ಬೀಚಗೊಂಡನಹಳ್ಳಿಯ ಭಕ್ತಾಂಜನೇಯನಿಗೆ ಅದ್ಧೂರಿ ರಾಮೋತ್ಸವ

KannadaprabhaNewsNetwork | Published : Apr 18, 2025 12:47 AM

ಸಾರಾಂಶ

ಶ್ರೀರಾಮ ಮತ್ತು ರಾವಣರ ಯುದ್ಧದ ಸಂದರ್ಭದಲ್ಲಿ ಮೂರ್ಛೆ ಹೋದ ಲಕ್ಷ್ಮಣನಿಗಾಗಿ ಗಿಡಮೂಲಿಕೆ ತರಲು ಸಂಜೀವಿನ ಪರ್ವತಕ್ಕೆ ಹೋಗುವ ವೇಳೆ ಹನುಮನ ಪಾದಸ್ಪರ್ಶ ಈ ಗ್ರಾಮಕ್ಕೆ ಆಗಿತ್ತು ಎನ್ನುವ ಪ್ರತೀತಿ ಇದೆ. ಈಗಾಗಿ ಇಲ್ಲಿ ಒಂದು ಹನುಮನ ಪುಟ್ಟ ಗುಡಿಯೊಂದನ್ನು ಕಟ್ಟಿ ಅನಾದಿಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದರು. ೬-೭ ದಶಕಗಳ ಹಿಂದೆ ದೇವಾಲಯದ ಜೀರ್ಣೋದ್ಧಾರದ ಸಂದರ್ಭದಲ್ಲಿ ಮಂಗವೊಂದು ಈ ದೇವಾಲಯದಲ್ಲಿ ವಾಸವಿತ್ತಂತೆ. ದೇವಾಲಯ ನಿರ್ಮಾಣವಾಗುವ ಸಂದರ್ಭದಲ್ಲಿ ಒಮ್ಮೆ ನಾಯಿ ಅದನ್ನು ಘಾಸಿಗೊಳಿಸಿದ ಹಿನ್ನೆಲೆಯಲ್ಲಿ ಅದು ದೇವಾಲಯದ ಆವರಣಕ್ಕೆ ಬಂದು ಪ್ರಾಣಬಿಟ್ಟಿದ್ದು, ನಂತರ ಅದೇ ಸ್ಥಳದಲ್ಲಿ ಒಂದು ಕಲ್ಲಿನ ರೂಪದಲ್ಲಿ ಹನುಮ ಉದ್ಭವವಾಗಿದ್ದು, ಅ ಸ್ಥಳದಲ್ಲಿಯೇ ಮತ್ತೊಂದು ಗುಡಿಯನ್ನು ನಿರ್ಮಿಸಿ ಪೂಜಿಸಲು ಆರಂಭಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪವಾಡ ಸೃಷ್ಠಿಸೋ ಬೀಚಗೊಂಡನಹಳ್ಳಿಯ ಭಕ್ತಾಂಜನೇಯ ಸ್ವಾಮಿಯ ರಾಮೋತ್ಸವ ಕಾರ್ಯಕ್ರಮ ಬಹಳ ವಿಜೃಂಭವಣೆಯಿಂದ ಜರುಗಿತು.

ಮೂರು ದಿನಗಳ ಕಾಲ ನಡೆಯುವ ಶ್ರೀರಾಮನ ಭ್ರಹ್ಮ ರಥೋತ್ಸವದ ಕಾರ್ಯಕ್ರಮಕ್ಕೆ ಸುತ್ತ ಮುತ್ತಲ ಹಳ್ಳಿಗಳಿಂದ ಮಾತ್ರವಲ್ಲದೇ, ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ರಾಮನವಮಿಯಲ್ಲಿ ಪಾಲ್ಗೊಳ್ಳುತ್ತಾರೆ.ಮಂಗವೊಂದು ವಾಸವಿದ್ದ ಸ್ಥಳ:ಶ್ರೀರಾಮ ಮತ್ತು ರಾವಣರ ಯುದ್ಧದ ಸಂದರ್ಭದಲ್ಲಿ ಮೂರ್ಛೆ ಹೋದ ಲಕ್ಷ್ಮಣನಿಗಾಗಿ ಗಿಡಮೂಲಿಕೆ ತರಲು ಸಂಜೀವಿನ ಪರ್ವತಕ್ಕೆ ಹೋಗುವ ವೇಳೆ ಹನುಮನ ಪಾದಸ್ಪರ್ಶ ಈ ಗ್ರಾಮಕ್ಕೆ ಆಗಿತ್ತು ಎನ್ನುವ ಪ್ರತೀತಿ ಇದೆ. ಈಗಾಗಿ ಇಲ್ಲಿ ಒಂದು ಹನುಮನ ಪುಟ್ಟ ಗುಡಿಯೊಂದನ್ನು ಕಟ್ಟಿ ಅನಾದಿಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದರು. ೬-೭ ದಶಕಗಳ ಹಿಂದೆ ದೇವಾಲಯದ ಜೀರ್ಣೋದ್ಧಾರದ ಸಂದರ್ಭದಲ್ಲಿ ಮಂಗವೊಂದು ಈ ದೇವಾಲಯದಲ್ಲಿ ವಾಸವಿತ್ತಂತೆ. ದೇವಾಲಯ ನಿರ್ಮಾಣವಾಗುವ ಸಂದರ್ಭದಲ್ಲಿ ಒಮ್ಮೆ ನಾಯಿ ಅದನ್ನು ಘಾಸಿಗೊಳಿಸಿದ ಹಿನ್ನೆಲೆಯಲ್ಲಿ ಅದು ದೇವಾಲಯದ ಆವರಣಕ್ಕೆ ಬಂದು ಪ್ರಾಣಬಿಟ್ಟಿದ್ದು, ನಂತರ ಅದೇ ಸ್ಥಳದಲ್ಲಿ ಒಂದು ಕಲ್ಲಿನ ರೂಪದಲ್ಲಿ ಹನುಮ ಉದ್ಭವವಾಗಿದ್ದು, ಅ ಸ್ಥಳದಲ್ಲಿಯೇ ಮತ್ತೊಂದು ಗುಡಿಯನ್ನು ನಿರ್ಮಿಸಿ ಪೂಜಿಸಲು ಆರಂಭಿಸಿದ್ದಾರೆ.ಗೋಡೆಯ ಮೇಲೆ ಬರೆಯುವ ದೈವ:

