ಕಲ್ಬುರ್ಗಿ ದೂರದರ್ಶನ ಕೇಂದ್ರದ ಅಭಿವೃದ್ಧಿಗೆ ಕ್ರಮ: ಸಂಸದ ಜಾಧವ್‌

KannadaprabhaNewsNetwork |  
Published : Mar 04, 2024, 01:21 AM IST
ಕಲಬುರಗಿ ಇಲ್ಲಿನ ದೂರದರ್ಶನ ಕೇಂದ್ರದ ಅಭಿವೃದ್ಧಿಗೆ ಸಂಬಂಧಿಸಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವರಾದ ಅನುರಾಗ ಸಿಂಗ್ ಠಾಕೂರ್ ಅವರ ಜೊತೆ ಈಗಾಗಲೇ ಮಾತುಕತೆ ನಡೆದಿದ್ದು ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧ ವ್ ಹೇಳಿದರು. | Kannada Prabha

ಸಾರಾಂಶ

ಕಲಬುರಗಿ ದೂರದರ್ಶನ ಕೇಂದ್ರದ ಅಭಿವೃದ್ಧಿಗೆ ಸಂಬಂಧಿಸಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ ಸಿಂಗ್ ಠಾಕೂರ್ ಅವರ ಜೊತೆ ಈಗಾಗಲೇ ಮಾತುಕತೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ದೂರದರ್ಶನ ಕೇಂದ್ರದ ಅಭಿವೃದ್ಧಿಗೆ ಸಂಬಂಧಿಸಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಅನುರಾಗ ಸಿಂಗ್ ಠಾಕೂರ್ ಅವರ ಜೊತೆ ಈಗಾಗಲೇ ಮಾತುಕತೆ ನಡೆದಿದ್ದು ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಹೇಳಿದರು.

ದೂರದರ್ಶನ ಕೇಂದ್ರಕ್ಕೆ ಇಂದು ಭೇಟಿ ನೀಡಿ ಕಳೆದ ಐದು ವರ್ಷಗಳಲ್ಲಿ ಸಂಸದರು ಕೈಗೊಂಡ ಅಭಿವೃದ್ಧಿ ಕೆಲಸಗಳ ಕುರಿತಾದ ವಿಶೇಷ ಸಂದರ್ಶನದ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ವಿಷಯ ತಿಳಿಸಿದರು. ಕಲ್ಬುರ್ಗಿ ದೂರದರ್ಶನ ಕೇಂದ್ರವನ್ನು ಮುಚ್ಚಲಾಗಿದೆ ಎಂಬ ಸುಳ್ಳು ವದಂತಿಯನ್ನು ನಂಬಬೇಡಿ. ಇಲ್ಲಿಗೆ ಸಿಬ್ಬಂದಿಗಳು ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸಚಿವರ ಜೊತೆ ಖುದ್ದಾಗಿ ಮಾತನಾಡಿದ್ದು ಯಾವುದೇ ಕಾರಣಕ್ಕೂ ಇಲ್ಲಿನ ಕಾರ್ಯಕ್ರಮಗಳು ರದ್ದಾಗುವುದಿಲ್ಲ. ಈ ಭಾಗದ ಕಲೆ, ಸಂಸ್ಕೃತಿ ಹಾಗೂ ಅಭಿವೃದ್ಧಿ ಕೆಲಸಗಳ ಕುರಿತ ಕಾರ್ಯಕ್ರಮ ಸಿದ್ಧಪಡಿಸಲು ಎಲ್ಲ ನೆರವನ್ನು ನೀಡಲು ಕೇಂದ್ರ ಸರಕಾರವು ಬದ್ಧ ವಾಗಿದೆ. ದೆಹಲಿಯಲ್ಲಿ ಮತ್ತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಭಿವೃದ್ಧಿಯ ಬಗ್ಗೆ ಗಮನ ಸೆಳೆಯಲಾಗುವುದು ಎಂದರು.

ಪ್ರತಿ ಶನಿವಾರ ಮಧ್ಯಾಹ್ನ 2.30ಕ್ಕೆ ಕಲ್ಬುರ್ಗಿ ದೂರದರ್ಶನ ಕೇಂದ್ರದ ಕಾರ್ಯಕ್ರಮವು ಚಂದನ ವಾಹಿನಿಯಲ್ಲಿ ಸುಮಾರು 55 ರಾಷ್ಟ್ರಗಳಲ್ಲಿ ನಿರಂತರವಾಗಿ ಬಿತ್ತರಗೊಳ್ಳುತ್ತಿದ್ದು ಕಳೆದ 9 ತಿಂಗಳಿನಿಂದ ಅತ್ಯುತ್ತಮ ಕಾರ್ಯಕ್ರಮಗಳು ಮೂಡಿ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರಲ್ಲದೆ ಇಂದು ತಾನು ಕೂಡ ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಖುಷಿಕೊಟ್ಟಿದೆ.ಎಲ್ಲರೂ ದೂರದರ್ಶನ ವಾಹಿನಿ ವೀಕ್ಷಿಸಬೇಕು ಎಂದರು.

ಈ ಸಂದರ್ಭದಲ್ಲಿ ದೂರದರ್ಶನ ಕೇಂದ್ರದ ಸಿಬ್ಬಂದಿಗಳ ಕೊರತೆ ಹಾಗೂ ತುರ್ತಾಗಿ ಆಗಬೇಕಾದ ಕೆಲಸಗಳ ಬಗ್ಗೆ ಲೋಕಸಭಾ ಸದಸ್ಯರಿಗೆ ಕೇಂದ್ರದ ಉಪ ನಿರ್ದೇಶಕ (ತಾಂತ್ರಿಕ) ಸಂಜೀವ್ ಮಿರ್ಜಿ ಹಾಗೂ ಕಾರ್ಯಕ್ರಮ ಮುಖ್ಯಸ್ಥರಾದ ಸೋಮಶೇಖರ ಎಸ್ ರುಳಿ ಮನವಿ ಸಮರ್ಪಿಸಿ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಆಗ್ರಹಿಸಿದರು. ಪ್ರಸಾರ ನಿರ್ವಾಹಕರಾದ ಸಂಗಮೇಶ್ ಹಾಗೂ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಕರಾದ ಡಾ. ಸದಾನಂದ ಪೆರ್ಲ ಜೊತೆಗಿದ್ದರು. ಆರ್ ಎ .ಜಮಾದಾರ್, ಹನುಮಂತ ಮಡಪೆ, ಮಹಮ್ಮದ್ ಅಸ್ಲಂ ಖಾಸ್ ದಾರ್, ಸಿದ್ದರಾಮ ಅಣಿ ಹೊಲ, ದಶರಥ ಎಂ ಮರತೂರ್ ಹಾಗೂ ರತ್ನಾಕರ್ ಕದಂ ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