ನಾಡು,ನುಡಿಗೆ ಸದಾ ಮಿಡಿಯುವ ಸೊಂದಲಗೆರೆ ಲಕ್ಷ್ಮೀಪತಿ ಕುಟುಂಬ । ಕನ್ನಡ ಭವನದ ಉದ್ಘಾಟಿಸುವ ನಾಡಿನ ಗಣ್ಯರು
ಕನ್ನಡಪ್ರಭ ವಾರ್ತೆ ಕುಣಿಗಲ್ಕುಣಿಗಲ್ ತಾಲೂಕಿನ ಸೊಂದಲಗೆರೆ ಲಕ್ಷ್ಮಿಪತಿಯವರ ಕುಟುಂಬ ತಾಲೂಕಿನ ಕನ್ನಡದ ಸೇವೆಗಾಗಿ ಸ್ವಂತ ಹಣದಲ್ಲಿ ಮೂರು ಕಟ್ಟಡಗಳನ್ನು ನಿರ್ಮಾಣ ಮಾಡಿರುವುದು ಕನ್ನಡ ಸೇವೆಗೆ ಹಾಗೂ ಕನ್ನಡ ಭಾಷೆಗೆ ತಂದ ಗೌರವ ಮತ್ತು ಪ್ರಶಂಸನೀಯವಾಗಿದೆ.
ಸೊಂದಲಗೆರೆ ಲಕ್ಷ್ಮೀಪತಿ ಸಾಹಿತಿಯಾಗಿದ್ದು, ಹಲವರು ಕನ್ನಡ ಚಟುವಟಿಕೆ, ಪುಸ್ತಕ ಬರವಣಿಗೆ ಸೇರಿದಂತೆ ಹಲವಾರು ಕೃತಿಗಳನ್ನು ರಚನೆ ಮಾಡಿದ್ದಾರೆ.ಇವರಿಗೆ ಕನ್ನಡ ಅಭಿಮಾನ ಹೆಚ್ಚಾಗಿ ಕಾಡುತ್ತಿದ್ದು, ತನ್ನ ಊರಿಗೆ ಮೂರು ಅಂತಸ್ತಿನ ಸುಸಜ್ಜಿತ ಆಧುನಿಕ ವಾಚನಾಲಯವನ್ನು ನಿರ್ಮಿಸಿ ಪ್ರತಿದಿನ ಎಲ್ಲಾ ಪತ್ರಿಕೆಗಳು ಗ್ರಾಮದ ಜನರ ಕೈಸೇರುವ ವ್ಯವಸ್ಥೆ ಮಾಡಿದ್ದಾರೆ.
ಬಯಲು ರಂಗಭೂಮಿಯನ್ನು ನಿರ್ಮಾಣ ಮಾಡಿ ಹಲವಾರು ಕಲೆ, ಸಾಹಿತ್ಯ ಬೆಳೆಸುವಲ್ಲಿ ಸಹಕಾರಿಯಾಗಿರುವ ಸೊಂದಲಗೆರೆ ಲಕ್ಷ್ಮೀಪತಿ ಕುಣಿಗಲ್ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದ ಮೇಲೆ ಮತ್ತೊಂದು ಸಭಾಂಗಣವನ್ನು ನಿರ್ಮಾಣ ಮಾಡಿ ಡಿ.19 ರ ಮಂಗಳವಾರ ಲೋಕಾರ್ಪಣೆ ಮಾಡಲಿದ್ದಾರೆ.ಪ್ರತಿ ದಿನ ಬೆಂಗಳೂರಿನಿಂದ ಬಂದು ಕಟ್ಟಡಕ್ಕೆ ಬೇಕಾದ ವಸ್ತುಗಳನ್ನು ಹಾಗೂ ಕಾರ್ಮಿಕರ ಜೊತೆ ತಾವು ಕೂಡ ನಿಂತು ಕೆಲಸ ಮಾಡಿ ಕನ್ನಡದ ಭವನ ನಿರ್ಮಾಣ ಮಾಡುವಲ್ಲಿ ಯಶಸ್ವಿ ಆಗಿದ್ದಾರೆ,
ಈ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಕುಣಿಗಲ್ ತಾಲೂಕು ಘಟಕದ ಅಧ್ಯಕ್ಷ ಕಪನಿ ಪಾಳ್ಯ ರಮೇಶ್ ಮಾತನಾಡಿ, ಕಳೆದ ವರ್ಷ ಅದ್ಧೂರಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕುಣಿಗಲ್ ನಲ್ಲಿ ನಡೆಸಲಾಗಿತ್ತು, ಈ ಸಮಯದಲ್ಲಿ ಅವರಿಗೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ತಮ್ಮ ಸ್ವಂತ ಹಣದಲ್ಲಿ ಇಂತಹ ಸುಸಜ್ಜಿತ ಭವನ ನಿರ್ಮಾಣ ಮಾಡಿರುವುದು ಅವರಿಗೆ ಕನ್ನಡದ ಮೇಲೆ ಇರುವ ಪ್ರೀತಿ, ಗೌರವಕ್ಕೆ ಸಾಕ್ಷಿಯಾಗಿದೆ ಎಂದು ಅಭಿನಂದಿಸಿದರು,ಕನ್ನಡ ಭವನದ ಉದ್ಘಾಟನಾ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಕನ್ನಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಡಾ. ನಾಡೊಜಾ ಮಹೇಶ್ ಜೋಶಿ, ಸೇರಿದಂತೆ ಹಲವಾರು ಸಾಹಿತಿಗಳು ಮತ್ತು ಸ್ವಾಮೀಜಿಗಳು ಹಾಗೂ ಕನ್ನಡ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ,
---ಸ್ವಂತ ಹಣದಲ್ಲಿ ಕನ್ನಡಕ್ಕಾಗಿ ಮೂರು ಕಟ್ಟಡ ನಿರ್ಮಿಸಿದ ಸೊಂದಲಗೆರೆ ಲಕ್ಷ್ಮಿಪತಿ.
---ಸ್ವಂತ ಹಣದಲ್ಲಿ ಕನ್ನಡಕ್ಕಾಗಿ ಮೂರು ಕಟ್ಟಡ ನಿರ್ಮಾಣ