ದೇವಾಲಯದ ವಿಶೇಷವೆಂದರೇ, ಇಲ್ಲಿ ಕಷ್ಟವನ್ನು ಹೊತ್ತು ಬರುವ ಭಕ್ತರಿಗೆ ಭಕ್ತಾಂಜನೇಯ ದೇವಾಲಯದ ಕಂಬದ ಮೇಲೆ ಬರೆಯುವ ಮೂಲಕ ಪರಿಹಾರ ನೀಡುತ್ತಾನೆ. ಪ್ರತಿ ಶುಕ್ರವಾರದಂದು ಇಲ್ಲಿಗೆ ಸಾವಿರಾರು ಭಕ್ತರ ದಂಡೆ ಹರಿದುಬರುತ್ತದೆ. ಕಷ್ಟವನ್ನು ಹೊತ್ತು ಪರಿಹಾರಕ್ಕಾಗಿ ಬರುವ ಭಕ್ತರ ಮನಸ್ಸಿನ ಕೋರಿಕೆಯನ್ನು ಕಂಬದಲ್ಲಿ ಬರೆಯುವ ಮೂಲಕ ಪರಿಹಾರ ಸೂಚಿಸುತ್ತಾನೆ. ಅದರಂತೆ ಭಕ್ತರು ನಡೆದುಕೊಂಡರೇ, ಇಷ್ಟಾರ್ಥಗಳು ಸಿದ್ದಿಯಾಗುತ್ತದೆ ಎಂಬ ಅಚಲ ನಂಬಿಕೆ ಭಕ್ತರದ್ದು.ಬ್ರಹ್ಮರಥೋತ್ಸವಕ್ಕೆ ಜನಸಾಗರ:ಮೂರು ದಿನಗಳ ಕಾಲ ನಡೆಯುವ ಈ ಶ್ರೀರಾಮೋತ್ಸವ ಕಾರ್ಯಕ್ಕೆ ಸಾವಿರಾರು ಭಕ್ತ ಸಮೂಹ ದೂರದ ಊರಿನಿಂದ ಬರುತ್ತಾರೆ. ಮೊದಲನೇ ದಿನ ದೇವರಿಗೆ ಕಳಸರಾಧನೆ, ಗಂಗಾಸ್ನಾನ, ಕದಲಿಚೇತನ, ಕುಶ್ಮಂಡ ಬಲಿ, ರಥದ ಸುತ್ತ ಬಲಿ, ಹೀಗೆ ಸಂಪ್ರಾದಾಯಿಕ ಪೂಜಾ ವಿಧಾನಗಳು ನಡೆಯುತ್ತವೆ. ಎರಡನೇ ದಿನ ಶ್ರೀ ಸ್ವಾಮಿಯವರಿಗೆ ಶ್ರೀ ಕೃಷ್ಣಗಂದೋತ್ಸವ, ಸೇರಿದಂತೆ ರಾತ್ರಿ ಊರಿನ ಪ್ರಮುಖ ಬೀದಿಗಳಲ್ಲಿ ಉತ್ಸವ ಜರುಗಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗುತ್ತದೆ. ಮೂರನೇ ದಿನ ಸೂರ್ಯನಮಸ್ಕಾರ, ಗಂಗಾಸ್ನಾನ, ಅಣತಿ, ವಳಗೇರಹಳ್ಳಿ, ಬೀಜಗೊಂಡನಹಳ್ಳಿಯಿಂದ ಬಂದ ವಿವಿಧ ದೇವಾನು ದೇವತೆಗಳ ಅಡ್ಡ ಪಲ್ಲಕ್ಕಿ ಜರುಗಿದ ಬಳಿಕ, ಭಕ್ತಾಂಜನೇಯನ ಬ್ರಹ್ಮರಥೋತ್ಸವ, ಅಣತಿ ಗ್ರಾಮ ದೇವತೆ ಲಕ್ಷ್ಮಿದೇವಿಯನ್ನು ರಥದ ಮೇಲೆ ಕೂರಿಸಿ ಸಾವಿರಾರು ಭಕ್ತರು ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು. ಬಳಿಕ ವಿವಿಧ ಜಿಲ್ಲೆಗಳಿಂದ ಹರಕೆ ಹೊತ್ತು ಆಗಮಿಸಿದ ಭಕ್ತರು ತಮ್ಮ ಹರಕೆಯನ್ನು ಈಡೇರಿಸುವಂತೆ ಪ್ರಾರ್ಥಿಸಿದರು.