಿಂದ ಶ್ರೀರಾಮನವಮಿ ಸಂಗೀತೋತ್ಸವ: ವಿ.ಎನ್. ದಾಸ್

KannadaprabhaNewsNetwork |  
Published : Apr 06, 2024, 12:56 AM IST
59 | Kannada Prabha

ಸಾರಾಂಶ

ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಪ್ರಸಿದ್ದ ಗಾಯಕ, ಗಾಯಕಿಯರಿಂದ ಸುಗಮ ಸಂಗೀತ, ಭಕ್ತಿಗೀತೆಗಳು, ದಾಸರಪದಗಳು, ಶಿಶುನಾಳ ಷರೀಪರಗೀತೆಗಳು, ಭಾವಗೀತೆ, ಜಾಗಪದಗೀತೆಗಳು ತಾಳ ವಾದ್ಯ ಹೀಗೆ ವಿವಿಧ ಕಾರ್ಯಕ್ರಮಗಳು ಸಂಜೆ 6-30 ರಿಂದ 10 ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಹುಣಸೂರು

ಸಾಂಸ್ಕೃತಿಕ ಕೇಂದ್ರ ಹುಣಸೂರು ಟ್ರಸ್ಟ್ ಮತ್ತು ಶ್ರೀ ರಾಮನವಮಿ ಸಂಗೀತೋತ್ಸವ ಸಮಿತಿ ಸಹಯೋಗದಲ್ಲಿ ಏ.9ರಿಂದ 17ರವರೆಗೆ ಶ್ರೀರಾಮನವಮಿ ಸಂಗೀತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ವಿ.ಎನ್. ದಾಸ್ ತಿಳಿಸಿದ್ದಾರೆ.

ಪಟ್ಟಣದ ಎಸ್.ಜೆ. ರಸ್ತೆಯ ವಿಕ್ರಂ ವೇದಿಕೆಯಲ್ಲಿ ಸಂಗೀತೋತ್ಸವ ಸಮಾರಂಭವನ್ನು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ, ಗಾವಡಗೆರೆ ಶ್ರೀ ಗುರುಲಿಂಗಜಂಗದೇವರ ಮಠದ ಶ್ರೀ ನಟರಾಜ ಸ್ವಾಮಿಗಳು ಮತ್ತು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ರಾಜಯೋಗಿಣಿ ಅಕ್ಕ ನಾಗಶ್ರೀರ ಸಾನಿಧ್ಯದಲ್ಲಿ ಉದ್ಘಾಟಿಸಲಾಗುವುದು. ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಪ್ರಸಿದ್ದ ಗಾಯಕ, ಗಾಯಕಿಯರಿಂದ ಸುಗಮ ಸಂಗೀತ, ಭಕ್ತಿಗೀತೆಗಳು, ದಾಸರಪದಗಳು, ಶಿಶುನಾಳ ಷರೀಪರಗೀತೆಗಳು, ಭಾವಗೀತೆ, ಜಾಗಪದಗೀತೆಗಳು ತಾಳ ವಾದ್ಯ ಹೀಗೆ ವಿವಿಧ ಕಾರ್ಯಕ್ರಮಗಳು ಸಂಜೆ 6-30 ರಿಂದ 10 ರವರೆಗೆ ನಡೆಯಲಿದೆ. ಏ. 17ರ ರಾಮನವಮಿಯಂದು ಬೆಳಗ್ಗೆ ಶ್ರೀ ಹರಿರಾವ್ ನೇತೃತ್ವದಲ್ಲಿ ರಾಮತಾರಕ ಹೋಮ ಜರುಗಲಿದೆ. ಅಂದು ಸಂಜೆ 8ಕ್ಕೆ ರಾವಣದಹನ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮದ ವಿವರ- ಏ. 9ರಂದು ಪ್ರಭುಸೋನು ಅವರ ನಿರ್ದೇಶನದಲ್ಲಿ ಸಾಂಸ್ಕೃತಿಕ ಕೇಂದ್ರದ ವಿದ್ಯಾರ್ಥಿಗಳಿಂದ ಭಕ್ತಿಗೀತೆಗಳು. ಏ. 10 ರಂದು ಮೈಸೂರಿನ ವಿದ್ವಾನ್ ಶಿವಶಂಕರಸ್ವಾಮಿ ವೃಂದದವರಿಂದ ಲಯಲಹರಿ ತಾಳವಾದ್ಯ. ಏ. 11ರಂದು ಸರಿಗಮಪ ಖ್ಯಾತಿಯ ಅಮೂಲ್ಯ ಮತ್ತು ಪುರುಷೋತ್ತಮ್ ಅವರಿಂದ ಗಾಯನ ಕಾರ್ಯಕ್ರಮ. ಏ. 12 ರಂದು ಅಜಯ್ ವಾರಿಯರ್ ಮತ್ತು ವಿಂದ್ಯಾ ಸುರೇಶ್ ಅವರಿಂದ ಸುಗಮಸಂಗೀತ. ಏ. 13ರಂದು ಸವಿತಾ ಗಣೇಶ್ ಪ್ರಸಾದ್ ಮತ್ತು ರಾಜೀವ್ ಅಗಳಿರಿಂದ ಸುಗಮಸಂಗೀತ. ಏ. 14ರಂದು ಶಂಕರ್ ಶ್ಯಾನ್ ಭಾಗ್ ಮತ್ತು ಕೆ.ಪಿ. ರೇವತಿ, ಏ.15 ರಂದು ಶ್ರೀನಿವಾಸ್, ಶಶಿಧರ್, ಪ್ರಶಾಂತ್, ಭವ್ಯ, ದಿವಾಕರ್

ಅವರಿಂದ. ಏ. 16ರಂದು ಸರಿಗಮಪ ವಿಜೇತ ಕೀರ್ತನ್ ಹೊಳ್ಳ ಮತ್ತು ಟಿ.ಸಿ ಸಿಂಚನ ಮತ್ತು ಏ. 17 ರಂದು ರವಿಶಂಕರ್, ಮಹೇಂದ್ರ, ಸೋಮು, ಶೃತಿ ತಂಡದಿಂದ ಸುಗಮಸಂಗೀತ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮ ಆಯೋಜಿಸಿದೆ ಎಂದು ಅವರು ತಿಳಿಸಿದ್ದಾರೆ.

PREV

Latest Stories

ಭೂಮಿ ಉಳುವಿಗಾಗಿ ರಸಗೊಬ್ಬರ ಬಳಸಬೇಡಿ
ವಿವಿಧ ಬೇಡಿಕೆ ಈಡೇರಿಕೆಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನೆ
ಯಶಸ್ವಿ ಪ್ರದರ್ಶನದತ್ತ ‘ಜಂಗಲ್ ಮಂಗಲ್’: ರಕ್ಷಿತ್ ಕುಮಾರ್