ಪ್ರಾಧಿಕಾರ-ಅಕಾಡೆಮಿ ಅಧ್ಯಕ್ಷರು, ಸದಸ್ಯರ ನೇಮಕ

KannadaprabhaNewsNetwork | Updated : Mar 17 2024, 02:48 PM IST

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ 4 ಪ್ರಾಧಿಕಾರಗಳು, 14 ಅಕಾಡೆಮಿಗಳು ಮತ್ತು ರಂಗ ಸಮಾಜಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ 4 ಪ್ರಾಧಿಕಾರಗಳು, 14 ಅಕಾಡೆಮಿಗಳು ಮತ್ತು ರಂಗ ಸಮಾಜಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಕಳೆದ ನವೆಂಬರ್- ಡಿಸೆಂಬರ್‌ ಅವಧಿಯಲ್ಲಿ ಎಲ್ಲ ಪ್ರಾಧಿಕಾರ ಮತ್ತು ಅಕಾಡೆಮಿಗಳ ಅಧ್ಯಕ್ಷರು ಸದಸ್ಯರ ಅಧಿಕಾರವಧಿ ಪೂರ್ಣಗೊಂಡಿತ್ತು. ಆ ನಂತರ ಮೇ ತಿಂಗಳಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದರೂ ಈವರೆಗೂ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಿರಲಿಲ್ಲ. 

ಸುಮಾರು 15 ತಿಂಗಳುಗಳಿಂದ ಈ ಹುದ್ದೆಗಳು ಖಾಲಿ ಉಳಿದಿದ್ದರು. ಇದೀಗ ಲೋಕಸಭೆ ಚುನಾವಣೆ ಘೋಷಣೆ ಬೆನ್ನಲ್ಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗುವುದನ್ನು ಅರಿತ ರಾಜ್ಯ ಸರ್ಕಾರ ಶನಿವಾರ ಮಧ್ಯಾಹ್ನವೇ ಎಲ್ಲ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕಗೊಳಿಸಿ ಆದೇಶಿಸಿದೆ. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಅಧ್ಯಕ್ಷರಾಗಿ ಡಾ.ಪುರುಷೋತ್ತಮ ಬಿಳಿಮಲೆ (ನವದೆಹಲಿ), ಸದಸ್ಯರಾಗಿ ಪ್ರೊ.ರಾಮಚಂದ್ರಪ್ಪ, ಡಾ.ಪಿ.ವಿ.ನಿರಂಜನಾರಾಧ್ಯ, ಟಿ.ಗುರುರಾಜ್‌, ಡಾ.ರವಿಕುಮಾರ್‌ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್‌ ಖಾದರ್‌, ವಿರೂಪಣ್ಣ ಕಲ್ಲೂರು ನೇಮಕಗೊಂಡಿದ್ದಾರೆ. 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ: ಅಧ್ಯಕ್ಷರಾಗಿ ಡಾ.ಚನ್ನಪ್ಪ ಕಟ್ಟಿ(ವಿಜಯಪುರ), ಸದಸ್ಯರಾಗಿ ಡಾ.ಎಂ.ಎಸ್‌.ಶೇಖರ್‌, ವಿಜಯಲಕ್ಷ್ಮಿ ಕೌಟಗಿ, ನಾರಾಯಣ್‌ ಹೊಡಘಟ್ಟ, ಶಾಕಿರಾಬಾನು, ಡಾ.ಪಿ.ಭಾರತಿ ದೇವಿ, ಡಾ.ಎಸ್‌.ಗಂಗಾಧರಯ್ಯ, ಡಾ.ಕರಿಯಪ್ಪ ಮಾಳಗಿ, ಡಾ.ಚಿತ್ತಯ್ಯ ಪೂಜಾರ್‌, ಡಾ.ಜಾಜಿ ದೇವೇಂದ್ರಪ್ಪ ಅವರನ್ನು ನೇಮಿಸಲಾಗಿದೆ. 

