ಕುಷ್ಟಗಿ: ನಮ್ಮ ಸಮಾಜದ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯತನ ತಾಳುತ್ತಿದ್ದು, ಸಮಾಜದ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದು ಕುಂಬಾರ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷ ಸುವರ್ಣಮ್ಮ ಕುಂಬಾರ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ ಮತ್ತು ತಾಲೂಕು ಕುಂಬಾರ ಸಮಾಜದ ವತಿಯಿಂದ ನಡೆದ ತ್ರಿಪದಿ ಕವಿ ಸರ್ವಜ್ಞನ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮ ಸಮುದಾಯವು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಕಣ್ಣು ತೆರೆಸಲು ಸಾಧ್ಯವಾಗುತ್ತದೆ,ಇಲ್ಲವಾದರೆ ನಮ್ಮನ್ನು ಹಿಂದಿಕ್ಕುವ ಕೆಲಸ ಮಾಡುತ್ತಾರೆ ನಾವು ಕುಲಕಸಬುನಿಂದ ಕುಂಬಾರರು ಆಗಿದ್ದರು ಸಹಿತ ಹಿಂದುಳಿದ ವರ್ಗ 2ಅ ಪ್ರಮಾಣ ಪತ್ರ ಪಡೆಯಲು ಆಗುತ್ತಿಲ್ಲ ಸರ್ಕಾರವು ಕುಂಬಾರ ಸಮುದಾಯಕ್ಕೆ ಪ್ರವರ್ಗ 2ಅ ಪ್ರಮಾಣ ಪತ್ರ ನೀಡಲು ಮುಂದಾಗಬೇಕು ಎಂದು ಹೇಳಿದರು.
ಎಲ್ಲರಿಗೂ ಜಾತಿಗೊಂದು ನಿಗಮ ಇದ್ದಂತೆ ನಮಗೂ ಸಹಿತ ಕುಂಬಾರ ನಿಗಮ ರಚನೆ ಮಾಡುವ ಮೂಲಕ ಅನುದಾನ ಸಹಿತ ನೀಡಬೇಕು ಅಂದಾಗ ಮಾತ್ರ ನಮ್ಮ ಸಮಾಜ ಅಭಿವೃದ್ಧಿಯಾಗುತ್ತದೆ ನಮ್ಮ ಸಮುದಾಯದ ಕಾರ್ಯಕ್ರಮ ಮಾಡಲು ಒಂದು ಸಮುದಾಯ ಭವನ ಅವಶ್ಯಕತೆ ಇದ್ದು, ತಾಲೂಕಾಡಳಿತ ಮತ್ತು ಪುರಸಭೆ ಅಧಿಕಾರಿಗಳು ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು. ಮಣ್ಣಿನಿಂದ ನಿರ್ಮಾಣ ಮಾಡಿರುವ ಸಾಮಗ್ರಿಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಕಲ್ಪಿಸಿ ಕೊಡಬೇಕು ಎಂದರು.ತಹಸೀಲ್ದಾರ ರವಿ ಅಂಗಡಿ ಮಾತನಾಡಿ, ಸರ್ವಜ್ಞ ಕುಂಬಾರ ಸಮಾಜದಲ್ಲಿ ಹುಟ್ಟಿದರು ಸಹಿತ ಇಡಿ ಸರ್ವ ಸಮಾಜದ ಏಳಿಗೆಗಾಗಿ ಸಮಾಜದ ಹಿತಕ್ಕಾಗಿ ತಮ್ಮ ಜೀವನವನ್ನೇ ಅರ್ಪಣೆ ಮಾಡಿರುವ ಮಹಾನ ದಾರ್ಶನಿಕರಾಗಿದ್ದಾರೆ. ಸರ್ವಜ್ಞನ ವಚನಗಳು ನಮ್ಮ ಮನುಕುಲಕ್ಕೆ ಒಳಿತಾಗುವಂತಹ ವಚನ ರಚನೆ ಮಾಡಿದ್ದು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ಸಾಗಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ನಾಗರಾಜ ಹೀರಾ ಹಾಗೂ ಶಿಕ್ಷಕ ಶೇಖರಪ್ಪ ಕುಂಬಾರ ಸರ್ವಜ್ಞನ ಕುರಿತು ಸಮಗ್ರ ಮಾಹಿತಿ ಉಪನ್ಯಾಸದ ಮೂಲಕ ನೀಡಿದರು.ಮನವಿ ಪತ್ರ:
ಕುಂಬಾರ ಸಮಾಜದವರು ವಿವಿಧ ಬೇಡಿಕೆ ಈಡೇರಿಸುವಂತೆ ತಹಸೀಲ್ದಾರ್ ರವಿ ಅಂಗಡಿಯವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ನಿವೃತ್ತ ತಹಸೀಲ್ದಾರ್ ಸಿ.ಎಂ.ಹಿರೇಮಠ, ಕುಂಬಾರ ಸಮಾಜದ ಅಧ್ಯಕ್ಷ ರಾಮಣ್ಣ ಕುಂಬಾರ, ಪುರಸಭೆಯ ಮಾಜಿ ಅಧ್ಯಕ್ಷ ಜಿ.ಕೆ.ಹಿರೇಮಠ, ಕುಂಬಾರ ಸಮಾಜದ ಗೌರವಾಧ್ಯಕ್ಷ ಚನ್ನಬಸಪ್ಪ ಕುಂಬಾರ, ಮಹಾಂತೇಶ ಕಲಬಾವಿ, ಎಂ. ಸರಸ್ವತಿ, ಶಶಿಧರ ಕುಂಬಾರ, ಮಾರುತಿ ಕುಂಬಾರ, ಸಂಗಮೇಶ ಕುಂಬಾರ, ಶರಣಪ್ಪ ಕುಂಬಾರ, ರೇಣುಕಾ ಕುಂಬಾರ, ಶಿಲ್ಪಾ ಕುಂಬಾರ, ರವಿಕುಮಾರ ಕುಂಬಾರ ಸೇರಿದಂತೆ ಇತರರು ಇದ್ದರು.