ಮುರುಘಾಮಠದ ಹಿನ್ನೆಲೆ ತಿಳಿಸುವ ತಾರಾವಳಿ ಕೃತಿ: ಲಕ್ಷ್ಮಣ್‌ ತೆಲಗಾವಿ

KannadaprabhaNewsNetwork |  
Published : Sep 27, 2025, 01:00 AM IST
ಪೋಟೋ, 26ಎಚ್‌ಎಸ್‌ಡಿ2: ನಗರದ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಶ್ರೀ ಮುರಿಗೆ ಶಾಂತವೀರ ಮಹಾಸ್ವಾಮಿಗಳ ಕೃತಿಗಳ ಕುರಿತು ವಿಚಾರ ಸಂಕಿರಣದಲ್ಲಿ ಮುರಿಗಿ ತಾರಾವಳಿ ಕುರಿತುಧಾರವಾಡದ ಇತಿಹಾಸ ತಜ್ಞ ಲಕ್ಷ್ಮಣ್‌ ತೆಲಗಾವಿ ಮಾತನಾಡಿದರು. | Kannada Prabha

ಸಾರಾಂಶ

ತಾರಾವಳಿ ಕೃತಿಯು ಚಾರಿತ್ರಿಕ ಸಾಂಸ್ಕೃತಿಕ ಐತಿಹಾಸಿಕ ಅಂಶಗಳನ್ನು ಒಳಗೊಂಡ ಅಮೂಲ್ಯ ಕೃತಿಯಾಗಿದ್ದು ಚಿತ್ರದುರ್ಗದ ಮುರುಘಾಮಠ ಮತ್ತು ಪಾಳೆಗಾರರ ಸಂಸ್ಥಾನಗಳ ಮೇಲೆ ವಿಶೇಷವಾದ ಬೆಳಕು ಚೆಲ್ಲುತ್ತದೆ ಎಂದು ಐತಿಹಾಸಿಕ ಅಂಶಗಳನ್ನು ಧಾರವಾಡದ ಇತಿಹಾಸ ತಜ್ಞ ಲಕ್ಷ್ಮಣ್‌ ತೆಲಗಾವಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ತಾರಾವಳಿ ಕೃತಿಯು ಚಾರಿತ್ರಿಕ ಸಾಂಸ್ಕೃತಿಕ ಐತಿಹಾಸಿಕ ಅಂಶಗಳನ್ನು ಒಳಗೊಂಡ ಅಮೂಲ್ಯ ಕೃತಿಯಾಗಿದ್ದು ಚಿತ್ರದುರ್ಗದ ಮುರುಘಾಮಠ ಮತ್ತು ಪಾಳೆಗಾರರ ಸಂಸ್ಥಾನಗಳ ಮೇಲೆ ವಿಶೇಷವಾದ ಬೆಳಕು ಚೆಲ್ಲುತ್ತದೆ ಎಂದು ಐತಿಹಾಸಿಕ ಅಂಶಗಳನ್ನು ಧಾರವಾಡದ ಇತಿಹಾಸ ತಜ್ಞ ಲಕ್ಷ್ಮಣ್‌ ತೆಲಗಾವಿ ತಿಳಿಸಿದರು.

ನಗರದ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಮುರಿಗೆ ಶಾಂತವೀರ ಮಹಾಸ್ವಾಮಿಗಳ ಕೃತಿಗಳ ಕುರಿತು ವಿಚಾರ ಸಂಕಿರಣದಲ್ಲಿ ಮುರಿಗಿ ತಾರಾವಳಿ ಕುರಿತು ಮಾತನಾಡಿದರು.

ಸ್ತುತಿ ಪರವಾದ ವರ್ಣನೆವುಳ್ಳ ರಚನೆಗಳೇ ತಾರಾವಳಿಗಳು. ಈ ಕೃತಿಯೂ ಚಾರಿತ್ರಿಕ ವಿಷಯಗಳನ್ನು ಒಳಗೊಂಡು ಚರಿತ್ರೆಯ ರಚನೆಗೆೆ ಪೂರಕ ಸಾಮಗ್ರಿಗಳನ್ನು ಒದಗಿಸುವ ಮಹತ್ವದ ಆಕಾರ ಸಾಮಗ್ರಿಯಾಗಿ ರೂಪಗೊಂಡು ಶಾಸನ ಕಾವ್ಯ ಇನ್ನಿತರ ದಾಖಲೆಗಳಂತೆ ಚರಿತ್ರೆಗಳ ರಚನೆಗೆ ಅತ್ಯುಪಯುಕ್ತ ಎಂಬುದನ್ನು ಎತ್ತಿ ತೋರಿಸಲಾಗಿದೆ ಎಂದರು.

