ಸಂದನ ಪಾಳ್ಯದಲ್ಲಿ ಬೋನಿಗೆ ಬಿದ್ದ ಚಿರತೆ

KannadaprabhaNewsNetwork |  
Published : Mar 17, 2024, 01:46 AM IST
ಚಿತ್ರ 3  ಸುದ್ದಿ 2  ಹನೂರು ತಾಲೂಕಿನ ಸಂದನ ಪಾಳ್ಯದಲ್ಲಿ ಸೆರೆಯಾಗಿರುವ ಚಿರತೆಯನ್ನು ಅರಣ್ಯಾಧಿಕಾರಿಗಳು ಬೇರಡೆ ಸಾಗಿಸಲು ವಾಹನದಲ್ಲಿ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ರೈತ ಸಂಘಟನೆಗೆ ಮಾಹಿತಿ ನೀಡಿದರು   | Kannada Prabha

ಸಾರಾಂಶ

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಪಾಸ್ಕಾಲ್‌ ನಗರದ ಸುತ್ತಮುತ್ತಲಿನಲ್ಲಿ ಚಿರತೆ ಕಳೆದ ತಿಂಗಳು ನಾಲ್ಕು ಕುರಿಗಳನ್ನು ತಿಂದು ಈ ಭಾಗದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂದನಪಾಳ್ಯದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತ ಹನೂರು ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಪಾಸ್ಕಾಲ್‌ ನಗರದ ಸುತ್ತಮುತ್ತಲಿನಲ್ಲಿ ಚಿರತೆ ಕಳೆದ ತಿಂಗಳು ನಾಲ್ಕು ಕುರಿಗಳನ್ನು ತಿಂದು ಈ ಭಾಗದಲ್ಲಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಂದನಪಾಳ್ಯದಲ್ಲಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಸೆರೆ:

ಕಳೆದ ಒಂದು ತಿಂಗಳಿನಿಂದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಡುವ ಮೂಲಕ, ಕಾರ್ಯಾಚರಣೆಯ ಮೂಲಕ ತಂಡ ರಚನೆ ಮಾಡಿ ಅಧಿಕಾರಿಗಳು ಮತ್ತು ಸಿಬ್ಬಂದಿ ರಾತ್ರಿ-ಹಗಲು ಎನ್ನದೆ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯಲು ಕೊನೆಗೂ ಶುಕ್ರವಾರ ರಾತ್ರಿ ಸಂದನ ಪಾಳ್ಯದಲ್ಲಿ ಯಶಸ್ವಿಯಾಗಿದ್ದಾರೆ ಗ್ರಾಮಸ್ಥರ ಒತ್ತಾಯ:

ಬನ್ನೇರುಘಟ್ಟ ಅರಣ್ಯ ಪ್ರದೇಶ ಅಥವಾ ಮೈಸೂರು ಮೃಗಾಲಯಕ್ಕೆ ಚಿರತೆಯನ್ನು ಬಿಡಬೇಕೆಂದು ಗ್ರಾಮಸ್ಥರು ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇದನ್ನು ಹಿಡಿದು ಮತ್ತೊಂದೆಡೆ ಬಿಟ್ಟರೆ ಅರಣ್ಯದಂಚಿನ ಗ್ರಾಮದ ರೈತರಿಗೆ ಮತ್ತೆ ತೊಂದರೆ ನೀಡುತ್ತದೆ ಎಂದು ಅಧಿಕಾರಿಗಳನ್ನು ರೈತ ಸಂಘಟನೆ ಒತ್ತಾಯಿಸಿದ್ದಾರೆ. ಮಾಹಿತಿ ನೀಡಿದ ಅಧಿಕಾರಿ:

ಸೆರೆಯಾಗಿರುವ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು ಹತ್ತಿರದಲ್ಲಿ ಬಿಟ್ಟರೆ ಮತ್ತೆ ಇಲ್ಲಿಗೆ ಬರುತ್ತದೆ ಆದುದರಿಂದ ಎಲ್ಲಿ ಬಿಡುತ್ತೇವೆ ಎಂಬುದನ್ನು ಹೇಳಲು ಬರುವುದಿಲ್ಲ ಹೀಗಾಗಿ ಇದನ್ನು ಬನ್ನೇರುಘಟ್ಟ ಅಥವಾ ಮೃಗಾಲಯಕ್ಕೆ ಬಿಡಲು ಇಲಾಖೆ ಒಪ್ಪುವುದಿಲ್ಲ ಮನುಷ್ಯರಿಗೆ ತೊಂದರೆ ನೀಡಿ ಅಂತಹ ಸಂದರ್ಭದಲ್ಲಿ ಮೃಗಾಲಯಕ್ಕೆ ಬಿಡಲು ಕಾನೂನಿನಲ್ಲಿ ಅವಕಾಶವಿದೆ ಹೀಗಾಗಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ಬಿಡಲಾಗುವುದು ಎಂದು ಗ್ರಾಮಸ್ಥರಿಗೆ, ರೈತ ಸಂಘಟನೆಗೆ ಮಾಹಿತಿ ನೀಡಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