ಶತಮಾನ ಕಂಡ ಶ್ರೀನಿವಾಸಪುರ ಶಾಲೆಗೆ ಹೊಸರೂಪ

KannadaprabhaNewsNetwork | Updated : May 10 2025, 01:06 AM IST
Follow Us

ಸಾರಾಂಶ

೧೧೨ ವರ್ಷಗಳ ಇತಿಹಾಸ ಹೊಂದಿರುವ ಶ್ರೀನಿವಾಸಪುರದ ಸರ್ಕಾರಿ ಕನ್ನಡ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟದ ಒಳಗೆ, ಹೊರಗೆ ಸ್ವರೂಪ ಕಳೆದುಕೊಂಡಿತ್ತು. ಈಗ ಬೆಂಗಳೂರಿನ ಯುವಕ ಸಂಘ ಎಂಬ ಹೆಸರಿನ ಎನ್.ಜಿ.ಒ ಸಂಸ್ಥೆ ಶಾಲಾ ಕಟ್ಟಡಕ್ಕೆ ಹೊಸರೂಪ ನೀಡಿದೆ. ಇನ್ಫೋಸಿಸ್ ನಾರಾಯಣಮೂರ್ತಿ ಇದೇ ಶಾಲೆಯಲ್ಲಿ ತಮ್ಮ ಎರಡನೇ ತರಗತಿ ವ್ಯಾಸಾಂಗ ಮಾಡಿದ್ದರಂತೆ

ಕನ್ನಡಪ್ರಭ ವಾರ್ತೆ ಕೋಲಾರಶ್ರೀನಿವಾಸಪುರದ ಸರ್ಕಾರಿ ಕನ್ನಡ ಬಾಲಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬರೋಬ್ಬರಿ ೧೧೨ ವರ್ಷಗಳ ಹಳೆಯದಾಗಿದ್ದು, ದಾನಿಗಳ ಶ್ರಮದಿಂದ ಇದೀಗ ಶಾಲೆಯ ಹೊರನೋಟ, ಒಳನೋಟ ಬದಲಾಗಿದೆ. ಸರ್ಕಾರಿ ಶಾಲೆಯ ಗೋಡೆಗಳಿಗೆ ಚಿತ್ರಗಳ ಮೂಲಕ ಹೊಸ ರೂಪ ನೀಡಲಾಗಿದೆ.

ಶ್ರೀನಿವಾಸಪುರ ಪಟ್ಟಣದ ಮಾದರಿ ಕನ್ನಡ ಶಾಲೆಯು ತನ್ನದೆ ಆದ ಮಹತ್ವ ಪಡೆದಿದೆ, ಇಂದಿಗೂ ಶಾಲೆಯಲ್ಲಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ವ್ಯಾಸಂಗ ನಡೆಸುತ್ತಿದ್ದಾರೆ, ೧೯೧೩ ರಲ್ಲಿ ಈ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ೧೧೨ ವರ್ಷಗಳ ಇತಿಹಾಸ ಹೊಂದಿರುವ ಶಾಲೆಯ ಕಟ್ಟದ ಒಳಗೆ, ಹೊರಗೆ ಸ್ವರೂಪ ಕಳೆದುಕೊಂಡಿತ್ತು. ಈಗ ಬೆಂಗಳೂರಿನ ಯುವಕ ಸಂಘ ಎಂಬ ಹೆಸರಿನ ಎನ್.ಜಿ.ಒ ಸಂಸ್ಥೆ ಶಾಲಾ ಕಟ್ಟಡಕ್ಕೆ ಹೊಸರೂಪ ನೀಡಿದೆ.

ಗೋಡೆಗಳ ಮೇಲೆ ಚಿತ್ರಈ ಸಂಸ್ಥೆಯು ಸತತ ಎರಡು ದಿನಗಳ ಪರಿಶ್ರಮದಲ್ಲಿ ೩೦ ಮಂದಿ ಸದಸ್ಯರು ಭಾಗಿಯಾಗಿದ್ದರು. ಶಾಲೆಯಲ್ಲಿ ಗೋಡೆಗಳಿಗೆ ಸುಣ್ಣ ಬಣ್ಣ ಬಳಿದಿದ್ದು, ಶಾಲೆಯ ಅಂದವನ್ನು ಹೆಚ್ಚಿಸುವ ಸಲುವಾಗಿ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪಠ್ಯ ಪುಸ್ತಕದಲ್ಲಿನ ಚಿತ್ರಗಳನ್ನೆ ಗೋಡೆಗಳ ಮೇಲೆ ಚಿತ್ರಿಸಿದ್ದಾರೆ. ಜೊತೆಗೆ ದೇಶದಲ್ಲಿ ಸಾಧನೆಯ ಶಿಖರ ತಲುಪಿರುವ ಮಹಾನ್ ವ್ಯಕ್ತಿಗಳ ಚಿತ್ರಗಳು, ಗಣಿತ ವಿಜ್ಞಾನಕ್ಕೆ ಪೂರಕವಾದ ಚಿತ್ರಗಳು ಹಾಗು ಪುಠಾಣಿ ಮಕ್ಕಳನ್ನ ಆಕರ್ಷಿಸುವ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನ ಬಿಡಿಸಿ ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.