ಕನ್ನಡ ಪುಸ್ತಕ ಪ್ರಾಧಿಕಾರ: ಅಧ್ಯಕ್ಷರಾಗಿ ಮಾನಸ (ಮೈಸೂರು), ಸದಸ್ಯರಾಗಿ ಡಾ.ಲಕ್ಷ್ಮಣ ಕೊಡಸೆ, ಶರಣಪ್ಪ ಬಸಪ್ಪ ಕೊಲ್ಕಾರ್‌, ಕುಶಾಲ ಬರಗೂರು, ಎಚ್‌.ಬಿ.ನೀರಗುಡಿ, ಅಕ್ಷತಾ ಹುಂಚದಕಟ್ಟೆ ನೇಮಕಗೊಂಡಿದ್ದಾರೆ. 

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ: ಅಧ್ಯಕ್ಷರಾಗಿ ಸೋಮಣ್ಣ ಬೇವಿನಮರದ(ಹಾವೇರಿ) ಅವರನ್ನು ಈ ಹಿಂದೆಯೇ ರಾಜ್ಯ ಸರ್ಕಾರ ನೇಮಕಗೊಳಿಸಿತ್ತು. ಈಗ ಸದಸ್ಯರನ್ನಾಗಿ ಅಶೋಕ್‌ ಚಂದರಗಿ, ಡಾ.ಎಂ.ಎಸ್‌.ಮದಬಾವಿ, ಜಾಣಗೆರೆ ವೆಂಕಟರಾಮಯ್ಯ, ಭಗತರಾಜ್‌, ಎ.ಆರ್‌.ಸುಬ್ಬಯ್ಯಕಟ್ಟೆ, ಡಾ.ಸಂಜೀವ ಕುಮಾರ್‌ ಅತಿವಾಡೆ, ಶಿವರೆಡ್ಡಿ ಹಡೇದ್ ಅವರನ್ನು ನೇಮಿಸಲಾಗಿದೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಡಾ.ಎಲ್‌.ಎನ್‌.ಮುಕುಂದರಾಜ್‌ (ತುಮಕೂರು), ಸದಸ್ಯರಾಗಿ ಸಿದ್ದಪ್ಪ ಹೊನೆಕಲ್‌, ಅರ್ಜುನ ಗೋಳಸಂಗಿ, ಡಾ.ಎಚ್‌.ಜಯಪ್ರಕಾಶ್‌ಶೆಟ್ಟಿ, ಡಾ.ಚಂದ್ರಕಲಾ ಬಿದರಿ, ಡಾ.ಚಿಲಕ್‌ರಾಗಿ, ಡಾ.ಗಣೇಶ್‌, ಸುಮಾ ಸತೀಶ್‌, ಎಚ್‌.ಆರ್‌.ಸುಜಾತ, ಅಕ್ಕೈಪದ್ಮಶಾಲಿ, ಪಿ.ಚಂದ್ರಿಕಾ, ಪ್ರಕಾಶ್‌ರಾಜ್‌ ಮೇಹು, ಮಲ್ಲಿಕಾಜಉ್ನ ಮಾನ್ಪಡೆ, ಚಂದ್ರಕಿರಣ, ಮಹದೇವ ಬಸರಕೋಡ ಅವರು ನೇಮಕಗೊಂಡಿದ್ದಾರೆ. 

