ಅಂಬಾರಿಯಲ್ಲಿ ದುರ್ಗಾಪರಮೇಶ್ವರಿ ಮೆರವಣಿಗೆ, ಸಹಸ್ರಾರು ಭಕ್ತರಿಂದ ವಿಕ್ಷಣೆ
ಕನ್ನಡಪ್ರಭ ವಾರ್ತೆ ಗಂಗಾವತಿ
ಕಳೆದ 40 ವರ್ಷಗಳಿಂದ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ನೇತೃತ್ವದಲ್ಲಿ ದಸರಾ ಮಹೋತ್ಸವ ಜರುಗುತ್ತಿದ್ದು, ಮೈಸೂರು ಮಾದರಿಯಲ್ಲಿ ಅಂಬಾರಿ ಮೆರವಣಿಗೆ ಜರುಗಿತು.
ಹೇಮಗುಡ್ಡದ ದುರ್ಗಾಪರಮೇಶ್ವರಿ ದೇಗುಲದಿಂದ ಅಂಬಾರಿ ಮೆರವಣಿಗೆ ಪ್ರಾರಂಭಗೊಂಡಿತು. ಮಾಜಿ ಸಂಸದ ಎಚ್.ಜಿ. ರಾಮುಲು ದಂಪತಿ ಪುಷ್ಪಗುಚ್ಚ ಹಾಕುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಭಜನೆ, ಡೊಳ್ಳು ಕುಣಿತ ಗಮನ ಸೆಳೆದವು. ಮೆರವಣಿಗೆಯಲ್ಲಿ ಸಂಸದ ರಾಜಶೇಖರ್ ಹಿಟ್ನಾಳ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡರಾದ ಶೇಖರಗೌಡ ಗೌಡರ್, ರೆಡ್ಡಿ ಶ್ರೀನಿವಾಸ, ಜೋಗದ ಹನುಮಂತಪ್ಪನಾಯಕ ಸೇರಿದಂತೆ ಇತರರು ಭಾಗವಹಿಸಿದ್ದರು. ಜಂಬೂಸವಾರಿ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳು ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಸಹಸ್ರಾರು ಜನರು ಆಗಮಿಸಿ ವೀಕ್ಷಿಸಿದರು.
ದಸರಾ ಉತ್ಸವದ ಅಂಗವಾಗಿ ಹೇಮಗುಡ್ಡದಲ್ಲಿ 40 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು. ವಧು-ವರರಿಗೆ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾಂಗಲ್ಯ, ವಸ್ತ್ರ ನೀಡಿ ಶುಭಕೋರಿದರು. ಬಂದಂತಹ ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಕೈಗೊಂಡಿದ್ದರು. ಆನೆಗೊಂದಿಯಲ್ಲೂ ಜಂಬೂ ಸವಾರಿ:
ಜಂಬು ಸವಾರಿಗೆ ರಾಜವಂಶಸ್ಥರಾದ ಲಲಿತರಾಣಿ ಶ್ರೀರಂಗದೇವರಾಯಲು, ಕೃಷ್ಣದೇವರಾಯಲು ಚಾಲನೆ ನೀಡಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಪ್ರಮುಖರಾದ ಎಚ್.ಎಂ. ಸಿದ್ದರಾಮಸ್ವಾಮಿ, ರಾಜಣ್ಣ, ರಾಘವೇಂದ್ರ ಶ್ರೇಷ್ಠಿ, ವಿಷ್ಣುತೀರ್ಥ ಜೋಶಿ, ಎಚ್.ಎಂ. ವಿರುಪಾಕ್ಷಯ್ಯಸ್ವಾಮಿ ಸೇರಿದಂತೆ ಪ್ರಮುಖರು ಇದ್ದರು.