ನಟಿ ರಾಗಿಣಿಯಿಂದ ಗೋಲ್ಡ್ ಪ್ಯಾಲೇಸ್‌ಗೆ ಚಾಲನೆ

KannadaprabhaNewsNetwork |  
Published : Jun 03, 2024, 12:30 AM IST
2ಸಿಎಚ್‌ಎನ್‌53ಚಾಮರಾಜನಗರದ ಡೀವಿಯೇಷನ್‌ ರಸ್ತೆಯಲ್ಲಿ ನಿರ್ಮಿಸಿರುವ ವೇಣುಗೋಪಾಲ್‌ ಗೋಲ್ಟ್‌ ಪ್ಯಾಲೇಸ್‌ನ ಮೊದಲ ಬ್ಯಾಂಚ್‌ಗೆ ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ಅವರು ಟೇಪ್‌ ಕಟ್‌ ಮಾಡುವ ಮೂಲಕ ಅದ್ದೂರಿಯಾಗಿ ಚಾಲನೆ ನೀಡಿದರು. | Kannada Prabha

ಸಾರಾಂಶ

ವೇಣುಗೋಪಾಲ್‌ ಗೋಲ್ಡ್ ಪ್ಯಾಲೇಸ್‌ನ ಸುಂದರ ವಿನ್ಯಾಸವಿರುವ (ನಕ್ಲೆಸ್‌) ಕುತ್ತಿಗೆ ಸರವನ್ನು ನಟಿ ರಾಗಿಣಿ ಧರಿಸಿ ಪ್ರದರ್ಶನ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವೇಣುಗೋಪಾಲ್‌ ಗೋಲ್ಡ್ ಪ್ಯಾಲೇಸ್‌ ಮಳಿಗೆಗೆ ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ಭಾನುವಾರ ನಗರದಲ್ಲಿ ಚಾಲನೆ ನೀಡಿದರು.

ನಗರದ ಡೀವಿಯೇಷನ್‌ ರಸ್ತೆಯಲ್ಲಿ ನಿರ್ಮಿಸಿರುವ ವೇಣುಗೋಪಾಲ್‌ ಗೋಲ್ಡ್‌ ಪ್ಯಾಲೇಸ್‌ನ ಮೊದಲ ಬ್ರ್ಯಾಂಚ್‌ಗೆ ನಟಿ ರಾಗಿಣಿ ದ್ವಿವೇದಿ ದೀಪ ಹಚ್ಚಿ, ಟೇಪ್‌ ಕಟ್‌ ಮಾಡುವ ಮೂಲಕ ಅದ್ಧೂರಿಯಾಗಿ ಚಾಲನೆ ನೀಡಿದರು. ರಾಗಿಣಿ ದ್ವಿವೇದಿ ಅವರಿಗೆ ವೇಣುಗೋಪಾಲ್‌ ಗೋಲ್ಡ್‌ ಪ್ಯಾಲೇಸ್‌ನ ಸುಂದರ ವಿನ್ಯಾಸವಿರುವ (ನೆಕ್ಲೆಸ್‌) ಕುತ್ತಿಗೆ ಸರವನ್ನು ಧರಿಸುವ ಮೂಲಕ ಪ್ರದರ್ಶನ ನೀಡಿದರು. ಮಳಿಗೆಯಲ್ಲಿರುವ ಆಭರಣಗಳನ್ನು ವೀಕ್ಷಣೆ ಮಾಡಿದ ಅವರು ಆಭರಣಗಳ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ರಾಗಿಣಿ ದ್ವಿವೇದಿ, ಮಳಿಗೆ ಉದ್ಘಾಟನೆಗೆ ಆಗಮಿಸಿರುವುದು ನನಗೆ ತುಂಬ ಖುಷಿಯಾಗಿದೆ. ಚಾ.ನಗರದಲ್ಲಿ ಉತ್ತಮ ಮಳಿಗೆ ನಿರ್ಮಾಣವಾಗಿದ್ದು, ಜನರಿಗೆ ಆಭರಣಗಳ ಖರೀದಿಗೆ ದೊಡ್ಡ ಮಳಿಗೆ ಸಿಕ್ಕಂತಾಗಿದೆ. ಮಳಿಗೆಯಲ್ಲಿರುವ ಆಭರಣಗಳ ವಿನ್ಯಾಸವು ತುಂಬಾ ಚೆನ್ನಾಗಿದೆ ಎಂದರು.

ತಮಿಳು, ತೆಲುಗು, ಮಲಯಾಳಿ ಭಾಷೆಗಳಲ್ಲಿ ನಟನೆ ಮಾಡಿದ್ದೇನೆ. ಆದರೆ ಕನ್ನಡ ಭಾಷೆ ಮತ್ತು ಕರ್ನಾಟಕ ನನಗೆ ಮನೆಯಾಗಿದೆ. ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಿದರೂ ಕೂಡ ನನಗೆ ಕನ್ನಡ ಭಾಷೆ ಮತ್ತು ಕರ್ನಾಟಕವೇ ಇಷ್ಟ ಎಂದು ಕನ್ನಡ ಭಾಷೆ ಮತ್ತು ಕರ್ನಾಟಕದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಮುಂಬೈ ಆಲ್‌ ಇಂಡಿಯಾ ಜೆಮ್ಸ್‌ ಆ್ಯಂಡ್‌ ಜ್ಯೂವೆಲರಿ ಡೊಮೆಸ್ಟಿಕ್‌ ಕೌನ್ಸಿಲ್‌ ಅಧ್ಯಕ್ಷ ಸಯಂ ಮೆಹ್ರ, ಮುಂಬೈ ಇಂಡಿಯನ್‌ ಬುಲಿಯನ್‌ ಮತ್ತು ಜ್ಯೂವೆಲರ್ಸ್‌ ಅಸೋಸಿಯೇಶನ್‌ ಉಪಾಧ್ಯಕ್ಷ ಡಾ.ಚೇತನ್‌ ಕುಮಾರ್‌ ಮೆಹ್ತ, ಕರ್ನಾಟಕ ಸ್ಟೇಟ್‌ ಜ್ಯೂಯಲರ್ಸ್‌ ಫೆಡರೇಶನ್‌ ಅಧ್ಯಕ್ಷ ಶ್ರೀಕಾಂತ್‌ ಕರಿ, ವಿಧಾನ ಪರಿಷತ್ ಸದಸ್ಯ ಟಿ.ಎ ಶರವಣ, ವೇಣುಗೋಪಾಲ್ ಗೋಲ್ಡ್ ಪ್ಯಾಲೇಸ್‌ನ ಮಾಲೀಕ ಓ.ಎ. ವೇಣುಗೋಪಾಲ್, ಓ.ವಿ. ದಿವಾಕರ್, ಅದ್ವೈತ್ ಡಿ. ಓಲೇಟಿ, ಅನ್‌ಮೋಲ್ ಡಿ, ಓಲೇಟಿ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ
ಕಡಿಮೆ ಗುಣದ ಔಷಧಿ ಎರಡೇ ದಿನಕ್ಕೇ ಮಾರುಕಟ್ಟೆಯಿಂದ ವಾಪಸ್‌: ಸಚಿವ