ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಅದ್ಧೂರಿ ಸ್ವಾಗತ

KannadaprabhaNewsNetwork |  
Published : Jan 30, 2024, 02:03 AM IST
ಫೋಟೋ- 29ಜಿಬಿ4 ಮತ್ತು 29ಜಿಬಿ5ಕಲಬುರಗಿಯಲ್ಲಿರುವ ಶರಣಬಸವೇಶ್ವರ ಮಹಾ ದಾಸೋಹ ಮನೆಗೆ ಸೋಮವಾರ ಭೇಟಿ ನೀಡಿದ್ದ ಬಿಜೆಪಿ ರಾಝ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ, ಚಿ. ದೊಡ್ಪ್ಪ ಅಪ್ಪ ಅವರಿಗೆ ಸತ್ಕರಿಸಿ ಆಶಿರ್ವಾದ ಪಡೆದರು. | Kannada Prabha

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಸೋಮವಾರ ಕಲಬುರಗಿಗೆ ಆಗಮಿಸಿರುವ ಬಿವೈ ವಿಜಯೇಂದ್ರ ಅವರಿಗೆ ಸ್ಥಳೀಯ ಬಿಜೆಪಿ ಘಟಕ ಅದ್ದೂರಿ ಸ್ವಾಗತ ನೀಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಸೋಮವಾರ ಕಲಬುರಗಿಗೆ ಆಗಮಿಸಿರುವ ಬಿವೈ ವಿಜಯೇಂದ್ರ ಅವರಿಗೆ ಸ್ಥಳೀಯ ಬಿಜೆಪಿ ಘಟಕ ಅದ್ದೂರಿ ಸ್ವಾಗತ ನೀಡಿದೆ. ವಿಜಯೇಂದ್ರ ಸಂಜೆ 5.45 ಗಂಟೆಗೆ ಕಲಬುರಗಿಗೆ ಬಂದು ನೇರವಾಗಿ ಶರಣಬಸವೇಶ್ವರ ಮಹಾ ದಾಸೋಹ ಮನೆಗೆ ಭೇಟಿ ನೀಡಿದ್ದರು.

ಇಲ್ಲಿನ ಶರಣಬಸವೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಅವರನ್ನು ಕಂಡು ಆಶಿವ್ರಾದ ಪಡೆದುಕೊಂಡರು. ಇಲ್ಲೇ ವಿಜಯೇಂದ್ರ ಅವರು ಶರಣಬಸವಪ್ಪ ಅಪ್ಪ ಹಾಗೂ ಚಿ. ದೊಡ್ಡಪ್ಪ ಅವರಿಗೆ ಸನ್ಮಾನಿಸಿದರು.

ಇದಾದ ನಂತರ ಶರಣಬಸವೇಶ್ವರ ಮಹಾ ದಾಸೋಹ ಮನೆಯಿಂದಲೇ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಸಂಸ್ಕೃತಿಕ ಕಲಾ ತಂಡಗಳು, ವಾದ್ಯ ವೈಭವ, ಹಲಗೆ, ಬಾಜಾ ಭಜಂತ್ರಿ ಮೂಲಕವಾಗಿ ವಿಜಯೇಂದ್ರ ಅವರಿಗೆ ಸ್ವಾಗತ ಕೋರಲಾಯ್ತು.

ಇಲ್ಲಿಂದ ಶುರುವಾಗಿರುವ ಮೆರವಣಿಗೆ ಸಮಾರಂಬ ನಡೆಯಲಿರುವ ಎನ್‌ವಿ ಮೈದಾನದವರೆಗೂ ನಡೆಯಲಿದೆ. ಅಲ್ಲಿ ವಿಜಯೇಂದ್ರ ಅವರ ಅಭಿನದನಾ ಸಮಾರಂಭ ಹಾಗೂ ನೂತನ ಅಧ್ಯಕ್ಷರಾಗಿರುವ ಶಿವರಾಜ ಪಾಟೀಲ್‌ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್‌ ಅವರ ಪದಗ್ರಹಣ ಕೂಡಾ ನಡೆಯಲಿದೆ.

ಶರಣಬಸವೇಶ್ವರ ಮಂದಿರದಿಂದ ಎನ್‌ವಿ ಮೈದಾನವರೆಗೂ ನಡೆದ ತೆರೆದ ಜೀಪಿನ ಮೆರವಣಿಗೆಯಲ್ಲಿ ವಿಜಯೇಂದ್ರ ಅವರೊಂದಿಗೆ ಸಂಸದ ಡಾ. ಉಮೇಶ ಜಾಧವ್‌, ಶಾಸಕ ಬಸವರಾಜ ಮತ್ತಿಮಡು, ಜಿಲ್ಲಧ್ಯಕ್ಷ ಶಿವರಾಜ ಪಾಟೀಲ್‌, ನಗರಾಧ್ಯಕ್ಷ ಚಂದು ಪಾಟೀಲ್‌, ಮಾಲೀಕಯ್ಯಾ ಗುತ್ತೇದಾರ್‌, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌ ಸೇರಿದಂತೆ ಅನೇಕ ಮುಖಂಡರಿದ್ದರು.

ಮೆರವಣಿಗೆಯ ದಾರಿಯುದ್ದಕ್ಕೂ ವಿಜಯೇಂದ್ರ ಜನರತ್ತ ಕೈ ಬೀಸಿ ಶುಭಾಷಯ ತಿಳಿಸಿದರು, ಅದಕ್ಕೆ ಪ್ರತಿಯಾಗಿ ಜನರೂ ಕೂಡಾ ವಿಜಯೇಂದ್ರ ಸೇರಿದಂತೆ ಜೀಪಿನಲ್ಲಿದ್ದ ಎಲ್ಲಾ ನಾಯಕರಿಗೆ ಶುಭ ಕೋರುತ್ತ ಹುರಿದುಂಬಿಸಿದ ನೋಟಗಳು ಕಂಡವು.

PREV

Latest Stories

ನಗರದಲ್ಲಿ ಶೀಘ್ರ ಟೋಯಿಂಗ್ ವ್ಯವಸ್ಥೆ ಮರು ಜಾರಿ:ಪರಂ
ದೇಶದಲ್ಲೇ ಫಸ್ಟ್‌ ಟೈಂ ಜನರ ಮನೆ ಬಾಗಿಲಿಗೆ ಪೊಲೀಸ್ : ಪರಂ
ನೀರುಗಾಲುವೆಗಳಲ್ಲಿ ಟೆಕ್‌ ಪಾರ್ಕ್‌ ನಿರ್ಮಾಣದಿಂದ ಪ್ರವಾಹ