ಬೀದರ್: ಕಳೆದ ಒಂದು ದಶಕದಿಂದ ಕ್ಷೇತ್ರದ ಪ್ರತಿಯೊಬ್ಬ ಜನರ ನಾಡಿ ಮಿಡಿತ ಅರಿತಿದ್ದೇನೆ. ನನ್ನ ಕಳಂಕರಹಿತ ಆಡಳಿತ, ಪ್ರಾಮಾಣಿಕತೆಗೆ ಅಬ್ ಕೀ ಬಾರ್ ದೋ ಲಾಖ್ ಪಾರ್ ಎಂಬ ಘೋಷಣೆಯೊಂದಿಗೆ ಬರುವ ಲೋಕಸಭೆ ಚುನಾವಣೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಮತಗಳ ಗೆಲವು ಸಿಗಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸಚಿವ ಭಗವಂತ ಖೂಬಾ ವ್ಯಕ್ತಪಡಿಸಿದರು.
ಅವರು ಗಣೇಶ ಮೈದಾನದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾನು ಪ್ರಧಾನಿ ಮೋದಿ ಅವರ ಅಣತಿಯಂತೆ ಭ್ರಷ್ಟಾಚಾರ ಮುಕ್ತ ಕೆಲಸ ಮಾಡುತಿದ್ದೇನೆ. ಪ್ರಥಮ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ನವರೇ ನನ್ನ ಕೈ ಹಿಡಿದು ರಾಜಕೀಯದಲ್ಲಿ ಮುಂದೆ ತಂದಿದ್ದಾರೆ ಎಂದರು.ಕಳೆದ 75 ವರ್ಷದಲ್ಲಿ ಆಗದ ಅಭಿವೃದ್ಧಿ ಮಾಡಿದ್ದೇನೆ, ನಾನು ನನ್ನ ಕ್ಷೇತ್ರ ಬಿಟ್ಟು ಹೊರಗೆ ಹೊಗಿಲ್ಲ ದಿನ ನಿತ್ಯ ಪಕ್ಷದ ಕಾರ್ಯಕರ್ತರೊಂದಿಗೆ ಇರುತ್ತೇನೆ. ಇಲ್ಲಿ ಸೇರಿರುವ ಸಾವಿರಾರು ಕಾರ್ಯಕರ್ತರು ಯಾವೊಬ್ಬ ವ್ಯಕ್ತಿಯ ಕಾರ್ಯಕರ್ತರಲ್ಲ ಇವರೆಲ್ಲ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಎಂದರು.
ಔರಾದ್ ತಾಲೂಕಿನಲ್ಲಿ ಸಿಪೆಟ್ ಕಾಲೇಜು, ₹13ಸಾವಿರ ಕೋಟಿ ಹೂಡಿಕೆಯ ಸೋಲಾರ್ ಪಾರ್ಕ, ಉದ್ಯೋಗ ಅವಕಾಶ ಸೃಷ್ಟಿಸಿಕೊಟ್ಟಿದ್ದೇನೆ. ಇದನ್ನು ಕಾಂಗ್ರೆಸ್‌ನವರೂ ಗಮನಿಸಬೇಕು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರೂ ನೋಡಿಕೊಳ್ಳಬೇಕು ಎಂದು ಟಾಂಗ್ ನೀಡಿದರುಯಾವುದೇ ಗೊಂದಲಗಳಿಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅವಕಾಶ ಕೊಡಲ್ಲ ಎಂಬ ವಿಶ್ವಾಸವಿದೆ. ಎಲ್ಲವನ್ನೂ ಗಮನಿಸಿ, ಯಾರು ಏನೇ ಹೇಳಿದರೂ ಅದನ್ನು ಪರಿಶೀಲಿಸುತ್ತಾರೆ. ಸಮಯ ಬಂದಾಗ ಅದನ್ನು ಸರಿಪಡಿಸಲು ಯಾವ ರೀತಿ ಇಂಜಕ್ಷನ್ ಕೊಡಬೇಕು ಅದನ್ನು ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ನುಡಿದರು.
ಇದಕ್ಕೂ ಮುನ್ನ ಶಾಸಕರು ಹಾಗೂ ರಾಜ್ಯ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ, ಪಶ್ಕ್ಷದ ವಿಭಾಗೀಯ ಪ್ರಮುಖರಾದ ಈಶ್ವರಸಿಂಗ್ ಠಾಕೂರ್ ಮಾತನಾಡಿದರು.