ವಿಕಸಿತ ಭಾರತಕ್ಕೆ ನೂತನ ತಂತ್ರಜ್ಞಾನ, ಸಂಶೋಧನೆ ಅಗತ್ಯ: ಪ್ರಾಧ್ಯಾಪಕ ಪ್ರೊ. ಕೆ.ಡಿ.ಪಿ. ನಿಗಮ್

KannadaprabhaNewsNetwork |  
Published : Feb 29, 2024, 02:03 AM IST
28ಡಿಡಬ್ಲೂಡಿ7ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಸಮಾರಂಭದಲ್ಲಿ  ಉತ್ತಮ ವಿಜ್ಞಾನ ಲೇಖನ ಪ್ರಶಸ್ತಿ ಪಡೆದ ಪ್ರಾಧ್ಯಾಪಕರೊಂದಿಗೆ ಗಣ್ಯರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಹೊಸದನ್ನು ಕಲಿಯಲು ಆಸಕ್ತಿ ಹಾಗೂ ವೈಜ್ಞಾನಿಕ ಚಿಂತನೆ ಹೊಂದುವುದು ಮತ್ತು ಭಿನ್ನವಾಗಿ ವಿಚಾರ ಮಾಡುವುದನ್ನು ಕಲಿಯಬೇಕು ಎಂದು ಪ್ರಾಧ್ಯಾಪಕ ಪ್ರೊ. ಕೆ.ಡಿ.ಪಿ. ನಿಗಮ್ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ವಿಕಸಿತ ಭಾರತಕ್ಕೆ ನೂತನ ತಂತ್ರಜ್ಞಾನ ಮತ್ತು ಆವಿಷ್ಕಾರ ಸಂಶೋಧನೆಗಳ ಅವಶ್ಯಕತೆ ಇದೆ. ಹೊಸ ಅನ್ವೇಷಣೆ ಮತ್ತು ತಂತ್ರಜ್ಞಾನದಲ್ಲಿ ಯುವ ಸಂಶೋಧಕರ ಪಾತ್ರ ಹೆಚ್ಚಿದೆ ಎಂದು ದೆಹಲಿ ಐಐಟಿಯ ಕೆಮಿಕಲ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಪ್ರೊ. ಕೆ.ಡಿ.ಪಿ. ನಿಗಮ್ ಹೇಳಿದರು.

ಕರ್ನಾಟಕ ವಿಶ್ವ ವಿದ್ಯಾಲಯ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ನಿಮಿತ್ತ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಸರ್.ಸಿ.ವಿ. ರಾಮನ್ ಸ್ಮಾರಕ ಮೂಲತತ್ವ ಉಪನ್ಯಾಸದಲ್ಲಿ ''''''''ಕಾಯಿಲ್ಡ್ ಫ್ಲೋ ಇನ್ವರ್ಟರ್ - ಒಂದು ನವೀನ ಸಾಧನ''''''''. ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಹೊಸದನ್ನು ಕಲಿಯಲು ಆಸಕ್ತಿ ಹಾಗೂ ವೈಜ್ಞಾನಿಕ ಚಿಂತನೆ ಹೊಂದುವುದು ಮತ್ತು ಭಿನ್ನವಾಗಿ ವಿಚಾರ ಮಾಡುವುದನ್ನು ಕಲಿಯಬೇಕು. ಗುಣಮಟ್ಟದ ಆಹಾರ ಉತ್ಪಾದನೆಯಲ್ಲಿ ಹೊಸ ಸಂಶೋಧನೆಗಳ ಪಾತ್ರ ಬಹಳ ಇದೆ. ನೂತನ ವೈಜ್ಞಾನಿಕ ಸಂಶೋಧನೆಗಳ ಮೂಲಕ ದೇಶದ ಸಮಸ್ಯೆಗಳನ್ನು ಪರಿಹರಿಸುವಂತಾಗಬೇಕು ಎಂದರು.