ಕರ್ನಾಟಕ ನಾಟಕ ಅಕಾಡೆಮಿ: ಅಧ್ಯಕ್ಷರಾಗಿ ಕೆ.ವಿ.ನಾಗರಾಜಮೂರ್ತಿ (ಬೆಂಗಳೂರು ಗ್ರಾಮಾಂತರ) ನೇಮಕಗೊಂಡಿದ್ದಾರೆ. ಸದಸ್ಯರಾಗಿ ಕನ್ನಡಪ್ರಭ ಪತ್ರಿಕೆ ಹಿರಿಯ ವರದಿಗಾರ ಉಗಮ ಶ್ರೀನಿವಾಸ್‌ (ತುಮಕೂರು) ಸೇರಿದಂತೆ ಜೇವರ್ಗಿ ರಾಜಣ್ಣ, ಜಿಪಿಒ ಚಂದ್ರು, ಅಮಾಸ, ಮಾಲೂರು ವಿಜಿ, ಷಾಹಿ ಜಾಹಿದಾ, ಎಸ್‌.ರಾಮು, ಜ್ಯೋತಿ ಮಂಗಳೂರು, ಗೀತಾ ಸಿದ್ದಿ, ಬಾಬು ವಿ.ಕುಂಬಾರ, ಗಾಯತ್ರಿ ಹಡಪದ, ಲವಕುಮಾರ, ಕೆ.ಎ.ಬನಟ್ಟಿ, ಬಾಬಾ ಸಾಹೇಬ್‌ ಕಾಂಬ್ಲೆ, ಚಾಂದ್‌ಪಾಷಾ ಬಾಬು ಸಾಬ್‌ ಕಿಲ್ಲೇದಾರ್‌ ಅವರನ್ನು ನೇಮಿಸಲಾಗಿದೆ. 

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ: ಅಧ್ಯಕ್ಷರಾಗಿ ಡಾ.ಕೃಪಾ ಫಡಕಿ(ಮೈಸೂರು), ಸದಸ್ಯರಾಗಿ ವಿದ್ವಾನ್‌ ವೆಂಕಟರಾಘವನ್‌, ಖಾಸಿಂ ಮಲ್ಲಿಗೆಮಡು, ಬಿ.ವಿ.ಶ್ರೀನಿವಾಸ್‌, ರಮೇಶ್‌ ಗಬ್ಬೂರು, ಸತ್ಯವತಿ ರಾಮನಾಥ್‌, ಸವಿತಾ ಅಮರೇಶ್‌ ನುಗಡೋಣಿ, ಹರಿದೋಗ್ರಾ, ಬಸಪ್ಪ ಎಚ್‌.ಭಜಂತ್ರಿ, ಡಾ.ಗೀತಾ, ಉಷಾ, ನಿರ್ಮಲಾ, ಶಂಕರ್‌ ಹೂಗಾರ, ಡಾ.ಮೃತ್ಯುಂಜಯ ದೊಡ್ಡವಾಡ, ಹುಸೇನ್‌ಸಾಬ್‌, ಪದ ದೇವರಾಜ್‌ ಅವರು ನೇಮಕಗೊಂಡಿದ್ದಾರೆ. 

ಕರ್ನಾಟಕ ಶಿಲ್ಪಕಲಾ ಅಕಾಡೆಮಿ: ಅಧ್ಯಕ್ಷರಾಗಿ ಎಂ.ಸಿ.ರಮೇಶ್‌ (ರಾಮನಗರ), ರಾಮಮೂರ್ತಿ, ಬಸಮ್ಮ ನರಗುಂದ, ಹರೀಶ್‌ ಮಾಳಪ್ಪನವರ್‌, ಬಿ.ಸಿ.ಶಿವಕುಮಾರ್‌, ನಾಗರಾಜ್‌ ಶಿಲ್ಪಿ, ವಿಶಾಲ್‌, ಹನುಮಂತ ಬಾಡದ, ಗೋಪಾಲ ಕಮ್ಮಾರ, ಭಾರತಿ ಸಂಕಣ್ಣಾಚಾರ್‌, ವೈ.ಕುಮಾರ್‌ ಅವರನ್ನು ನೇಮಿಸಲಾಗಿದೆ. 

