ತುಮಕೂರಿನಲ್ಲಿ ರಾರಾಜಿಸಿದ 600 ಮೀಟರ್ ಉದ್ದರ ತಿರಂಗಾ

KannadaprabhaNewsNetwork |  
Published : Aug 15, 2024, 01:53 AM IST
78 ನೇ ಸ್ವಾತಂತ್ರ್ಯ್ ದಿನಾಚರಣೆ ಭಾಗವಾಗಿ ಹರ್ ಘರ್ ತಿರಂಗ ಯಾತ್ರೆಗೆ ಚಾಲನೆ | Kannada Prabha

ಸಾರಾಂಶ

ತುಮಕೂರಿನಲ್ಲಿ ರಾರಾಜಿಸಿದ 600 ಮೀಟರ್ ಉದ್ದರ ತಿರಂಗಾ

ಕನ್ನಡಪ್ರಭ ವಾರ್ತೆ ತುಮಕೂರು ಪ್ರತಿಯೊಂದು ಮಗುವಿಗೆ ವಿದ್ಯಾರ್ಥಿ ಜೀವನದಲ್ಲೇ ದೇಶಾಭಿಮಾನ ಬೆಳೆಸಿಕೊಳ್ಳುವ ಅವಕಾಶ ಹಾಗೂ ಸೂಕ್ತ ವಾತಾವರಣವನ್ನು ನಿರ್ಮಿಸಿದರೆ ಮಗು ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಸೃಷ್ಟಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ತಿಳಿಸಿದರು.ನಗರದ ಪ್ರತಿಷ್ಠಿತ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಹರ್ ಘರ್ ತಿರಂಗ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮವಿದ್ದಾಗ ಅವರು ತೊಡಗಿಸಿಕೊಳ್ಳುವ ಪ್ರತಿ ಕೆಲಸವು ಅರ್ಥಗರ್ಭಿತವಾಗಿರುತ್ತದೆ. ಭವಿಷ್ಯದ ಪ್ರಜೆಗಳಾಗಿರುವಂತಹ ಇಂದಿನ ಎಲ್ಲಾ ವಿದ್ಯಾರ್ಥಿಗಳು ದೇಶಾಭಿಮಾನವನ್ನು ಅತ್ಯಂತ ಜಾಗರೂಕವಾಗಿ ರೂಢಿಸಿಕೊಂಡು ದೇಶದ ಪ್ರಗತಿಗೆ ಹೆಜ್ಜೆ ಇಡಬೇಕು ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ನಗರ ಶಾಸಕ ಜ್ಯೋತಿಗಣೇಶ್ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಪ್ರಧಾನಿ ಮಂತ್ರಿಯವರ ಕರೆಯಂತೆ ಹರ್ ಘರ್ ತಿರಂಗ ಯಾತ್ರೆಯಲ್ಲಿ ವಿದ್ಯಾರ್ಥಿಗಳ ಉತ್ಸುಕತೆ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರತಿಯೊಂದು ವಿದ್ಯಾರ್ಥಿಗಳು ದೇಶಾಭಿಮಾನ ಬೆಳೆಸಿಕೊಂಡು ಇಂದಿನಿಂದಲೇ ರಾಷ್ಟ್ರದ ಸರ್ವತೋಮುಖ ಅಭಿವೃದ್ದಿಯಲ್ಲಿ ಪಾಲುದಾರರಾಗಬೇಕೆಂದು ಕರೆ ನೀಡಿದರು. ಹರ್ ಘರ್ ತಿರಂಗ ಯಾತ್ರೆಯೂ ಸುಮಾರು 2,500 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸುಮಾರು 600 ಮಿಟರ್ ತಿರಂಗಾದೊಂದಿಗೆ ತುಮಕೂರಿನ ಎಸ್.ಪಿ. ಕಚೇರಿಯಿಂದ ಆರಂಭವಾದ ಯಾತ್ರೆ ತುಮಕೂರು ಹಾಗೂ ಬೆಂಗಳೂರು ರಸ್ತೆಯಲ್ಲಿ ಪಥ ಸಂಚನದೊಂದಿಗೆ ಜೂನಿಯರ್ ಕಾಲೇಜು ಮೈದಾನವನ್ನು ತಲುಪಿತು.ಭಾರತಾಂಬೆಯೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಅತ್ಯಂತ ಆಕರ್ಷಣೀಯವಾಗಿತ್ತು. ದೇಶದ ಸ್ವಾತಂತ್ರ ಹೋರಾಟಗಾರರುಗಳಾದ ಹಾಗೂ ಗಾಂಧೀಜಿ, ಸುಭಾಷ್ ಚಂದ್ರಬೋಸ್, ತಾಂತ್ಯಾಟೋಪಿ, ಭಗತ್ ಸಿಂಗ್, ಅಂಬೇಡ್ಕರ್ , ನೆಹರು, ಶಿವಾಜಿ ಮಹಾರಾಜ್ , ಝಾನ್ಸಿರಾಣಿ, ರಾಣಿ ಚೆನ್ನಮ್ಮ,, ಅಬ್ಬಕ್ಕ, ಮುಂತಾದ ವೇಷ ಭೂಷಣದೊಂದಿಗೆ ವಿದ್ಯಾರ್ಥಿಗಳು ನೋಡುಗರ ಗಮನ ಸೆಳೆದರು. ಪ್ರಮುಖ ರಾಷ್ಟ್ರಾಭಿಮಾನದ ಘೋಷಣೆಗಳೊಂದಿಗೆ ರಾಷ್ಟ್ರ ಪ್ರೇಮ ಹಾಗೂ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್. ಆರ್. ಸಿದ್ದೇಶ್ವರ ಸ್ವಾಮಿ ಹಾಗೂ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನವೀನ್ ಕುಮಾರ್ ಪಿ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಬೋಧಕ ಬೋಧಕೇತರ ವರ್ಗದವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