ಕಾಯಿಲ್ಡ್ ಫ್ಲೋ ಇನ್ವರ್ಟರ್ ಅನೇಕ ಉದ್ಯಮಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಲಾಗುತ್ತದೆ ಎಂದ ಅವರು, ಈ ಸಾಧನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯಕ್ಕೆ ತಕ್ಕಂತೆ ವಿದೇಶದ ಉದ್ಯಮದಲ್ಲಿ ಬಳಸಲಾಗುತ್ತದೆ. ಟ್ರೀಕಲ್ ಬೆಡ್ ರಿಯಾಕ್ಟರ್ ಸಂಶೋಧನೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐಐಟಿ ದೆಹಲಿ ಮೂರನೇ ಸ್ಥಾನದಲ್ಲಿ ಇದೆ ಎಂದ ಅವರು ಒಬ್ಬ ಉತ್ತಮ ಸಂಶೋಧಕನಿಗೆ ಸೃಜನಶೀಲತೆ, ಆಸಕ್ತಿ ಹೊಂದಿರಬೇಕು ಎಂದರು.

ಇದೇ ಸಮಯದಲ್ಲಿ ಡಾ. ಸರಸ್ವತಿ ಮಾಸ್ತಿ, ಡಾ. ಮಹಾದೇವಪ್ಪ ಕರಿದುರ್ಗನವರ, ಪ್ರೊ. ಕೆ.ಬಿ. ಗುಡಸಿ, ಪ್ರೊ. ಆರ್.ಎಫ್ ಭಂಜಂತ್ರಿ, ಡಾ. ಆಶಾ ಕೊಟನೂರಕರ, ಡಾ. ಹರಿಶ್ಚಂದ್ರ ರಾಮನೆ, ಪ್ರೊ. ಶ್ರೀ ನಿವಾಸ ನಾಯಕ, ಡಾ. ಜಯಶ್ರೀ ತೋನಣ್ಣವರ 2022 ನೇ ಸಾಲಿನ ಉತ್ತಮ ವಿಜ್ಞಾನ ಲೇಖನಗಳ ಪ್ರಶಸ್ತಿಯನ್ನು ಪಡೆದರು. ಪ್ರೊ. ಎಂ. ಡೇವಿಡ್ ಅವರ ಶ್ರೇಷ್ಠ ಉತ್ತಮ ವಿಜ್ಞಾನ ಲೇಖನಕ್ಕೆ ₹10 ಸಾವಿರ ನಗದು ಬಹುಮಾನ ಪಡೆದರು.

ಅಧ್ಯಕ್ಷತೆ ವಹಿಸಿದ್ದ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಒಬ್ಬ ಸಂಶೋಧಕ ಸಮಾಜಕ್ಕೆ ಉಪಯುಕ್ತ ರೀತಿಯಲ್ಲಿ ಅನ್ವೇಷಣೆ ಮಾಡಿದಾಗ ಅದಕ್ಕಿಂತ ತೃಪ್ತಿ ಬೇರಿಲ್ಲ. ಲಭ್ಯವಿರುವ ಉಪಕರಣ ಸಂಪನ್ಮೂಲಗಳಿಂದ ಬಹುಪಯೋಗಿ, ಕಡಿಮೆ ವೆಚ್ಚದಾಯಕ ಸಂಶೋಧನೆಗಳು ಇಂದಿನ ಪ್ರಯೋಗಾಲಯಗಳಲ್ಲಿ ನಡೆಯಬೇಕಾಗಿದೆ ಎಂದರು.

ಕುಲಸಚಿವರಾದ ಡಾ. ಎ ಚೆನ್ನಪ್ಪ, ಡಾ. ನಿಜಲಿಂಗಪ್ಪ ಮಟ್ಟಿಹಾಳ್, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಸಂಯೋಜಕ ಡಾ. ಮಲ್ಲಿಕಾರ್ಜುನ ಪಾಟೀಲ, ಡಾ. ಚಂದ್ರಶೇಖರ್ ರೊಟ್ಟಿಗವಾಡ, ಡಾ. ರವೀಂದ್ರ ಕಾಂಬಳೆ, ಪ್ರೊ. ಎಂ. ಡೆವಿಡ್, ಡಾ. ಬುಜುರ್ಕೆ, ಪ್ರೊ. ಆರ್.ಎಸ್. ಶಿರಾಳಶೆಟ್ಟಿ, ಡಾ. ಶ್ಯಾಮಲಾ ರತ್ನಾಕರ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