ತಲಾತಲಾಂತರದಿಂದ ದೇವರಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಮೂರು ದಿನಗಳಿಂದ ಗ್ರಾಮದಲ್ಲಿ ದೈವಾರಾಧನೆ ನಡೆಯುತ್ತವೆ. ಮೂರನೇ ದಿನ ಶ್ರೀರಾಮ ಭಕ್ತ ಹನುಮನ ಮತ್ತು ಲಕ್ಷ್ಮಿ ದೇವರುಗಳ ಅಡ್ಡ ದೇವರುಗಳ ಅಡ್ಡಪಲ್ಲಕ್ಕಿ ಜರುಗಲಿದೆ. ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿ ತಮ್ಮ ಹರಕೆ ತೀರಿಸಿ, ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುತ್ತಾರೆ ಭಕ್ತರು.ಉತ್ಸವ ಮೂರ್ತಿಯೊಮ್ಮೆ ಗಂಗಾಸ್ನಾನಕ್ಕಾಗಿ ಹಾಸನದ ರಾಮದೇವರ ಹಳ್ಳದ ಬಳಿ ಹೋದ ವೇಳೆ, ಮಧ್ಯಾಹ್ನದ ಸಂದರ್ಭದಲ್ಲಿ ಭಕ್ತರೊಬ್ಬರು, ಮಡಿಲುಅಕ್ಕಿ ನೀಡಲು ನಿರಾಕರಿಸಿದ್ದು, ಗಂಗಾಸ್ನಾದ ಬಳಿಕ ಭಕ್ತಾಂಜನೇಯ ವಾಪಸ್ ಸ್ವಗ್ರಾಮಕ್ಕೆ ಬರುವ ಸಂದರ್ಭದಲ್ಲಿ ಮಡಿಲಕ್ಕಿ ನೀಡಲು ನಿರಾಕರಿಸಿದ ಭಕ್ತರೊಬ್ಬರ ಮನೆಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ, ಮನೆ ಸೇರಿ ಮನೆಯಲ್ಲಿದ್ದ, ದವಸ, ಧಾನ್ಯ, ಬಂಗಾರದ ಆಭರಣ, ಜಾನುವಾರುಗಳ ಹುಲ್ಲಿನ ಮೆದೆ ಸಮೇತ ಸುಟ್ಟುಹೋಗುತ್ತೆ. ತದನಂತರ ತಪ್ಪಿನ ಅರಿವಾಗಿ, ಈ ದೇವಾಲಯಕ್ಕೆ ಬಂದು ತಪ್ಪು ಕಾಣಿಕೆಯೊಪ್ಪಿಸಿದ ಬಳಿಕ ಆ ಮನೆಯಲ್ಲಿ ಮೊದಲಿನ ರೀತಿಯಲ್ಲಿಯೇ ಸಂತೋಷ ಮರಳಿ ಬಂದಿದೆ. ಪ್ರತಿವರ್ಷ ಆ ಕುಟುಂಬ ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. ಗಂಡು ಮಗು ಬೇಕು ಎಂದು ಹರಕೆಯೊತ್ತ ಭಕ್ತರೊಬ್ಬರ ಕೋರಿಕೆ ಈಡೆರಿಸಿದ ಹಿನ್ನೆಲೆಯಲ್ಲಿ ಆ ಕುಟುಂಬ ದೇವಾಲಯಕ್ಕೆ ಚಿನ್ನದ ಲೇಪಿತ ಪಂಚಲೋಹ ವಿಗ್ರಹದ ಉತ್ಸವ ಮೂರ್ತಿಯೊಂದನ್ನು ಮಾಡಿಸಿಕೊಟ್ಟಿದ್ದಾರೆ.

Share this article