ಕರ್ನಾಟಕ ಲಲಿತಕಲಾ ಅಕಾಡೆಮಿ: ಅಧ್ಯಕ್ಷರಾಗಿ ಡಾ.ಪ.ಸ.ಕುಮಾರ್‌(ಬೆಂಗಳೂರು), ಸದಸ್ಯರಾಗಿ ಬಸವರಾಜ್‌ ಎಸ್‌.ಜಾನೆ, ರಾ.ಸೂರಿ, ಕರಿಯಪ್ಪ ಹಂಚಿನಮನಿ, ಮನುಚಕ್ರವರ್ತಿ, ಪಿ.ಮಹಮ್ಮದ್‌, ಶಾಂತಾಕೊಳ್ಳಿ, ಅನಿತಾ ನಟರಾಜ್‌ ಹುಳಿಯಾರ್‌, ಚಂದ್ರಕಾಂತ್‌ ಸರೋದೆ, ಬಸವರಾಜ ಕಲೆಗಾರ, ಆಶಾರಾಣಿ, ಮಹದೇವ ಶೆಟ್ಟಿ, ಫಾತಿಮಾ, ಆರ್‌.ಶಂಕರ್‌, ರಾಜೇಶ್ವರಿ ಮೋಪಗಾರ, ವೆಂಕಟೇಶ್‌ ಬಡಿಗೇರ ನೇಮಕಗೊಂಡಿದ್ಧಾರೆ. 

ಕರ್ನಾಟಕ ಯಕ್ಷಗಾನ ಅಕಾಡೆಮಿ: ಅಧ್ಯಕ್ಷರಾಗಿ ತಲ್ಲೂರ್‌ ಶಿವರಾಮಶೆಟ್ಟಿ(ಉಡುಪಿ), ಸದಸ್ಯರಾಗಿ ಎಚ್‌.ರಾಘವ, ಕೃಷ್ಣಪ್ಪ ಪೂಜಾರಿ, ಗುರುರಾಜ್‌ಭಟ್‌, ವಿನಯಕುಮಾರ್‌ ಶೆಟ್ಟಿ, ವಿಜಯಕುಮಾರ್‌ ಶೆಟ್ಟಿ, ಮೋಹನ್‌ ಕೊಪ್ಪಾಳ್‌, ಸತೀಶ್‌ ಅಡ್ಡಪ್ಪ ಸಂಕಬೈಲ್‌, ರಾಜೇಶ್‌ ಕಳೈ, ಪಿ.ದಯಾನಂದ, ಜಿ.ವಿ.ಎಸ್‌.ಉಳ್ಳಾಲ್‌ ಅವರನ್ನು ನೇಮಿಸಲಾಗಿದೆ.

ಕರ್ನಾಟಕ ಜಾನಪದ ಅಕಾಡೆಮಿ: ಚಿಕ್ಕಬಳ್ಳಾಪುರದ ಶಿವಪ್ರಸಾದ್‌ ಗೊಲ್ಲಹಳ್ಳಿ (ಅಧ್ಯಕ್ಷ) ಮತ್ತು ಸದಸ್ಯರಾಗಿ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಉಮೇಶ್‌ ,ಡಾ.ಜಮೀರುಲ್ಲ ಷರೀಫ್‌, ಮಂಜುನಾಥ್‌ ರಾಮಣ್ಣ, ಸಂಕರಣ್ಣ ಸಂಗಣ್ಣನವರ್‌, ರಂಗಪ್ಪ ಮಾಸ್ತರ, ಗುರುರಾಜ್‌, ಡಾ.ಕೆಂಪಮ್ಮ, ಡಾ.ಎಂ.ಎಂ.ಪಡಶೆಟ್ಟಿ, ದೇವಾನಂದ ವರಪ್ರಸಾದ್‌, ನಿಂಗಣ್ಣ ಮುದೆನೂರು, ಕೆಂಕೆರೆ ಮಲ್ಲಿಕಾರ್ಜುನ, ಜೀವನ್‌ ಸಾಬ್‌ ವಾಲೀಕಾರ್‌, ಶಿವಮೂರ್ತಿ ತನಿಖೆದಾರ್‌, ಮೆಹಬೂಬ್‌ ಸಾಬ್‌ ಕಿಲ್ಲೇದಾರ್‌ ಅವರನ್ನು ನೇಮಕ ಮಾಡಲಾಗಿದೆ. 

