ಭಾರಿ ಪ್ರಮಾಣದಲ್ಲಿ ಸುರಿದ ಮಳೆಗೆ 100 ವರ್ಷದ ಕೆರೆ ಬಿರುಕು

KannadaprabhaNewsNetwork | Published : Jun 8, 2024 12:36 AM

ಸಾರಾಂಶ

ತಡರಾತ್ರಿ ಸುರಿದ ಭಾರಿ ಮಳೆಗೆ ಥರಟಿ ಗ್ರಾಮದ ಕೆರೆಯ ಮಧ್ಯೆ ಭಾಗದಲ್ಲಿ ಮಂಗೆ ಬಿದ್ದು ನೀರು ಪೊಲು ಆಗುತ್ತಿದ್ದು, ಸಾರ್ವಜನಿಕರ ಸಹಕಾರದಿಂದ ಗ್ರಾಪಂ ಅಧಿಕಾರಿ ಕೆರೆಯ ಏರಿಯ ಬಿರುಕು ಮುಚ್ಚುವ ಪ್ರಯತ್ನ ಮಾಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ತಡರಾತ್ರಿ ಸುರಿದ ಭಾರಿ ಮಳೆಗೆ ಥರಟಿ ಗ್ರಾಮದ ಕೆರೆಯ ಮಧ್ಯೆ ಭಾಗದಲ್ಲಿ ಮಂಗೆ ಬಿದ್ದು ನೀರು ಪೊಲು ಆಗುತ್ತಿದ್ದು, ಸಾರ್ವಜನಿಕರ ಸಹಕಾರದಿಂದ ಗ್ರಾಪಂ ಅಧಿಕಾರಿ ಕೆರೆಯ ಏರಿಯ ಬಿರುಕು ಮುಚ್ಚುವ ಪ್ರಯತ್ನ ಮಾಡಿದರು.

ತಾಲೂಕಿನ ಥರಟಿ ಗ್ರಾಮದ ಕೆರೆ ಸುಮಾರು ೧೦೦ ವರ್ಷಗಳ ಹಳೆಯದಾಗಿದ್ದು, ಸುಮಾರು ೧೯ ಹೆಕ್ಕೇರ್ ವಿಸ್ತೀರ್ಣ ಹೊಂದಿದೆ. ಥರಟಿ ಹಾಗೂ ಕಾವುರಗಲ್ಲು ಕಂಬದಹಳ್ಳಿ ಬೆಟ್ಟದಿಂದ ಈ ಕೆರೆಗೆ ನೀರು ಬರುತ್ತದೆ. ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆರೆಗೆ ಸಾಕಷ್ಟು ನೀರು ಹರಿದು ಬರುತ್ತಿದ್ದು, ಕೆರೆಯ ಮಧ್ಯೆ ಭಾಗದಲ್ಲಿ ಬಿರುಕು ಕಾಣಿಸಿಕೊಂಡು ಸಾಕಷ್ಟು ನೀರು ಪಕ್ಕದ ರೈತರ ಹೊಲಕ್ಕೆ ನುಗ್ಗಿದೆ. ತಕ್ಷಣ ಗ್ರಾಪಂ ಅಧಿಕಾರಿ ಸ್ಥಳಕ್ಕೆ ಧಾವಿಸಿ ಬಿರುಕು ಮುಚ್ಚುವ ಕೆಲಸ ಮಾಡುತ್ತಿದ್ದಾರೆ.ಪಿಡಿಒ ರಂಗನರಸಯ್ಯ ಮಾತನಾಡಿ, ಥರಟಿ ಗ್ರಾಮದ ಕೆರೆಯ ಮಧ್ಯೆ ಭಾಗದಲ್ಲಿ ಬಿರುಕು ಬಿದ್ದಿದ್ದು, ಸ್ಥಳೀಯ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಮತ್ತು ಸಾರ್ವಜನಿಕರ ಸಹಕಾರದಿಂದ ಬಿರುಕು ಮುಚ್ಚುವ ಕೆಲಸ ಮಾಡಲಾಗುತ್ತಿದೆ. ಸ್ಥಳಕ್ಕೆ ತಹಸೀಲ್ದಾರ್, ಇಒ, ಎಇಇ ಭೇಟಿ ನೀಡಿದ್ದಾರೆ. ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.ಮುಖಂಡ ಮಂಜುನಾಥ್ ಮಾತನಾಡಿ, ಥರಟಿ ಗ್ರಾಮದ ಕೆರೆ ಹಳೆಯದಾಗಿದ್ದು, ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಕೆರೆಗೆ ನೀರಿನ ಪ್ರಮಾಣ ಜಾಸ್ತಿಯಾಗಿದೆ. ಕೆರೆಯ ಮಧ್ಯೆ ಭಾಗದಲ್ಲಿ ಬಿರುಕು ಬಿದಿದ್ದು, ನೀರು ಪೋಲು ಆಗುತ್ತಿದ್ದು, ಗ್ರಾಪಂ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನೀರು ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.ಸ್ಥಳಕ್ಕೆ ತಹಸೀಲ್ದಾರ್ ಮಂಜುನಾಥ್, ಇಒ ಅಪೂರ್ವ, ಎಇಇ ಕೀರ್ತಿ ನಾಯ್ಕ್, ಭೇಟಿ ನೀಡಿ ಪರಿಶೀಲನೆ ನಡೆಸಿದರು.ಥರಟಿ ಗ್ರಾಮದಲ್ಲಿ ಕೆರೆಯ ಮಧ್ಯೆ ಭಾಗದಲ್ಲಿ ಬಿರುಕು ಬಿದ್ದು ನೀರು ಪೂಲು ಆಗುತ್ತಿರುವುದು ಗಮನಕ್ಕೆ ಬಂದಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ನೀರು ನಿಲ್ಲಿಸುವಂತೆ ತಿಳಿಸಲಾಗಿದೆ. ಕೆರೆಯ ತೂಬಿನಲ್ಲಿ ನೀರು ಹೊರಗಡೆ ಬೀಡುವಂತೆ ಸೂಚನೆ ನೀಡಲಾಗಿದೆ. ಕೆರೆಯ ಅಕ್ಕಪಕ್ಕ ವಾಸವಿರುವ ಮನೆಯವರು ಹಾಗೂ ರೈತರು ಜಾಗೃತರಾಗಿ ಇರುವಂತೆ ತಿಳಿಸಲಾಗಿದೆ. ಗ್ರಾಪಂ ಅಧಿಕಾರಿ ಬಿರುಕು ಮುಚ್ಚುವ ಕೆಲಸ ಮಾಡುತ್ತಿದ್ದಾರೆ.-ಕೆ.ಮಂಜುನಾಥ್ ತಹಸೀಲ್ದಾರ್ ಕೊರಟಗೆರೆ

Share this article