ವಿನಾಕಾರಣ ರೈತರ ಒಕ್ಕ ಲೆಬ್ಬಿಸುತ್ತಿರುವ ವಿರುದ್ಧ ಬೃಹತ್ ಪ್ರತಿಭಟನೆ

KannadaprabhaNewsNetwork | Published : Aug 22, 2024 12:56 AM

ಸಾರಾಂಶ

ತರೀಕೆರೆ, ತಾಲೂಕಿನಾದ್ಯಂತ ರೈತರನ್ನು ವಿನಾಕಾರಣ ಒಕ್ಕಲೆಬ್ಬಿಸುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದ ರೈತರ ಹಿತ ರಕ್ಷಣಾ ಸಮಿತಿ ಲಕ್ಕವಳ್ಳಿ ಹಾಗೂ ತರೀಕೆರೆ ತಾಲೂಕು ಸಮಸ್ತ ರೈತರಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.

ಲಕ್ಕವಳ್ಳಿ ರೈತರ ಹಿತ ರಕ್ಷಣಾ ಸಮಿತಿ, ತರೀಕೆರೆ ತಾಲೂಕು ಸಮಸ್ತ ರೈತರಿಂದ ಧರಣಿ

ಕನ್ನಡಪ್ರಭ ವಾರ್ತೆ, ತರೀಕೆರೆ

ತಾಲೂಕಿನಾದ್ಯಂತ ರೈತರನ್ನು ವಿನಾಕಾರಣ ಒಕ್ಕಲೆಬ್ಬಿಸುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದ ರೈತರ ಹಿತ ರಕ್ಷಣಾ ಸಮಿತಿ ಲಕ್ಕವಳ್ಳಿ ಹಾಗೂ ತರೀಕೆರೆ ತಾಲೂಕು ಸಮಸ್ತ ರೈತರಿಂದ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ರೈತರ ಹೋರಾಟದ ಜೊತೆಯಲ್ಲಿ ನಾವು ಇರುತ್ತೇವೆ. 50-60 ವರ್ಷಗಳಿಂದ ನಾವು ಸಾಗುವಳಿ ಮಾಡುತ್ತಿದ್ದೇವೆ. ರೈತ ಬೆಳೆ ಬೆಳೆದರೆ ದೇಶಕ್ಕೆ ಅನ್ನ, ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ರೈತರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ಪ್ರತಿಭಟನೆ ಪಕ್ಷಾತೀತವಾಗಿ ಎಲ್ಲ ಪಕ್ಷಗಳು ರೈತರ ಹೋರಾಟಕ್ಕೆ ಬೆಂಬಲ ನೀಡಿವೆ. ನಮ್ಮ ಭೂಮಿ ನಮ್ಮ ಹಕ್ಕು ಅದಕ್ಕಾಗಿ ಉಗ್ರ ಹೋರಾಟ ಮಾಡೋಣ ಎಂದ ಅವರು ರೈತರಿಗೆ ನೋಟಿಸ್ ನೀಡಿದ್ದು. ಅವರ ಹೊಟ್ಟೆ ಮೇಲೆ ಹೊಡೆಯಬಾರದು ಅರಣ್ಯಾಧಿಕಾರಿಗಳು ರೈತರಿಗೆ ಒಕ್ಕಲೆಬ್ಬಿಸುವುದಿಲ್ಲ ಎಂದು ಬರವಣಿಗೆ ಮೂಲಕ ಕೊಡಬೇಕು ಎಂದು ಒತ್ತಾಯಿಸಿದರು. ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ ಕರೆಂಟು, ನೀರು ಇಲ್ಲ. ರೈತರ ಮೇಲೇಕೆ ಕಣ್ಣು, ಒಕ್ಕಲೆಬ್ಬಿಸುವುದನ್ನು ತಡೆಗಟ್ಟ ಬೇಕು. 40-50 ವರ್ಷಗಳಿಂದ ಸಾಗುವಳಿ ಮಾಡಲಾಗುತ್ತಿದೆ. ಏಕೆ ಈ ಅನ್ಯಾಯ ಜರೂರಾಗಿ ರೈತರ ಕಡೆ ಗಮನ ಕೊಡಬೇಕು. ಇಲ್ಲದಿದ್ದರೆ ಜನಾಂದೋಲನ ಆಗುತ್ತದೆ. ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ, ಸಚಿವರಾದ ಈಶ್ವರ ಖಂಡ್ರೆ, ಕೆ.ಜಿ.ಜಾರ್ಜ್ ಬಳಿ ಮಾತನಾಡುತ್ತೇನೆ. 40-50 ವರ್ಷಗಳಿಂದ ಪಹಣಿ ಇದೆ. ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದರು.

ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್ ಮಾತನಾಡಿ 60-70 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇವೆ, ತುಂಗಾ ತಿರುವು ಯೋಜನೆ ಈವರೆಗೂ ಆಗಲಿಲ್ಲ, ಮಲತಾಯಿ ಧೋರಣೆ ಮಾಡುತ್ತಿದ್ದೀರಿ. ನಾವು ಅಸ್ತಿ ಬಿಡುವುದಿಲ್ಲ ಎಂದು ಹೇಳಿದರು.ರೈತ ಹೋರಾಟ ಸಮಿತಿ ಸಂಚಾಲಕ ರಂಗೇನಹಳ್ಳಿ ಸಿರಾಹ್ ಅಹಮದ್ ಮಾತನಾಡಿ ಈ ವಿಚಾರದಲ್ಲಿ 15 ಜನ ಸಮಿತಿ ಸದಸ್ಯರಿದ್ದಾರೆ. ಇವರ ಮೂಲಕವೇ ಹೋಗಬೇಕು, 60 ವರ್ಷದಿಂದ ಸಾಗುವಳಿ ಮಾಡುತ್ತಿದ್ದೇವೆ. ಭದ್ರಾ ಮುಳುಗಡೆ ಪ್ರದೇಶದ ರೈತರಾಗಿದ್ದು ನಮ್ಮನ್ನು ಸರ್ಕಾರ ಪುನರ್ವಸತಿ ಕಲ್ಪಿಸಿ ಲಕ್ಕವಳ್ಳಿ ಹೋಬಳಿ ಹಲವಾರು ಸ.ನಂ.ಗಳಲ್ಲಿ ಜಮೀನು ಮಂಜೂರು ಮಾಡಿದ್ದು ಈಗಾಗಲೇ ನಾವು ಅಡಕೆ, ಬಾಳೆ, ತೆಂಗು ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಅರಣ್ಯ ಇಲಾಖೆ ಎಲ್ಲಾ ಸ.ನಂ.ನ ಜಮೀನುಗಳನ್ನು ತಮ್ಮ ಇಲಾಖೆಗೆ ಸೇರಿದ್ದೆಂದು ನೋಟಿಸ್‌ ನೀಡುತ್ತಿರು ವುದು. ರೈತರ ಒಕ್ಕಲೆಬ್ಬಿಸುವ ಬೆದರಿಕೆ ಹಾಕುವುದು ಸರಿಯಲ್ಲ. ಇದನ್ನು ಖಂಡಿಸಲು ಸಾವಿರಾರು ರೈತರು ಪ್ರತಿಭಟಿಸುತ್ತಿದ್ದಾರೆ. ಸರ್ಕಾರಕ್ಕೆ ಉಪ ವಿಬಾಗಾಧಿಕಾರಿ ಹಾಗೂ ಅರಣ್ಯ ಸಂರಕ್ಷಣಾದಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು.ತರೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ ಯಾರೂ ಆತಂಕ ಪಡಬೇಡಿ, ಶಾಸಕ ಜೆ.ಎಚ್.ಶ್ರೀನಿವಾಸ್, ಕಾಡಾ ಅಧ್ಯಕ್ಷ ಡಾ.ಅಂಶುಮಂತ್ ಈ ಬಗ್ಗೆ ಡಿಎಫ್ಒ.ಮತ್ತು ಎಸಿಎಫ್ ಬಳಿ ಮಾತನಾಡುತ್ತಾರೆ. ಒಂದಿಂಚೂ ನಾವು ಕೊಡುವುದಿಲ್ಲ ಎಂದು ಹೇಳಿದರು.

ರೈತ ಮುಖಂಡರಾದ ಮಹೇಶ್, ಎಂ.ಸಿ.ಹಳ್ಳಿ ಗಂಗಾದರ್, ಬಾವಿಕೆರೆ ಗ್ರಾಪಂ ಸದಸ್ಯರು ವೆಂಕಟೇಶ್, ಮುಖಂಡರಾದ ಧನಪಾಲ್, ವಿಜಯ ಕುಮಾರ್, ನಂದಕುಮಾರ್, ಎಚ್.ಎನ್.ಮಂಜುನಾಥ್ ಲಾಡ್, ರಂಗೇನಹಳ್ಳಿ ವಿನಾಯಕ್ , ಎಲ್.ಎಸ್.ಶಿವಯೋಗಿ, ಬಾವಿಕೆರೆ ಮೂಡ್ಲಿಗಿರಿ ಯಪ್ಪ ಗುರುಪುರ ಭಾಲಕೃಷ್ಣ, ಜಯಸ್ವಾಮಿ, ನಂಜುಂಡಪ್ಪ, ಬಾವಿಕೆರೆ ಮಾಜಿ ಅಧ್ಯಕ್ಷ ಬಾಬು, ಮಲ್ಲಿಗೇನಹಳ್ಳಿ, ಲಿಂಗದಹಳ್ಳಿ, ದುಗ್ಲಾವುರ ಸಿದ್ದರಹಳ್ಳಿ ಭಾವಿಕರೆ, ಶಾಂತಿಪುರ, ವೆಂಕಟಾಪುರ, ಗುರುಪುರ, ಕುಂದೂರು ಮತ್ತು ಲಕ್ಕವಳ್ಳಿ ಸುತ್ತಮುತ್ತಲ ಗ್ರಾಮಗಳ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

21ಕೆಟಿಆರ್.ಕೆ.1ಃ

ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ರೈತರ ಹಿತ ರಕ್ಷಣಾ ಸಮಿತಿ ಲಕ್ಕವಳ್ಳಿ ಹಾಗೂ ಸಮಸ್ತ ರೈತರು ತರೀಕೆರೆ ತಾಲೂಕು ವತಿಯಿಂದ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿದರು.

Share this article