ಅಂಶಿ ಪ್ರಸನ್ನಕುಮಾರ್‌ಕನ್ನಡಪ್ರಭ ವಾರ್ತೆ ಮೈಸೂರುಸರ್ಕಾರಿ ಸೇವೆಯಲ್ಲಿದ್ದುಕೊಂಡು ನಿವೃತ್ತಿಯ ನಂತರ ಪೂರ್ವಿಕರ ಕಾಲದ ಕೃಷಿಯನ್ನು ಮುಂದುವರೆಸಿರುವ ಚನ್ನಕೇಶವೇಗೌಡರಿಗೆ ಈಗ 77 ವರ್ಷ. ಆದರೂ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗಿಲ್ಲ. ಅರಣ್ಯಾಧಾರಿತ ಕೃಷಿಗೆ ಒತ್ತು ನೀಡಿ, ತೆಂಗು ಹಾಗೂ ಅಡಿಕೆ ಬೆಳೆಯಿಂದ ವಾರ್ಷಿಕ 10 ಲಕ್ಷ ರು. ಗಳಿಸುತ್ತಿದ್ದಾರೆ.ಇವರಿಗೆ ಐದು ಎಕರೆ ಜಮೀನಿದೆ. ನಾಲ್ಕು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ತೆಂಗು-80, ಅಡಿಕೆ- 4000, ಏಲಕ್ಕಿ- 100, ಮೆಣಸು- 300, ಶ್ರೀಗಂಧ- 300, ಸಿಲ್ವರ್- 400, ತೇಗ-130, ಹಲಸು- 4, ಬೆಣ್ಣೆ ಹಣ್ಣು-5, ನೇರಳೆ- 3, ಗಜನಿಂಬೆ-5, ಬಾಳೆ- 1500. ಅಂಜೂರ-2, ಸಪೋಟ-2, ಎಗ್ ಫ್ರೂಟ್-2, ಕಿತ್ತಳೆ-2 ಗಿಡಗಳಿವೆ.ಎರೆಹುಳು ಗೊಬ್ಬರದ ಗುಂಡಿಗಳನ್ನು ಮಾಡಿ, ಎರೆಗೊಬ್ಬರ ತಯಾರಿಸಿ, ಕೃಷಿಗೆ ಬಳಸುತ್ತಿದ್ದಾರೆ. ರಾಸಾಯನಿಕ ಗೊಬ್ಬರವನ್ನು ಯಾವುದೇ ಕಾರಣಕ್ಕೂ ಬಳಕೆ ಮಾಡುವುದಿಲ್ಲ. ಬದಲಿಗೆ ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ ನೀಡುತ್ತಾರೆ. ಹತ್ತು ಜೀವಾಮೃತ ತೊಟ್ಟಿಗಳಿವೆ. ಬೆಳೆದ ಹಣ್ಣುಗಳನ್ನು ನೇರವಾಗಿ ಮಾರುಕಟ್ಟೆಗೆ ರವಾನಿಸುತ್ತಾರೆ. ಅಡಿಕೆಯನ್ನು ಜಮೀನಿಗೆ ಬಂದು ನೇರವಾಗಿ ಖರೀದಿಸುತ್ತಾರೆ. ಅಡಿಕೆಯಿಂದ ಆರೇಳು ಲಕ್ಷ ರು. ಆದಾಯವಿದೆ. ಈ ಬಾರಿ ಇಳುವರಿ ಹಾಗೂ ದರ ಚೆನ್ನಾಗಿರುವುದರಿಂದ ಇನ್ನೂ ಹೆಚ್ಚಿನ ಆದಾಯ ಬರಬಹುದು ಎಂಬ ನಿರೀಕ್ಷೆ ಇದೆ. ತೆಂಗಿನ ಕಾಯಿ ಮಾರಾಟದಿಂದ ಸುಮಾರು 2.50 ರಿಂದ 3 ಲಕ್ಷ ರು,ವರೆಗೆ ಬರುತ್ತದೆ.ಇವರ ಬಳಿ ನಾಟಿ ಹಸು-3, ಸೀಮೆ ಹಸು-1 ಇದೆ. ಹಾಲನ್ನು ಡೇರಿಗೆ ಹಾಕುವುದಿಲ್ಲ. ಬದಲಿಗೆ ಮನೆ ಬಳಕೆಗೆ ಸೀಮಿತ ಮಾಡಿಕೊಂಡಿದ್ದಾರೆ.ಅರಣ್ಯ ಕೃಷಿಯ ಸಾಧನೆಗಾಗಿ ಚನ್ನಕೇಶವೇಗೌಡ ಅವರನ್ನು 2024ರ ರೈತ ದಸರಾದಲ್ಲಿ ಸನ್ಮಾನಿಸಲಾಗಿದೆ.ಸಂಪರ್ಕ ವಿಳಾಸಃ ಚನ್ನಕೇಶವೇಗೌಡ ಬಿನ್ ತಮ್ಮೇಗೌಡಮಾದಾಪುರಹುಲ್ಲಹಳ್ಳಿ ಹೋಬಳಿನಂಜನಗೂಡು ತಾಲೂಕುಮೈಸೂರು ಜಿಲ್ಲೆಮೊ.98803 90876-- ಕೋಟ್‌ರೈತರಿಗೆ ಕೃಷಿ ಹೊರತುಪಡಿಸಿ ಬೇರೆ ಕೆಲಸಗಳು ಹಿಡಿಸುವುದಿಲ್ಲ. ವ್ಯಾಪಾರದಲ್ಲಿ ಏರಿಳಿತಗಳಿರುತ್ತವೆ. ಆದರೆ ಕೃಷಿಯಲ್ಲಿ ಮಾರುಕಟ್ಟೆಯಲ್ಲಿ ದರ ಕುಸಿದರೂ ಭೂಮಿ ಉಳಿಯುತ್ತದೆ. ಆ ಮೂಲಕ ನಾವು ಉಳಿಯುತ್ತೇವೆ.- ಚನ್ನಕೇಶವೇಗೌಡ, ಮಾದಾಪುರ----