ಯುವತಿಯನ್ನು ಪದೇ ಪದೆ ಮಾತನಾಡಿಸಿದ ಎಂಬ ಕಾರಣಕ್ಕೆ ಇರಿದು ಕೊಲೆ

KannadaprabhaNewsNetwork |  
Published : Jan 06, 2024, 02:00 AM IST
ಕೊಲೆಯಾದ ವ್ಯಕ್ತಿ ಮನೋಜ್ ನಾಯ್ಕ  | Kannada Prabha

ಸಾರಾಂಶ

ಯುವತಿಯೊರ್ವಳನ್ನು ಪದೇ ಪದೇ ಮಾತನಾಡಿಸುತ್ತಿದ್ದ ಎಂಬ ಕಾರಣಕ್ಕೆ ಯುವತಿಯ ಮನೆಯವರು ಯುವಕನಿಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ ಘಟನೆ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಾಯ್ಕನಕಟ್ಟೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ನಾಗನಾಯ್ಕನಕಟ್ಟೆ ಗ್ರಾಮದ ಮನೋಜ್ ನಾಯ್ಕ (23) ಮೃತ ದುರ್ದೈವಿ.

ಹೊಸದುರ್ಗ:ಯುವತಿಯೊರ್ವಳನ್ನು ಪದೇ ಪದೇ ಮಾತನಾಡಿಸುತ್ತಿದ್ದ ಎಂಬ ಕಾರಣಕ್ಕೆ ಯುವತಿಯ ಮನೆಯವರು ಯುವಕನಿಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ ಘಟನೆ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಾಯ್ಕನಕಟ್ಟೆ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ನಾಗನಾಯ್ಕನಕಟ್ಟೆ ಗ್ರಾಮದ ಮನೋಜ್ ನಾಯ್ಕ (23) ಮೃತ ದುರ್ದೈವಿ.

ಘಟನೆ ವಿವರ :

ನಾಗನಾಯ್ಕನಕಟ್ಟೆ ಗ್ರಾಮದ ಮನೋಜ್ ನಾಯ್ಕ ಎಂಬಾತ ಅದೇ ಗ್ರಾಮದ ಯುವತಿ ರಂಜಿತಾಬಾಯಿ ಎಂಬಾಕೆಯನ್ನು ಹಲವು ದಿನಗಳಿಂದ ಮಾತನಾಡಿಸುತ್ತಿದ್ದ. ಇದನ್ನು ಗಮನಿಸಿದ್ದ ಯುವತಿಯ ಭಾವ ರಘು ನಾಯ್ಕ ಸೇರಿದಂತೆ ಯುವತಿಯ ಪೋಷಕರು ಯುವಕನಿಗೆ ಮಾತನಾಡಿಸದಂತೆ ತಿಳಿಹೇಳಿ ಎಚ್ಚರಿಕೆ ನೀಡಿದ್ದರು.

ಸುಮ್ಮನಿರದ ಮನೋಜ್ ನಾಯ್ಕ ಪುನಃ ಯುವತಿಯನ್ನು ಮಾತನಾಡಿಸುತ್ತಿದ್ದನ್ನು ಕಂಡಿದ್ದ ಪೋಷಕರು ಗುರುವಾರ ರಾತ್ರಿ ತಮ್ಮ ಮನೆಯ ಮುಂದೆ ಹೋಗುತ್ತಿದ್ದ ಮನೋಜ್ ನಾಯ್ಕನನ್ನು ಮನೆಯೊಳಗೆ ಕರೆದು ಗಲಾಟೆ ಮಾಡಿದ್ದಾರೆ. ಗಲಾಟೆಯಲ್ಲಿ ಮಾತಿನ ಚಕಮಕಿ ನಡೆದು ಕುಪಿತನಾದ ಯುವತಿಯ ಬಾವ ರಘುನಾಯ್ಕ ಚಾಕುವಿನಿಂದ ಮನೋಜ್ ನಾಯ್ಕನ ಬಲಗಾಲ ತೊಡೆಗೆ ಚಾಕುವಿನಿಂದ ತಿವಿದು ಗಾಯಗೊಳಿಸಿದ್ದಾನೆ.

ಮನೆಯೊಳಗೆ ಗಲಾಟೆ ಆಗುತ್ತಿದ್ದನ್ನು ಕಂಡ ಮನೋಜ್ ನಾಯ್ಕನ ಕಡೆಯವರು ಮನೆಯೊಳಗೆ ಹೋಗಿ ನೋಡಿದಾಗ ಯುವತಿಯ ಪೋಷಕರು ಹಲ್ಲೆ ಮಾಡುತ್ತಿರುವುದನ್ನು ಕಂಡು ಬಿಡಿಸಲು ಹೋದಾಗ ಸುರೇಶ ನಾಯ್ಕ ಕೂಡ ಗಾಯಗೊಂಡಿದ್ದಾನೆ. ಮನೋಜ್ ನಾಯ್ಕನ ಕಡೆಯವರು ಮನೆ ಒಳಗೆ ಬರುತ್ತಿದ್ದಂತೆ ರಘುನಾಯ್ಕ ಅಲ್ಲಿಂದ ಪರಾರಿಯಾಗಿದ್ದಾನೆ.

ತೀವ್ರವಾಗಿ ಗಾಯಗೊಂಡಿದ್ದ ಮನೋಜ್ ನಾಯಕನನ್ನು ಶ್ರೀರಾಂಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ತೀವ್ರವಾದ ರಕ್ತಸ್ರಾವದಿಂದ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಗಾಯಗೊಂಡ ಸುರೇಶ್ ನಾಯ್ಕನಿಗೆ ಸಮೀಪದ ಕೆ.ಕೆ.ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಘಟನಾ ಸ್ಥಳಕ್ಕೆ ಎಸ್‌ಪಿ ಧರ್ಮೇಂದ್ರ ಕುಮಾರ್ ಮೀನಾ, ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್‌ಪಿ ಚೈತ್ರ, ಶ್ರೀರಾಂಪುರ ಠಾಣೆ ಪಿ ಐ ಮಧು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಸಂಬಂಧ ರಘು ನಾಯ್ಕ, ರಮೇಶ್ ನಾಯ್ಕ, ರವಿ ನಾಯ್ಕ, ಇಂದಿರಾ ಬಾಯಿ, ಶಿವನಾಯ್ಕ, ಸಾವಿತ್ರಿಬಾಯಿ ಎಂಬುವರ ಮೇಲೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