ಚಿತ್ರದುರ್ಗದ ಶಾಸನ ತಜ್ಞ ಡಾ.ಬಿ.ರಾಜಶೇಖರಪ್ಪ ಹಮ್ಮೀರಕಾವ್ಯ (ರಾಜೇಂದ್ರ ವಿಜಯ) ಕುರಿತು ಮಾತನಾಡಿ ಇದೊಂದು ಚಂಪೂ ಕೃತಿಯಾಗಿದ್ದು ಸ್ವತಃ ಮುರುಗಿ ಶಾಂತವೀರರೇ ರಚನಾಕಾರರಾಗಿದ್ದಾರೆ. ಈ ಕಾವ್ಯವನ್ನು ಗಮನಿಸಿದಾಗ ಪಂಪ, ಪೊನ್ನ, ರನ್ನ, ಜನ್ನ ಕಾವ್ಯದ ಓದುವನ್ನು ಮತ್ತು ಶಬ್ಧ ಸಾಮರ್ಥ್ಯವನ್ನು ಮುರುಗಿ ಶಾಂತವೀರರಲ್ಲಿ ಕಾಣುತ್ತೇವೆ. ಈ ಕೃತಿಯಲ್ಲಿ ಚಿತ್ರದುರ್ಗದ ಕೆಲವೊಂದು ಐತಿಹಾಸಿಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. ಚಾಮರಸನ ಪ್ರಭುಲಿಂಗಲೀಲೆಯ ಕಾವ್ಯಅಮ್ಮೀರಕಾವ್ಯದ ಮೇಲೆ ಸಾಕಷ್ಟು ಪ್ರಭಾವ ಬೀರಿರುವುದನ್ನು ವಿವರಿಸಿದ್ದಾರೆ ಎಂದರು.

ಶ್ರೀಮುರುಗಿ ಶಾಂತವೀರರು ಪ್ರೌಢಭಾಷಾ ಸಂಸ್ಕೃತದ ಸಾಕಷ್ಟು ಆಳವಾದ ಜ್ಞಾನವನ್ನು ತಿಳಿದಿದ್ದರು. ಇವರ ಈ ಕೃತಿಯಲ್ಲಿ ಹಲವು ಛಂದೋ ವೈವಿಧ್ಯತೆಗಳಾದ ಕಂದ, ವೃತ್ತ, ಖ್ಯಾತ ನಾಟಕಗಳು. ದೇಸಿ ಛಂದೋಮಟ್ಟಗಳು ಹಲವು ಛಂದೋ ವೈವಿಧ್ಯತೆಗಳ ತಂದಿರುವುದನ್ನು ನೋಡಬಹುದು. ಸಂಗೀತಜ್ಞಾನವನ್ನು ಮುರುಗಿ ಶಾಂತವೀರರು ಹೊಂದಿದ್ದರು ಎನ್ನುವುದಕ್ಕೆ ಈ ಕೃತಿಯಲ್ಲಿ ಬರುವ ರಾಗಗಳೇ ಸಾಕ್ಷಿ. ಅವರಲ್ಲಿದ್ದ ಪರಿಸರ ಪ್ರಜ್ಞೆ ಪ್ರಾಣಿ ಪಕ್ಷಿಗಳ ಬಗ್ಗೆ ಅಪಾರವಾದ ಪ್ರೀತಿ ಶಬ್ಧ ಚಮತ್ಕಾರವನ್ನು ಈ ತಾರಾವಳಿ ಕೃತಿಯಲ್ಲಿ ಕಾಣಬಹುದು ಎಂದರು.

ತುಮಕೂರಿನ ಹಸ್ತಪ್ರತಿ ತಜ್ಞ ಡಾ.ಬಿ.ನಂಜುಂಡಸ್ವಾಮಿ ಪ್ರಭುಲಿಂಗಕಂದ ಕುರಿತು ಮಾತನಾಡಿ, ಈ ಕೃತಿಯಲ್ಲಿ ಇಷ್ಟಲಿಂಗದ ಪೂಜೆಯನ್ನು ಅದ್ಭುತವಾಗಿ ವರ್ಣಿಸಿದ್ದಾರೆ ಹಾಗೆಯೇ ಪೂಜೆಗೆ ಬಳಸುವ ಹಲವು ಪುಷ್ಪಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಇದೊಂದು ಚಿತ್ರದುರ್ಗ ಮುರುಘಮಠದ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿ ಇತಿಹಾಸದ ಮೇಲೆ ಬೆಳಕನ್ನು ಚೆಲ್ಲುತ್ತದೆ ಎಂದರು.

ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಹೆಗ್ಗುಂದ ವನಕಲ್ಲು ಮಲ್ಲೇಶ್ವರ ಸಂಸ್ಥಾನಮಠದ ಡಾ.ಬಸವ ರಮಾನಂದ ಸ್ವಾಮೀಜಿ, ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್ ಹಾಜರಿದ್ದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