ಅಳಿಯನ ಮದುವೆ ದಿನವೇ ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ

KannadaprabhaNewsNetwork | Published : Apr 6, 2024 12:46 AM

ಸಾರಾಂಶ

ಮುಂಡಗೋಡದ ಆನಂದ ನಗರದ ಬಸವರಾಜ ಮಲ್ಲೂರ (42) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ರೈತ.

ಮುಂಡಗೋಡ: ಸಾಲಬಾಧೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಇಲ್ಲಿನ ಆನಂದ ನಗರದ ಬಸವರಾಜ ಮಲ್ಲೂರ (42) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ರೈತ. ಅವರು ತಮ್ಮ ಜಮೀನಿನಲ್ಲಿ ಅಡಕೆ, ಗೋವಿನಜೋಳ ಬೆಳೆ ಬೆಳೆದಿದ್ದರು. ಅಲ್ಲದೇ ಸಾಲ ಮಾಡಿ ಕೊಳವೆ ಬಾವಿ ಕೊರೆಸಿದ್ದರು. ವಿವಿಧ ಬ್ಯಾಂಕ್‌ ಹಾಗೂ ಸಂಘ ಸಂಸ್ಥೆಗಳಲ್ಲಿ ಲಕ್ಷಾಂತರ ರುಪಾಯಿ ಸಾಲ ಮಾಡಿದ್ದರು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮದುವೆ ಮನೆಯಲ್ಲಿ ನೀರವ: ಶುಕ್ರವಾರ ಪಟ್ಟಣದ ದೈವಜ್ಞ ಕಲ್ಯಾಣಮಂಟಪದಲ್ಲಿ ಮೃತ ಬಸವರಾಜನ ಸೋದರ ಅಳಿಯನ ಮದುವೆಯಿತ್ತು. ಕುಟುಂಬದವರು ಮದುವೆ ಸಂಭ್ರಮದಲ್ಲಿದ್ದರೆ, ಮಾವ ಬಸವರಾಜ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬಸ್ಥರಿಗೆ ಸಿಡಿಲು ಬಡಿದಂತಾಗಿದೆ. ಈ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವಜ್ರಳ್ಳಿಯಲ್ಲಿ ಬೈಕ್‌ ಕದ್ದಿದ್ದ ಆರೋಪಿ ಬಂಧನ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಮಾರ್ಕೆಟ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ ಆರೋಪಿಯನ್ನು ಕಳ್ಳತನ ಮಾಡಿದ ಬೈಕ್‌ನೊಂದಿಗೆ ಬಂಧಿಸುವಲ್ಲಿ ಯಲ್ಲಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕುಮಟಾ ಹೆರವಟ್ಟಾ ನಿವಾಸಿ ಸೆಂಟ್ರಿಂಗ್ ಗುತ್ತಿಗೆದಾರ 44 ವರ್ಷದ ಅನಿಲ್ ಬಾಬು ನಾಯ್ಕ ಆಗಿದ್ದು, ಆರೋಪಿಯು ಪೊಲೀಸ್ ವಿಚಾರಣೆಯಲ್ಲಿ ತಾನು ವಜ್ರಳ್ಳಿಯಲ್ಲಿ ಮೋಟಾರ ಸೈಕಲ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ.

ವಜ್ರಳ್ಳಿ ನಿವಾಸಿ ನಾರಾಯಣ ಮಾದೇವ ಗೌಡ ಇವರು, ವಜ್ರಳ್ಳಿ ಗ್ರಾಮದ ಸಂತೆ ಮಾರ್ಕೇಟ್ ಆವರಣದಲ್ಲಿ ನಿಲ್ಲಿಸಿಟ್ಟ ಹೀರೋ ಹೋಂಡಾ ಸ್ಪ್ಲೆಂಡರ್ ಪ್ರೊ ಬೈಕ್‌ಅನ್ನು ಕಳೆದ ವರ್ಷ ಡಿಸೆಂಬರ್ 30ರಂದು ರಾತ್ರಿ ಕಳ್ಳತನ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಯಲ್ಲಾಪುರ ಪೊಲೀಸರು ಕಳೆದು ಹೋದ ವಾಹನಕ್ಕಾಗಿ ಶೋಧ ನಡೆಸಿದ್ದರು.ಯಲ್ಲಾಪುರ ಪಿಐ ರಮೇಶ ಹನಾಪುರ ನೇತೃತ್ವ ವಹಿಸಿ ಪಿಎಸ್ಐಗಳಾದ ಸಿದ್ದು ಗುಡಿ, ವಿಜಯರಾಜ್, ವಿನೋದ ಕುಮಾರ ಬಿ., ನಸ್ರೀನ್ ತಾಜ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Share this article