- ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮ ಭಾರತ ಎಂಬುದು ನಾವು ಹೆಮ್ಮೆಪಡಬೇಕಾದ ವಿಷಯವಾಗಿದೆ ಎಂದು ಪೊಲಿಸ್ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ಹೇಳಿದರು.ಶುಕ್ರವಾರ ಮತದಾರರ ದಿನ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು. ದೇಶದಲ್ಲಿ ಸೂಕ್ತವಾದ ಸರ್ಕಾರಗಳು ಅಸ್ತಿತ್ವಕ್ಕೆ ಬರಬೇಕಾದರೆ ನಾವು ಪ್ರಜಾಪ್ರಭುತ್ವದ ಹಬ್ಬಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಸಂವಿಧಾನ ನಮಗೆ ಕೊಟ್ಟಿರುವ ಹಕ್ಕನ್ನು ಚಲಾಯಿಸಿ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿರ್ಧಾರ ಚುನಾವಣೆಯಲ್ಲಿ ಮಾಡಬೇಕು ಎಂದರು.
ಅಭ್ಯರ್ಥಿಗಳು ಪ್ರಾಮಾಣಿಕವಾಗಿದ್ದರೆ ಆತ ಎಂದೂ ಸ್ವಜನಪಕ್ಷಪಾತ ಅಥವಾ ಭ್ರಷ್ಟಾಚಾರ ಮಾಡಲಾರ. ಅಂತಹ ಕ್ಷೇತ್ರದಲ್ಲಿ ಅಭಿವೃದ್ಧಿಗಳು ಆಗುತ್ತವೆ. ಅದಕ್ಕೂ ಮೊದಲು ಮತದಾರರು ಪ್ರಾಮಾಣಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರೀಕರ ಸಮಸ್ಯೆಗಳನ್ನು ನಿವಾರಿಸುವ ಸೂಕ್ತ ನಾಯಕನನ್ನು ಮತದಾನ ಮೂಲಕ ಆಯ್ಕೆ ಮಾಡಬೇಕು. ಅದರಲ್ಲೂ ಯುವಕರು ಜಾತಿ ಅಥವಾ ಜನಾಂಗಕ್ಕೆ ಜೋತು ಬೀಳದೇ ಒಬ್ಬ ಪ್ರಾಮಾಣಿಕ ಹಾಗೂ ನಿಷ್ಠುರ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಮಾತ್ರ ನಮ್ಮ ದೇಶ, ರಾಜ್ಯ, ತಾಲೂಕು ಹಾಗೂ ನಮ್ಮ ಗ್ರಾಮ ಅಭಿವೃದ್ಧಿಯಾಗುತ್ತದೆ. ಇಲ್ಲದಿದ್ದರೆ ಸ್ವಜನ ಪಕ್ಷಪಾತ ತಾಂಡವಾಡುತ್ತದೆ, ಇದಕ್ಕೆ ಮತದಾರರು ಅವಕಾಶ ನೀಡಬಾರದು ಎಂದರು.
ಕಡ್ಡಾಯ ಮತದಾನ ಅತ್ಯಗತ್ಯ:ಇತ್ತೀಚಿಗೆ ನಗರ ಪ್ರದೇಶಗಳಲ್ಲಿ ಶೇಕಡವಾರು ಮತದಾನ ಕುಸಿಯುತ್ತಿದೆ. ಇದು ಆತಂಕದ ವಿಚಾರ. ಪ್ರತಿಯೊಬ್ಬರು ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಿದರೆ ಮಾತ್ರ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡಲಿಕ್ಕೆ ಸಾಧ್ಯ. ಆದ್ದರಿಂದ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದರು.
ಜಾತಿ, ಜನಾಂಗ, ಮತ, ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೇ ಮತ ಚಲಾಯಿಸುತ್ತೇವೆಂದು ಪೊಲಿಸ್ ಸಿಬ್ಬಂದಿಗೆ ಪಿಐ ಸುನೀಲ್‌ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು.ಪಿಎಸ್‌ಐಗಳಾದ ಸೈಫುದ್ಧೀನ್, ನಿರ್ಮಲ, ಎಎಸ್‌ಐ ಹರೀಶ್ ಹಾಗೂ ಇತರರು ಇದ್ದರು.
- - - -26ಎಚ್.ಎಲ್.ಐ2.ಜೆಪಿಜಿ:ಮತದಾರರ ದಿನ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗೆ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್‌ಕುಮಾರ್ ಪ್ರತಿಜ್ಞಾವಿಧಿ ಬೋಧಿಸಿದರು. ಪಿಎಸ್‌ಐಗಳಾದ ಸೈಫುದ್ಧೀನ್, ನಿರ್ಮಲ ಎಎಸ್‌ಐ ಹರೀಶ್ಇ ತರರು ಇದ್ದರು.