ಇನ್ಫೋಸಿಸ್ ಮೂರ್ತಿ ಓದಿದ ಶಾಲೆ

ಭಾರತದ ಉದ್ಯಮಿಗಳಲ್ಲಿ ಪ್ರಮುಖರಾಗಿರುವ ಉದ್ಯಮಿ ಇನ್ಫೋಸಿಸ್ ನಾರಾಯಣಮೂರ್ತಿ ಇದೇ ಶಾಲೆಯಲ್ಲಿ ತಮ್ಮ ಎರಡನೇ ತರಗತಿ ವ್ಯಾಸಾಂಗ ಮಾಡಿದ್ದರಂತೆ, ಬಾಲ್ಯದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದ ನಾರಾಯಣಮೂರ್ತಿ ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು. ಸಂಘದ ಕಾರ್ಯ ಮಾದರಿಬೆಂಗಳೂರು ನಗರ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ರೂಪುಗೊಂಡಿರುವ ಯುವಕ ಸಂಘ ಎನ್.ಜಿ.ಒ ಸಂಸ್ಥೆಯ ಕಾರ್ಯ, ಇತರೆ ಸಂಸ್ಥೆಗಳಿಗಿಂತ ಕೊಂಚ ಭಿನ್ನವಾಗಿದೆ, ಇಲ್ಲಿ ಸದಸ್ಯರೆಲ್ಲರು ಒಂದಲ್ಲ ಒಂದು ಕಲೆಯನ್ನ ಕರಗತ ಮಾಡಿಕೊಂಡಿದ್ದವರೆ ಆಗಿದ್ದಾರೆ, ಸ್ಕೂಲ್ ಬೆಲ್ ಎಂಬ ವಿಶೇಷ ಕಾರ್ಯಕ್ರಮ ಮೂಲಕ, ಸರ್ಕಾರಿ ಶಾಲೆಗಳ ಪುನರುಜ್ಜೀವನಕ್ಕೆ ಸಂಸ್ತೆ ಪಣತೊಟ್ಟಿದೆ, ಇದುವರೆಗೂ ರಾಜ್ಯದಲ್ಲಿ ೪೦೦ಕ್ಕೂ ಹೆಚ್ಚು ಶಾಲೆಗಳ ನೋಟ ಬದಲು ಮಾಡಲು ಸಂಸ್ತೆ ಪಟತೊಟ್ಟಿದ್ದು, ದಾನಿಗಳ ನೆರವಿನಿಂದಲೇ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ, ತಾವು ಮಾಡುವ ಕೆಲಸದಲ್ಲಿ ಬೇರೊಬ್ಬರ ಸಹಕಾರ ಇಲ್ಲದೆ, ಸಂಸ್ಥೆಯ ಸದಸ್ಯರೆ ನೈಪುಣ್ಯತೆ ಇರುವರೇ ಸದಸ್ಯರಾಗಿದ್ದಾರೆ.ಸರ್ಕಾರಿ ಶಾಲೆಗಳಿಗೆ ಹೊಸರೂಪ ನೀಡುವುದೇ ಅಲ್ಲದೆ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್‌ಗಳ ಮಾಹಿತಿ ನೀಡುವುದು ಹಾಗು ತರಬೇತಿ ನೀಡುವ ಕೆಲಸವನ್ನು ಸಂಸ್ಥೆ ಮಾಡುತ್ತಿದೆ, ಸರ್ಕಾರಿ ಶಾಲೆ ಉಳಿಸಿ, ಬೆಳೆಸಿದರೆ ಅದು ಊರಿಗೆ ಉಪಕಾರಿ ಎಂಬುದು ಸಂಸ್ಥೆಯ ಧ್ಯೇಯವಾಗಿದೆ,