ಹೊಸಕೋಟೆ: ಮೈಸೂರಿನ ಸುತ್ತೂರು ಮಠದಲ್ಲಿ ಜನವರಿ 26ರಿಂದ 31ರವರೆಗೆ ನಡೆಯುವ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥ ಹೊಸಕೋಟೆಗೆ ಆಗಮಿಸಿದ ವೇಳೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಅದ್ಧೂರಿಯಾಗಿ ಸ್ವಾಗತಿಸಿದರು.
ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವದ ಪ್ರಯುಕ್ತಗಿ ಜನವರಿ 26ರಿಂದ ಸಾಮೂಹಿಕ ವಿವಾಹೋತ್ಸವ, ಲಕ್ಷ ದೀಪೋತ್ಸವ, ಕೊಂಡೋತ್ಸವ, ತೆಪ್ಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಡಿಎಸ್ ರಾಜಕುಮಾರ್ ಮಾತನಾಡಿ, ಪ್ರತಿವರ್ಷ ನಡೆಯುವ ಜಾತ್ರಾ ಮಹೋತ್ಸವದ ಪ್ರಚಾರ ರಥ, ಬೆಂಗಳೂರಿನ ಮೂಲಕ ಉತ್ತರ ಕರ್ನಾಟಕದ ಭಾಗಕ್ಕೆ ಚಲಿಸುತ್ತಿತ್ತು. ಆದರೆ ಈ ಭಾರಿ ಭಕ್ತರ ಅಪೇಕ್ಷೆ ಮೇರೆಗೆ ಹೊಸಕೋಟೆಗೂ ಆಗಮಿಸಿದೆ. ಮುಂದಿನ ದಿನಗಳಲ್ಲಿ ಯಾವುದೇ ಜಾತ್ರಾ ಮಹೋತ್ಸವದ ರಥಗಳು ಬಂದ ಸಂದರ್ಭದಲ್ಲಿ ಒಗ್ಗಟ್ಟಿನಿಂದ ಸಮುದಾಯದವರು ವಿಶೇಷ ಪೂಜೆ ಸಲ್ಲಿಸಿ ಸ್ವಾಗತಿಸಿ, ಬೀಳ್ಕೊಡಬೇಕು ಎಂದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಒರೋಹಳ್ಳಿ ಮಲ್ಲಿಕಾರ್ಜುನ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಉಪಾಧ್ಯಕ್ಷ ಗುರುಬಸಪ್ಪ, ಕೋಶಾಧ್ಯಕ್ಷ ದಯಾನಂದ್, ಕಾರ್ಯದರ್ಶಿ ಕುಮಾರ್, ನಗರಸಭೆ ಉಪಾಧ್ಯಕ್ಷ ಸಿಪಿಎನ್ ನವೀನ್, ಪವನ್ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ವೀರಶೈವ ಲಿಂಗಾಯತ ಬಸವ ಸಮಿತಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಉದ್ದಿ ನಾಗರಾಜ್, ಪರಮೇಶ್, ಜಮಿನಿ ಸತೀಶ್, ಜೆಆರ್‌ಡಿ ಪ್ರಕಾಶ್, ಜೆಆರ್‌ಡಿ ಮಂಜುನಾಥ್, ಕಾರ್ತಿಕ್ ಹಾಜರಿದ್ದರು.ಫೋಟೋ : 18 ಹೆಚ್‌ಎಸ್‌ಕೆ 4
ಹೊಸಕೋಟೆಗೆ ಆಗಮಿಸಿದ ಸುತ್ತೂರು ಜಾತ್ರಾ ಮಹೋತ್ಸವದ ಪ್ರಚಾರ ರಥಕ್ಕೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಪೂಜೆ ಸಲ್ಲಿಸಿ ಅದ್ದೂರಿಯಾಗಿ ಸ್ವಾಗತಿಸಿದರು.