ಕನ್ನಡಪ್ರಭ ವಾರ್ತೆ ಅಫಜಲ್ಪುರ/ಕರಜಗಿ
ಭಾರ ಎಳೆಯುವ ಎತ್ತುಗಳ ಸ್ಪರ್ಧೆ, ಥೇರ ಬಂಡಿ ಸ್ಪರ್ಧೆ ಜನರ ಮನಸೆಳೆಯಿತು. ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಹತ್ತು ಕ್ವಿಂಟಲ್ ಮರಳು ತುಂಬಿದ ಚೀಲಗಳನ್ನು ಒಂದೇ ಎತ್ತು ಎಳೆಯುವ ದೃಶ್ಯ ಕಂಡ ರೈತರು, ಹರ್ಷದ ಮಹಾ ಹೊಳೆಯನ್ನೆ ಹರಿಸಿದರು,ಮೊದಲನೆಯ ದಿನ ಹತ್ತು ಕ್ವಿಂಟಲ್ ಭಾರ ಎಳೆಯುವ ಸ್ಪರ್ಧೆಯಲ್ಲಿ ಒಟ್ಟು 7 ಜೋಡಿ ಎತ್ತುಗಳು ಭಾಗವಹಿಸಿದ್ದವು. ಸಿದ್ದಪ್ಪ ನಾಯಕೋಡಿ ಎತ್ತು ಮೂರು ನಿಮಿಷದಲ್ಲಿ 176 ಫೂಟ್ ದೂರ ಹತ್ತು ಕ್ವಿಂಟಲ್ ಭಾರ ಎಳೆದು ಪ್ರಥಮ ಸ್ಥಾನ ಪಡೆಯಿತು.
ಭೋಜಲಿಂಗೇಶ್ವರ ಕುಡಗನೂರ ಎತ್ತು ಮೂರು ನಿಮಿಷದಲ್ಲಿ 76 ಫೂಟ್ ದೂರ ಹತ್ತು ಕ್ವಿಂಟಲ್ ಭಾರ ಎಳೆಯುವ ಮೂಲಕ ದ್ವಿತೀಯ ಸ್ಥಾನ ಪಡೆಯಿತು. ಎರಡನೇ ದಿನ ನಡೆದ ಥೇರ ಬಂಡಿ ಸ್ಪರ್ಧೆಯಲ್ಲಿ ಎತ್ತಿನ ಗಾಡಿಯ ಎರಡು ಚಕ್ರಗಳ ಮಧ್ಯದಲ್ಲಿ ಅಡ್ಡಲಾಗಿ ಕಟ್ಟಿಗೆ ಕಟ್ಟಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆಯಲ್ಲಿ ಚಂದ್ರಶೇಖರ ಹೊಸೂರಕರ ಅವರ ಎತ್ತುಗಳು ಮೂರು ನಿಮಿಷದಲ್ಲಿ 575 ಫೂಟ್ ದೂರ ಕ್ರಮಿಸಿ ಪ್ರಥಮ ಸ್ಥಾನ ಪಡೆದವು. ದೇವಪ್ಪ ಲಾಳಸಂಗಿ ಎತ್ತುಗಳು ಮೂರು ನಿಮಿಷದಲ್ಲಿ 535 ಫೂಟ್ ದೂರ ಕ್ರಮಿಸಿ ದ್ವಿತೀಯ ಸ್ಥಾನ ಪಡೆದವು. ಸಚಿನ ನಾಯಕೋಡಿ ಎತ್ತುಗಳು ಮೂರು ನಿಮಿಷದಲ್ಲಿ 365 ಫೂಟ್ ದೂರ ಕ್ರಮಿಸಿ ತೃತೀಯ ಸ್ಥಾನ ಪಡೆದವು.ವೇದಮೂರ್ತಿ ಹಾಲಯ್ಯ ಹಿರೇಮಠ, ಗ್ರಾ.ಪಂ ಮಾಜಿ ಅಧ್ಯಕ್ಷ ರಮೇಶ ಬಾಕೆ, ಗ್ರಾ ಪಂ ಅಧ್ಯಕ್ಷ ಬಿ ರಾಜು ಎಸ್ ಬೆನಕನಹಳ್ಳಿ, ಉಪಾಧ್ಯಕ್ಷೆ ರಾಜೇಶ್ವರಿ ಭತಗುಣಕಿ, ರೈತ ಸಂಘದ ಅಧ್ಯಕ್ಷ ಶಿವಾನಂದ ಪೂಜಾರಿ, ರಾಚಪ್ಪ ಕೊಪ್ಪಾ, ಬಸಣ್ಣ ಜಕಾಪೂರ, ಸಿದ್ದು ಮಾರಾಯ ಹಿರೇಕುರುಬರ, ಸಿದ್ರಾಮ ಚಿಕ್ಕಮಣೂರ, ಚಂದು ಹಿರೇಕುರುಬರ, ಉಮೇಶ ಭಾಸಗಿ, ಪೀರಪ್ಪ ಕರೂಟಿ, ಶ್ರೀಶೈಲ ಕರೂಟಿ, ಯಲ್ಲಪ್ಪ ನಾಯಕೋಡಿ, ವಿಠ್ಠಲ ಅಲ್ಲಾಪೂರ, ಮಲಕಣ್ಣ ಹೊಸೂರಕರ, ಹಣಮಂತ ನಾವಾಡಿ, ಶರಣಪ್ಪ ಸುತಾರ, ಶಿವಪ್ಪ ಕರೂಟಿ, ದೇವಪ್ಪ ಲಾಳಸಂಗಿ, ವೇಣುಮಾಧವ ಅವಧಾನಿ, ರಮೇಶ ಭುರಲಿ, ಸಂಜೀವ ನನ್ನಾಜಿ, ಗಂಗಾಧರ ಸಂಖ, ಮಹೇಶ ಕರೂಟಿ, ಸಚಿನ ಕೊಪ್ಪಾ, ಶರಣಗೌಡ ಕರೂಟಿ ಇದ್ದರು.