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ತಾರಾನಾಥ್‌ ಗಟ್ಟಿ ಕಾಪಿಕಾಡ್‌ (ದಕ್ಷಿಣ ಕನ್ನಡ), ಸದಸ್ಯರಾಗಿ ಪೃಥ್ವಿರಾಜ್‌, ಕುಂಬ್ರ ದುರ್ಗಾಪ್ರಸಾದ್‌ ರೈ, ಮೋಹನ್‌ದಾಸ್‌ ಕೊಟ್ಟಾರಿ, ಅಕ್ಷಯ್‌ ಆರ್‌.ಶೆಟ್ಟಿ, ಶೈಲೇಶ್‌, ಕಿಶೋರ್‌, ಬೂಬ ಪೂಜಾರಿ, ರೋಹಿತಾಶ್ವ ಯು ಕಾಪಿಕಾಡ್‌, ನಾಗೇಶ್‌ ಕುಮಾರ್‌ ಉದ್ಯಾವರ, ಸಂತೋಷ್ ಶೆಟ್ಟಿ ಅವರನ್ನು ನೇಮಿಸಲಾಗಿದೆ. 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ: ದಕ್ಷಿಣ ಕನ್ನಡದ ಜೊಕಿಂ ಸ್ಟ್ಯಾನ್ಲಿ ಅಲ್ವಾರಿಸ್‌ (ಅಧ್ಯಕ್ಷ) ಮತ್ತು ಎಸ್‌.ಜಿ.ಪ್ರಕಾಶ್‌ ಮಾಡ್ತಾ, ರೊನಾಲ್ಡ್‌ ಕ್ರಾಸ್ತಾ, ಡಾ.ವಿಜಯ ಲಕ್ಷ್ಮಿನಾಯಕ್‌, ನವೀನ್‌ ಲೋಬೋ, ಸಪ್ನಾ ಮೇ ಕ್ರಾಸ್ತಾ, ಸಮರ್ಥ ಭಟ್‌, ಸುನಿಲ್‌ ಸಿದ್ದಿ, ಜೇಮ್ಸ್‌ ಲೋಪಿಸ್‌, ದಯಾನಂದ ಮುಡ್ಕೇಕರ್‌, ಪ್ರಮೋದ್‌ ಪಿಂಟೋ ಅವರನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಯು.ಎಚ್‌.ಉಮರ್‌(ದಕ್ಷಿಣ ಕನ್ನಡ), ಸದಸ್ಯರಾಗಿ ಬಿ.ಎಸ್‌.ಮೊಹಮ್ಮದ್‌, ಹಫ್ನಾಬಾನು, ಸಾರಾ ಅಲಿ ಪರ್ಲಡ, ಶಮೀರಾ ಜಹಾನ್‌, ಯು.ಎಚ್‌.ಖಾಲಿದ್‌ ಉಜಿರ್‌, ತಾಜುದ್ದೀನ್‌, ಅಬೂಬಕರ್‌ ಅನಿಲಕಟ್ಟೆ, ಅಬ್ದುಲ್‌ ಶರೀಫ್‌, ಅಮೀದ್‌ ಹಸನ್‌ ಮಾಡೂರು, ಶಮೀರ್‌ ಮುಲ್ಕಿ ಅವರನ್ನು ನೇಮಿಸಲಾಗಿದೆ. 

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಸದಾನಂದ ಮಾವಜಿ(ದಕ್ಷಿಣ ಕನ್ನಡ), ಸದಸ್ಯರಾಗಿ ಚಂದ್ರಶೇಖರ್‌ ಪೇರಾಲು, ತೇಜುಕುಮಾರ್‌ ಕುಡೆಕಲ್ಲು, ಚಂದ್ರಾವತಿ ಬಡ್ಕಡ್ಕ, ಲತಾ ಕುದ್ಪಾಜೆ, ಪಿ.ಎಸ್‌.ಕಾರ್ಯಪ್ಪ, ಡಾ.ಎನ್‌.ಎ.ಜ್ಞಾನೇಶ್‌ ಅವರು ನೇಮಕಗೊಂಡಿದ್ದಾರೆ. 

ಕರ್ನಾಟಕ ಬಯಲಾಟ ಅಕಾಡೆಮಿ: ಬಳ್ಳಾರಿಯ ಪ್ರೊ.ದುರ್ಗಾದಾಸ್‌ (ಅಧ್ಯಕ್ಷ) ಮತ್ತು ಸದಸ್ಯರಾಗಿ ಬಿ.ಪರಶುರಾಮ್‌, ಅನಸೂಯ ವಡ್ಡರ್‌, ಚಂದ್ರುಕಾಳೇನಹಳ್ಳಿ, ಭೀಮಪ್ಪ ರಾಮಪ್ಪ ಹುದ್ದಾರ್‌, ಮಲ್ಲಮ್ಮ ಸಾಲಹಳ್ಳಿ, ಮಾರನಾಯಕ, ಲಿಂಗಪ್ಪ ತೋರಣಗಟ್ಟಿ, ಯಲ್ಲಪ್ಪ ಮಾಸ್ತರ ನವಲಕಲ್‌, ಸುಜಾತ ಹಳಿಹಾಳ, ಡಿ.ಪಾಲಾಕ್ಷಯ್ಯ ಅವರನ್ನು ನೇಮಿಸಲಾಗಿದೆ. 

ಕರ್ನಾಟಕ ಬಂಜಾರ ಅಕಾಡೆಮಿ: ಅಧ್ಯಕ್ಷರಾಗಿ ಡಾ.ಎ.ಆರ್‌.ಗೋವಿಂದಸ್ವಾಮಿ(ರಾಮನಗರ), ಸದಸ್ಯರಾಗಿ ಶಾಂತಾನಾಯಕ್‌ ಶಿರಗಾನಹಳ್ಳಿ, ಭಾರತಿ ಬಾಯಿ ಕೂಬಾ, ಪಳನಿಸ್ವಾಮಿ ಜಾಗೇರಿ, ಆರ್‌.ಬಿ.ನಾಯಕ್, ಶೇಖರಪ್ಪ ಜೀವಲಪ್ಪ ಲಮಾಣಿ, ಡಾ.ರವಿನಾಯ್ಕ, ಸಾವಿತ್ರಿಬಾಯಿ, ಅಣ್ಣಾರಾಯ್‌ ರಾಠೋಡ್‌, ಸುರೇಖಾ ಲಮಾಣಿ, ತಾರೊನಾಥ್‌ ರಾಠೋಡ್‌ ಅವರನ್ನು ನೇಮಕ ಮಾಡಲಾಗಿದೆ. 

ರಂಗ ಸಮಾಜ: ಡಾ.ರಾಮಕೃಷ್ಣಯ್ಯ, ಡಾ.ರಾಜಪ್ಪ ದಳವಾಯಿ, ಲಕ್ಷ್ಮಿ ಚಂದ್ರಶೇಖರ್, ಶಶಿಧರ್‌ ಬಾರಿಘಾಟ್‌, ಡಿಂಗ್ರಿ ನರೇಶ್‌, ಮಹಂತೇಶ್‌ ಗಜೇಂದ್ರಘಟ, ಸುರೇಶ್‌ಬಾಬು ನೇಮಕಗೊಂಡಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ: ಅಧ್ಯಕ್ಷರಾಗಿ ಅಜ್ಜಿನಕೊಂಡ ಮಹೇಶ ನಾಚ್ಚಯ್ಯ ಅವರನ್ನು ನೇಮಕ ಮಾಡಲಾಗಿದೆ.

Share this article